Breaking News

6ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಸಮಾಧಾನದ ಹೊಗೆ-ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆಂಪಣ್ಣ ಚೌಕಾಶಿ ಆಕ್ರೋಷ.!

Spread the love

6ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಸಮಾಧಾನದ ಹೊಗೆ-ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆಂಪಣ್ಣ ಚೌಕಾಶಿ ಆಕ್ರೋಷ.!


 ಯುವ ಭಾರತ ಸುದ್ದಿ  ಗೋಕಾಕ: ಬೆಟಗೇರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಪರ ಸಂಘಟನೆಗಳನ್ನು ಕಡೆಗಣಿಸಲಾಗಿದೆ. ಅಲ್ಲದೇ ಕಸಾಪ ಸದಸ್ಯರೊಬ್ಬರು ಕನ್ನಡ ಸಂಘಟನೆಗಳನ್ನು ಹಿಯಾಳಿಸಿದ್ದು ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆಂಪಣ್ಣ ಚೌಕಾಶಿ ತಿಳಿಸಿದರು.
ಅವರು, ನಗರದ ಡಿವೈಎಸ್‌ಪಿ ಕಾರ್ಯಾಲಯದಲ್ಲಿ ಡಿವೈಎಸ್‌ಪಿ ಮನೋಜಕುಮಾರ ನಾಯಕ ಅವರಿಗೆ ಮನವಿ ಅರ್ಪಿಸಿ ಮಾತನಾಡಿ. ಕನ್ನಡ ಸಾಹಿತ್ಯ ಪರಿಷತ ಅಧೀನದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಕನ್ನಡಪರ ಸಂಘಟನೆಗಳ ವಿಶ್ವಾಸಕ್ಕೆ ತೆಗೆದುಕೊಳ್ಳದೆ. ಅವಮಾನ ಮಾಡಿದ್ದಾರೆ. ಈ ಕೂಡಲೇ ಕನ್ನಡಪರ ಸಂಘಟನೆಗಳಲ್ಲಿ ಕ್ಷಮೆ ಕೋರಬೇಕು ಎಂದರು.
ಕಸಾಪ ತಾಲೂಕ ಘಟಕ ಸರ್ವಾಧಿಕಾರಿ ಧೋರಣೆ ತೋರುತ್ತಿದೆ. ಕಸಾಪ ನಡೆಸುತ್ತಿರುವ ಸಮ್ಮೇಳನದಲ್ಲಿ ಹೋರಾಟ ಮಾಡಲಾಗುವದು. ಯಾವುದೆ ತರಹದ ಘಟನೆ ಜರುಗಿದ್ದಲ್ಲಿ ಕಸಾಪ ನೇರಹೊಣೆಯಾಗುತ್ತದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಮುಖಂಡರುಗಳಾದ ಸಂತೋಷ ಖಂಡ್ರಿ, ಪವನ ಮಹಾಲಿಂಗಪೂರ, ಪ್ರಶಾಂತ ಅರಳಿಕಟ್ಟಿ, ಕೆ ಕೆ ಪಟ್ಟಣಶೆಟ್ಟಿ, ಮಲ್ಲಿಕಜಾನ ತಳವಾರ, ಶೆಟ್ಟೆಪ್ಪ ಗಾಡಿವಡ್ಡರ, ಮಹಾನಂದ ಗುನಕಿ, ಲಕ್ಷಿö್ಮÃ ಪಾಟೀಲ, ಸುಧಾ ಮಠಪತಿ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

9 + seventeen =