Breaking News

ಅಂಕಲಗಿಯಲ್ಲಿ ನಡೆಯುವ 7ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಿನಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ-ಸ್ವಾಗತ ಸಮಿತಿ ಅಧ್ಯಕ್ಷ ಭೀಮಗೌಡ ಪೋಲಿಸಗೌಡರ.!

Spread the love

ಅಂಕಲಗಿಯಲ್ಲಿ ನಡೆಯುವ 7ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಿನಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ-ಸ್ವಾಗತ ಸಮಿತಿ ಅಧ್ಯಕ್ಷ ಭೀಮಗೌಡ ಪೋಲಿಸಗೌಡರ.!


ಗೋಕಾಕ: ಗೋಕಾಕ ತಾಲೂಕ ೭ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾಲೂಕಿನ ಅಂಕಲಗಿ ಪಟ್ಟಣದಲ್ಲಿ ದಿ.೨೮ರಂದು ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದು ಕನ್ನಡ ಬಾಂಧವರು ಈ ಸಮ್ಮೇಳನದಲ್ಲಿ ಹೆಚ್ಚಿನಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಸ್ವಾಗತ ಸಮಿತಿ ಅಧ್ಯಕ್ಷ ಭೀಮಗೌಡ ಪೋಲಿಸಗೌಡರ ಹೇಳಿದರು.
ಅವರು, ಶನಿವಾರದಂದು ನಗರದ ರೋಟರಿ ರಕ್ತಭಂಡಾರದಲ್ಲಿ ಕರೇದ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡುತ್ತ ದಿ.28ರಂದು ೮ಗಂಟೆಗೆ ಸಮ್ಮೇಳನದ ರಾಷ್ಟçಧ್ವಜವನ್ನು ನಿವೃತ್ತ ಸೇನಾಧಿಕಾರಿ ಬಿ ಎಲ್ ಪರಗಣ್ಣವರ, ನಾಡಧ್ವ್ವಜವನ್ನು ಕಸಾಪ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಹಾಗೂ ಪರಿಷತ ಧ್ವಜವನ್ನು ತಾಲೂಕ ಕಸಾಪ ಅಧ್ಯಕ್ಷೆ ಭಾರತಿ ಮದಭಾಂವಿ ನೆರವೇರಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವದು.
8.30ಕ್ಕೆ ಅಂಕಲಗಿ ಪಾದಗಟ್ಟಿಯಿಂದ ಸಪ್ತಪದಿ ಕಲ್ಯಾಣ ಮಂಟಪದವರೆಗೆ ಭುವನೇಶ್ವರಿ ಭಾವಚಿತ್ರ ಮತ್ತು ಸಮ್ಮೇಳನ ಅಧ್ಯಕ್ಷರ ಮೆರವಣಿಗೆಗೆ ಅಣ್ಣಾಸಾಹೇಬ ರಾಜಮಾನೆ ಚಾಲನೆ ನೀಡುವರು. ಮೆರವಣಿಗೆಯಲ್ಲಿ ತಹಶೀಲದಾರ ಮೋಹನ ಭಸ್ಮೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಉದಯಕುಮಾರ ಕಾಂಬ್ಳೆ, ಡಿವೈಎಸ್‌ಪಿ ಡಿ ಎಚ್ ಮುಲ್ಲಾ ಸೇರಿದಂತೆ ಅಧಿಕಾರಿಗಳು ಗಣ್ಯರು ಉಪಸ್ಥಿತರಿರುವರು.
1೦.ಗಂಟೆಗೆ ನಡೆಯುವ ಸಮಾರಂಭದ ದಿವ್ಯ ಸಾನಿಧ್ಯವನ್ನು ಅಂಕಲಗಿ ಕುಂದರಗಿ ಮಠದ ಶ್ರೀ ಅಮರಸಿದ್ಧೇಶ್ವರ ಮಹಾಸ್ವಾಮಿಗಳು ವಹಿಸುವರು. ಶಾಸಕ ರಮೇಶ ಜಾರಕಿಹೊಳಿಯವರ ಅಧ್ಯಕ್ಷತೆಯಲ್ಲಿ ಸಮ್ಮೇಳನವನ್ನು ಸಂಸದ ಜಗದೀಶ ಶೆಟ್ಟರ ಹಾಗೂ ಪುಸ್ತಪ್ರದರ್ಶನವನ್ನು ವಿಧಾನ ಪರಿಷತ ಸದಸ್ಯ ಲಖನ ಜಾರಕಿಹೊಳಿ ಉದ್ಘಾಟಿಸುವರು. ನಿಕಟಪೂರ್ವ ಅಧ್ಯಕ್ಷ ಈಶ್ವರಚಂದ್ರ ಬೆಟಗೇರಿ ಅವರಿಂದ ನಿಯೋಜಿತ ಅಧ್ಯಕ್ಷ ಶಿವಲಿಂಗಪ್ಪ ಭಾವಿಕಟ್ಟಿ ಅವರಿಗೆ ಧ್ವಜ ಹಸ್ತಾಂತರ ಹಾಗೂ ಅಧ್ಯಕ್ಷರ ಭಾಷಣ. ಮುಖ್ಯಅತಿಥಿಗಳಾಗಿ ಮಾಜಿ ಶಾಸಕ ಎಮ್ ಎಲ್ ಮುತ್ತೇನ್ನವರ, ಗಣ್ಯರಾದ ಅಂಬಿರಾವ ಪಾಟೀಲ, ಚಂದ್ರಶೇಖರ ಅಕ್ಕಿ, ಮಹಾಂತೇಶ ತಾಂವಶಿ, ಶಾಮಾನಂದ ಪೂಜೇರಿ, ಬಸವರಾಜ ಪಟ್ಟಣಶೆಟ್ಟಿ, ಬಾಳಗೌಡ ಪಾಟೀಲ, ಶಂಕರ ಬೂಸನ್ನವರ ಆಗಮಿಸುವರು.
1.ಗಂಟೆಗೆ ನಡೆಯುವ ಸಾಂಸ್ಕೃತಿಕ ಚಿಂತನ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ರಾಮಕೃಷ್ಣ ಮರಾಠೆ ವಹಿಸಲಿದ್ದು, ಡಾ.ಆನಂದಕುಮಾರ ಜಕ್ಕನ್ನವರ, ಡಾ.ಮಹಾನಂದಾ ಪಾಟೀಲ, ಪ್ರೋ.ಸುರೇಶ ಮುದ್ದಾರ, ಪ್ರಕಾಶ ಗಿರಿಮಲ್ಲನ್ನವರ, ಪಿ ಎಲ್ ಹೊಂಬಾಳ, ಡಾ.ಎಮ್ ಎ ಮರಲಿಂಗನವರ ಉಪಸ್ಥಿತರಿರುವರು. ಮಧ್ಯಾಹ್ನ 2.3೦ಕ್ಕೆ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಪುಷ್ಪ ಮುರಗೋಡ ವಹಿಸಲಿದ್ದು, ಎಮ್ ಬಿ ಕೊಮವಾರಶೆಟ್ಟಿ, ಶಿವಕುಮಾರ ಕಟ್ಟಿಮನಿ, ಯಲ್ಲಪ್ಪ ಕುರಿಹುಲಿ, ಜಯಾ ಪಾಟೀಲ, ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು. ಕವಿಗಳಿಂದ ಕಾವ್ಯವಾಚನ ಜರುಗಲಿದೆ.
ಸಾಯಂಕಾಲ 4ಗಂಟೆಗೆ ನಡೆಯುವ ಸಾಧಕರ ಸನ್ಮಾನ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಗಾರ ವಹಿಸಲಿದ್ದು, ಅತಿಥಿಗಳಾಗಿ ರಾಮಣ್ಣ ಸುಂಬಳಿ, ಬಸವಂತಪ್ಪ ಬೆಣ್ಣಿ, ಬಸನಗೌಡ ನಿರ್ವಾಣಿ, ಬಸವಣ್ಣೆಪ್ಪ ಪಾಶ್ಚಾಪೂರೆ, ಬಸವಣ್ಣೆಪ್ಪ ದುಡಗುಂಟಿ ಆಗಮಿಸುವರು. ಸಂಜೆ 5.30ಕ್ಕೆ ನಡೆಯುವ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವನ್ನು ಘಟಪ್ರಭಾ ಗುಬ್ಬಲಗುಡ್ಡದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ವಹಿಸಲಿದ್ದು, ಡಾ.ಗುರುಪಾದ ಮರಿಗುದ್ದಿ, ಸಿ ಎಸ್ ನಾಯಕ, ಟಿ ಆರ್ ಕಾಗಲ, ಹೇಮಾ ಅಲ್ಲನ್ನವರ, ವಿಶ್ವನಾಥ ಕಟಕೋಳ, ಶಿವಲಿಂಗಪ್ಪ ಭಾವಿಕಟ್ಟಿ, ಜಿ ಆರ್ ಸನದಿ, ಅಡಿವೆಪ್ಪ ನಾವಲಗಟ್ಟಿ, ಲಕ್ಕಣ್ಣ ಪೂಜೇರಿ, ಭರಮಪ್ಪ ತೋಳಿ ಅತಿಥಿಗಳಾಗಿ ಆಗಮಿಸಲಿದ್ದು ಈ ಎಲ್ಲ ಕಾರ್ಯಕ್ರಮಗಳಲ್ಲಿ ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡಪರ ಸಂಘಟನೆಗಳು, ಸಂಘ ಸಂಸ್ಥೆಗಳು, ಸರಕಾರಿ ಇಲಾಖೆ ಅಧಿಕಾರಿಗಳು, ನೌಕರರು, ಶಿಕ್ಷಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಸಾಪ ತಾಲೂಕಾಧ್ಯಕ್ಷೆ ಭಾರತಿ ಮದಭಾಂವಿ, ಮಹಾಂತೇಶ ತಾಂವಶಿ, ಚಂದ್ರಶೇಖರ ಅಕ್ಕಿ, ರಾಯಣಗೌಡ ಪಾಟೀಲ, ಎಮ್ ಎನ್ ಮಾವಿನಕಟ್ಟಿ, ಎನ್ ಬಿ ಬಾಗಾಯಿಗೋಳ, ವೀರುಪಾಕ್ಷ ಅಂಗಡಿ, ಸುರೇಶ ಮುದ್ದಾರ ಇದ್ದರು.


Spread the love

About Yuva Bharatha

Check Also

ಬಿಜೆಪಿ ಸದಸ್ಯತ್ವ ಈ ಬಾರಿ ಅತಿ ಹೆಚ್ಚಿನ ಸಾಮಾನ್ಯ ಸದಸ್ಯರನ್ನು ಸೇರ್ಪಡೆಗೊಳಿಸಿ-ರಮೇಶ ಜಾರಕಿಹೊಳಿ.!

Spread the loveಬಿಜೆಪಿ ಸದಸ್ಯತ್ವ ಈ ಬಾರಿ ಅತಿ ಹೆಚ್ಚಿನ ಸಾಮಾನ್ಯ ಸದಸ್ಯರನ್ನು ಸೇರ್ಪಡೆಗೊಳಿಸಿ-ರಮೇಶ ಜಾರಕಿಹೊಳಿ.! ಗೋಕಾಕ: ವಿಶ್ವದಲ್ಲಿ ಅತಿ …

Leave a Reply

Your email address will not be published. Required fields are marked *

three × 1 =