Breaking News

ಪ್ರತ್ಯೇಕ ಪ್ರಕರಣ : ಕೊನೆಗೂ ಬಂಗಾರದ ಆಭರಣ ಪತ್ತೆ ಹಚ್ಚಿದ ಪೊಲೀಸರು!

Spread the love

ಪ್ರತ್ಯೇಕ ಪ್ರಕರಣ : ಕೊನೆಗೂ ಬಂಗಾರದ ಆಭರಣ ಪತ್ತೆ ಹಚ್ಚಿದ ಪೊಲೀಸರು!

ಯುವ ಭಾರತ ಸುದ್ದಿ ಬೆಳಗಾವಿ : ಹಿಂಡಲಗಾ ಗ್ರಾಮದ ಶಾಂತಾ ಬಸವರಾಜ ಪರಗೊನ್ನವರ ಸಾಃ ಹಿಂಡಲಗಾ ಕೇಂದ್ರ ಕಾರಾಗೃಹ ಇವರ ಬಂಗಾರ ಆಭರಣ ಕಳುವಾದ ಬಗ್ಗೆ ನೀಡಿದ ದೂರಿನಂತೆ ದಿನಾಂಕ .30 / 11 / 2022 ರಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು . ಹಿರಿಯ ಪೊಲೀಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಎಸ್.ವಿ. ಗಿರೀಶ , ಎಸಿಪಿ ಬೆಳಗಾವಿ ಗ್ರಾಮೀಣ ಉಪವಿಭಾಗರವರ ಮಾರ್ಗದರ್ಶನದಲ್ಲಿ ಶ್ರೀನಿವಾಸ ಹಾಂಡ , ಪಿಐ , ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಇವರ ನೇತೃತ್ವದಲ್ಲಿ ಎಲ್.ಎಸ್ . ಜೋಡಟ್ಟಿ ಪಿಎಸ್‌ಐ ( ಕಾ & ಸು ) ಮತ್ತು ಸಿಬ್ಬಂದಿ ತಂಡ ಆರೋಪಿತರ ಮಾಹಿತಿ ಕಲೆ ಹಾಕಿ ದಿನಾಂಕ : 09/12/2022 ರಂದು ಮಲ್ಲಸರ್ಜ ಗಂಗಪ್ಪಾ ಕೊಟಬಾಗಿ , ವಯಸ್ಸು 26 ವರ್ಷ , ಕಡಸಗಟ್ಟಿ ತಾಃ ಬೈಲಹೊಂಗಲ ಈತನನ್ನು ಬೈಲಹೊಂಗಲ ತಾಲೂಕಿನ ಕಡಸಗಟ್ಟಿ ಗ್ರಾಮದಲ್ಲಿ ಪತ್ತೆ ಮಾಡಿ ವಶಕ್ಕೆ ಪಡೆದುಕೊಳ್ಳಲಾಗಿದೆ . ಆತನನ್ನು ವಿಚಾರಣೆಗೊಳಪಡಿಸಿದಾಗ ಸದರಿಯವನು ಕಳ್ಳತನ ಮಾಡಿ , ಬಂಗಾರವನ್ನು ಕಿತ್ತೂರಿನ ಖಾಸಗಿ ಬ್ಯಾಂಕಿನಲ್ಲಿ ಅಡ ಇಟ್ಟಿರುವುದಾಗಿ ಒಪ್ಪಿಕೊಂಡಿದ್ದು , ಆರೋಪಿತನ ವಶದಿಂದ ಕಳ್ಳತನ ಮಾಡಿದ 46 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ . ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.

ಮಾಳಮಾರುತಿ ಪೊಲೀಸ್‌ ಕಾರ್ಯಾಚರಣೆ : 1,30,000 ರೂ.ಬಂಗಾರದ ಆಭರಣ ಪತ್ತೆ ದಿನಾಂಕ 01/12/2022 ರಂದು ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸುನೀಲ.ಬಿ.ಪಾಟೀಲ ಪಿಐ ಮಾಳಮಾರುತಿ ಪೊಲೀಸ ಠಾಣೆ ಬೆಳಗಾವಿ ಇವರ ನೇತೃತ್ವದ ತಂಡವು ಮಾಳಮಾರುತಿ ಪೊಲೀಸ ಠಾಣಾ ಹದ್ದಿಯಲ್ಲಿ ಸರಗಳ್ಳತನ ಮಾಡಿದ ಆರೋಪಿತನಾದ ರಾಜು ಯಲ್ಲಪ್ಪಾ ಆಲಟ್ಟಿ ( 20 ) ಸಾ || ವಂಟಮೂರಿ ಕಾಲನಿ ಜನತಾ ಪ್ಲಾಟ ಬೆಳಗಾವಿ ಈತನನ್ನು ಪತ್ತೆ ಮಾಡಿರುತ್ತಾರೆ. ಆತನಿಂದ ಸುಮಾರು 1,30,000 / – ರೂ ಕಿಮ್ಮತ್ತಿನ ಬಂಗಾರದ ಮಂಗಳಸೂತ್ರವನ್ನು ವಶಪಡಿಸಿಕೊಂಡು , ಆರೋಪಿತನಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಲಾಗಿರುತ್ತದೆ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

6 − 4 =