Breaking News

ಸವದಿ ದುಡುಕಿನ ನಿರ್ಧಾರ ತೆಗೆದುಕೊಳ್ಳದಿರಲಿ-ರಮೇಶ ಜಾರಕಿಹೊಳಿ.

Spread the love

 ಸವದಿ ದುಡುಕಿನ ನಿರ್ಧಾರ ತೆಗೆದುಕೊಳ್ಳದಿರಲಿ-ರಮೇಶ ಜಾರಕಿಹೊಳಿ.


ಗೋಕಾಕ: ಗೋಕಾಕ ಮತಕ್ಷೇತ್ರದ ಜನತೆಯ ಆಶೀರ್ವಾದ, ಪ್ರೀತಿಯಿಂದ ನಾನು ೬ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಕ್ಷೇತ್ರದ ಜನ ಅಪಪ್ರಚಾರಕ್ಕೆ ಕಿವಿ ಕೊಟ್ಟಿಲ್ಲ, ಜಾತ್ಯಾತೀತ ವಾಗಿ ನನ್ನ ಬೆಂಬಲಿಸಿದ್ದಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ತಿಳಿಸಿದರು.
ಅವರು, ಗುರುವಾರದಂದು ನಗರ ತಾಲೂಕಾಡಳಿತ ಸೌಧ(ತಹಶೀಲ್ದಾರ ಕಾರ್ಯಾಲಯ)ಕ್ಕೆ ತೆರಳಿ, ಗೋಕಾಕ ಮತಕ್ಷೇತ್ರದ ಚುನಾವಣಾಧಿಕಾರಿ ಗೀತಾ ಕೌಲಗಿ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ನಾನು ಜಾತಿಕಾರಣ ಮಾಡಿಲ್ಲ, ಎಲ್ಲ ಜಾತಿ ಧರ್ಮದ ಜನರನ್ನು ಒಗ್ಗೂಡಿಸಿಕೊಂಡು ಹೊಗುತ್ತಿದ್ದಾನೆ. ಕಾಂಗ್ರೆಸ್ ನಾಯಕರು ಮಾಡಿದ ಷಡ್ಯಂತ್ರ ನೋಡಿದರೆ ನಾನು ಮೇಲೆದ್ದು ಬರುತ್ತಿರಲಿಲ್ಲ. ಜನರ ಪ್ರೀತಿ, ವಿಶ್ಚಾಸದಿಂದ ಮತ್ತೆ ಎಲ್ಲರ ಎದುರು ನಿಂತಿದ್ದೇನೆ. ಕೆಳಮಟ್ಟದ ರಾಜಕಾರಣದಿಂದ ನನಗೆ ಬೇಜಾರಾಗಿದೆ. ಇದೇ ಬಾರಿ ನಾನು ಸ್ಪರ್ಧೆ ಮಾಡುತ್ತಿರಲಿಲ್ಲ ವೈರಿಗಳಿಗೆ ತಕ್ಕ ಉತ್ತರ ನೀಡಲು ಈ ಬಾರಿ ಸ್ಪರ್ಧೆ ಮಾಡುತ್ತಿದ್ದೇನೆ. ಮುಂದಿನ ಬಾರಿ ಸ್ಪರ್ಧೆ ಮಾಡೋದಿಲ್ಲ ಎಂದರು.
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ವಿರುದ್ಧ ಬಂಡಾಯ ವಿಚಾರವಾಗಿ ಮಾತನಾಡಿದ ರಮೇಶ ಜಾರಕಿಹೊಳಿ ಅವರು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮತ್ತು ನಾನು ನಿಜವಾಗಿಯೂ ನಾವಿಬ್ಬರೂ ಉತ್ತಮ ಸ್ನೇಹಿತರು, ಕೆಟ್ಟ ಘಳಿಗೆಯಲ್ಲಿ ನಾವಿಬ್ಬರೇ ಬೇರೆ ಬೇರೆಯಾಗಿದ್ದೇವೆ. ನಾನು ಕಾಂಗ್ರೆಸ್ ನಲ್ಲಿದ್ದೇ, ಅವನು ಬಿಜೆಪಿಯಲ್ಲಿದ್ದ. ಅಚಾನಕ್ ನಾವಿಬ್ಬರೂ ಒಂದೇ ಪಕ್ಷದಲ್ಲಿದ್ದೇವೆ. ಲಕ್ಷ್ಮಣ ಸವದಿಗೆ ಮಾದ್ಯಮಗಳ ಮೂಲಕ ಮನವಿ ಮಾಡುತ್ತೇನೆ. ನಿಮ್ಮ ನಿರ್ಧಾರವನ್ನ ಪುನರ್ ಪರಿಶೀಲನೆ ಮಾಡಿ, ಯಾವುದೇ ದುಡುಕಿನ ನಿರ್ಧಾರ ಬೇಡ. ನಾವಿಬ್ಬರೂ ಸೇರಿ ೨೦೨೩ಕ್ಕೆ ಜಿಲ್ಲೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರೋಣ, ಬಿಜೆಪಿ ಕಟ್ಟೋಣ ಬೇಕಿದ್ದರೆ ನಾನೇ ಒಂದು ಹೆಜ್ಜೆ ಹಿಂದೆ ಸರಿಯುತ್ತೇನೆ. ಮತ್ತೋಮ್ಮೆ ವಿಚಾರ ಮಾಡಿ ಬಿಜೆಪಿಯಲ್ಲಿ ಮುಂದುವರೆಯಬೇಕು ಎಂದು ಮನವಿ ಮಾಡಿದರು.
ನಮ್ಮಿಬ್ಬರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇದ್ದರೆ ಕುಳಿತು ಬಗೆಹರಿಸಿಕೊಳ್ಳೋಣ. ಮಹೇಶ್ ಕುಮಠಳ್ಳಿ ಪರ ಬ್ಯಾಟಿಂಗ್ ಮಾಡೋದು ನನ್ನ ಧರ್ಮ ನಾನು ಮಾಡಿದ್ದೀನಿ. ಆದರೆ ಲಕ್ಷ್ಮಣ ಸವದಿ ವಿರುದ್ಧ ಅಲ್ಲ, ನಿನ್ನ ಸ್ಥಾನಮಾನ ಕಸಿದುಕೊಂಡಿಲ್ಲ. ಹಿಂದಿನ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಕಾಂಗ್ರೆಸ್ ಗೆಲ್ಲಿಸುವುದು ನನ್ನ ಕರ್ತವ್ಯ ಮಾಡಿದ್ದೀನಿ. ಈಗ ಎಂಎಲ್‌ಸಿ ಇದ್ದೀರಿ ೫ವರ್ಷ ಅಧಿಕಾರ ಅವಧಿ ಇದೆ. ಕುಮಠಳ್ಳಿ ಎಂಎಲ್‌ಎ ಆಗಬೇಕು, ಮುಂದಿನ ದಿನದಲ್ಲಿ ಇಬ್ಬರೂ ಸೇರಿ ಬಿಜೆಪಿಗಾಗಿ ಕೆಲಸ ಮಾಡೋಣ ಎಂದರು.
ಕಾಂಗ್ರೆಸ್ ಮೋಸಗಾರ ಪಕ್ಷ. ಅಲ್ಲಿಗೆ ಹೋಗಬೇಡಿ ಎಂದು ಸವದಿಯವರಿಗೆ ಮನವಿ ಮಾಡುತ್ತೇನೆ. ನಾನು-ನೀನು ಬೊಮ್ಮಾಯಿ ಸ್ನೇಹಿತರು, ಹೈಕಮಾಂಡ್ ಹೇಳಿದರೆ ಸಂದಾನ ಮಾಡುತ್ತೇನೆ. ಅಥಣಿಗೆ ಎಲ್ಲವು ಸರಿ ಹೋದ ಮೇಲೆ ಹೋಗುತ್ತೇನೆ. ಜಿಲ್ಲೆ ರಾಜ್ಯದಲ್ಲಿ ನಾನು ನೀನು ಸೇರಿ ಕೆಲಸ ಮಾಡೋಣ, ಯಾವುದೇ ತೀರ್ಮಾಣ ಮಾಡಿಬೇಡಿ ಎಂದು ಮತ್ತೊಮ್ಮೆ ಮನವಿ ಮಾಡಿದರು.


Spread the love

About Yuva Bharatha

Check Also

ಗೋಕಾಕ ಮತಕ್ಷೇತ್ರದಲ್ಲಿ ಝಣಝಣ ಕಾಂಚಾಣ ಸದ್ದು, ಕಾಂಗ್ರೇಸ್ ಅಭ್ಯರ್ಥಿಯಿಂದ ಮತದಾರರಿಗೆ ಹಣದ ಆಮಿಷ.!

Spread the loveಗೋಕಾಕನಲ್ಲಿ ಪ್ರತಿ ಮನೆಗೆ 1000, ಅಲ್ಪಸಂಖ್ಯಾತರಿಗೆ 500 ಕಾಂಗ್ರೇಸ್ ಕಾಂಚಾಣ ಸದ್ದು.! ಗೋಕಾಕ: ಲೋಕಸಭಾ ಚುನಾವಣೆ ಇನ್ನು …

Leave a Reply

Your email address will not be published. Required fields are marked *

two × four =