ಕೆಪಿಸಿಸಿಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮಿಶನ್2023 ಪ್ರಾರಂಭ
ಬೆಳಗಾವಿ:ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಇವರ ಅಧ್ಯಕ್ಷತೆಯಲ್ಲಿ ಇಂದು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಮಂಚುಣಿ ಘಟಕಗಳಾದ, Sevadal, NSUI, Youth, SCn ST, Mahila ಮತ್ತು ಅಲ್ಪಸಂಖ್ಯಾತರ ಘಟಕಗಳ ರಾಜ್ಯ ಮಟ್ಟದ, ಜಿಲ್ಲಾ ಅಧ್ಯಕ್ಷರ, ಬ್ಲಾಕ್ ಅಧ್ಯಕ್ಷರ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಭೆ ನಡೆಯಿತು.
ಮುಂಬರುವ 2023 ರ ಚುಣಾವಣೆಗೆ ಪಕ್ಷವನ್ನು ತಳಮಟ್ಟದಿಂದ ಕ್ಯಾಡರ ಪದ್ಧತಿಯಲ್ಲಿ ಟ್ರೈನಿಂಗ್ ಶಿಬಿರಗಳನ್ನು ಏರ್ಪಡಿಸಿ ಬಲಪಡಿಸಲು ಕರೆ ನೀಡಿದರು.
ಘಟಕಗಳ ಅಧ್ಯಕ್ಷರ, ಬ್ಲಾಕ್ ಅಧ್ಯಕ್ಷರ ಹಾಗೂ ಕಾರ್ಯಕರ್ತರ ಸಲಹೆಗಳನ್ನು ಪಡೆದು ಮುಂಬರುವ ದಿನಗಳಲ್ಲಿ ಅವುಗಳನ್ನು ಕಾರ್ಯರೂಪಕ್ಕೆ ತಂದು. ಪಕ್ಷವನ್ನು 2023 ರ ಚುನಾವಣೆಯಲ್ಲಿ ಅಧಿಕಾರಕ್ಕೆ ತರಲು ಕರೆ ನೀಡಿದರು. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ವಿನಯ ನಾವಲಗಟ್ಟಿ , ಸುನೀಲ ಹನುಮನ್ನವರ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಅರುಣ್ ಕಟಾಂಬಳೆ, ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷರಾದ ಶಾಹನವಾಜ ಮುಲ್ಲಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.