Breaking News

33 ವರ್ಷಗಳ ಹಿಂದೆ ಗೋವೆಯ ಸಿಎಂ ನಿವಾಸದಲ್ಲಿ ಕನ್ನಡದ ಕಲರವವಿತ್ತು ! ಕನ್ನಡತಿಯೇ ಒಡತಿಯಾಗಿದ್ದಳು!!

Spread the love

33 ವರ್ಷಗಳ ಹಿಂದೆ ಗೋವೆಯ ಸಿಎಂ ನಿವಾಸದಲ್ಲಿ ಕನ್ನಡದ ಕಲರವವಿತ್ತು ! ಕನ್ನಡತಿಯೇ ಒಡತಿಯಾಗಿದ್ದಳು!!

ಯುವ ಭಾರತ ಸುದ್ದಿ ಬೆಳಗಾವಿ : ಮಹಾದಾಯಿ ವಿವಾದದ ಪ್ರಸಕ್ತ ಸಂದರ್ಭದಲ್ಲಿ ಗೋವೆಯು ಕರ್ನಾಟಕದೊಂದಿಗೆ ಆಜನ್ಮ ಶತ್ರುವಿನಂತೆ ನಡೆದುಕೊಳ್ಳುತ್ತಿದೆ.ಉಭಯ ರಾಜ್ಯಗಳ ನಡುವಿನ ಸಂಬಂಧ ಅತ್ಯಂತ ಹಳೆಯದು,ಅಷ್ಟೇ ಗಟ್ಟಿತನದ್ದು.ಕನ್ನಡಿಗರ ಹೋರಾಟದ ಫಲವಾಗಿಯೇ ಪೋರ್ತುಗಾಲರ ಕಪಿಮುಷ್ಠಿಯಿಂದ ವಿಮೋಚನಗೊಂಡವರು ಗೋವನ್ನರು.

1984 ರ ಡಿಸೆಂಬರ್ ತಿಂಗಳು.ದೇಶದಲ್ಲಿ ಲೋಕಸಭೆ ಚುನಾವಣೆ ಸಂದರ್ಭ.ನಾನು ಸಹಾಯಕ ಸಂಪಾದಕನಾಗಿದ್ದ ದಿನಪತ್ರಿಕೆಯ ಕಾರ್ಯಾಲಯವಿದ್ದ ಬೆಳಗಾವಿಯ ಖಡೇಬಜಾರ್ ಬಾಪಟವಾಡೆಯ ಪುಟ್ಟ ಪತ್ರಿಕಾಲಯದಲ್ಲಿ ಕುಳಿತಿದ್ದೆ.ನನ್ನೆದುರಿಗಿದ್ದ ಸ್ಥಿರ ದೂರವಾಣಿ(24797) ರಿಂಗಿಸಿತು.ರಿಸೀವರ್ ಎತ್ತಿದೆ.ಆ ಕಡೆಯಿಂದ ಮಹಿಳೆಯೊಬ್ಬರ ಧ್ವನಿ.” ನಮಸ್ಕಾರ್,ನಾನು ಗೋವೆಯ ಮುಖ್ಯಮಂತ್ರಿ ಮನೆಯಿಂದ ಮಾತಾಡ್ತೇನಿ.ನನಗೆ ಚುನಾವಣೆಗಾಗಿ ವಾಲ್ ಪೋಸ್ಟರ್ ಪ್ರಿಂಟ್ ಮಾಡಿ ಕೊಡಬೇಕು.ನಿಮ್ಮವರನ್ನು ಯಾರಾನ್ನಾದರೂ ಗೋವೆಗೆ ಕಳಿಸಿಕೊಡ್ತೀರಾ? ಎಂದರು.ನನಗೆ ಅಚ್ಚರಿಯೋ ಅಚ್ಚರಿ!!

ಪತ್ರಿಕೆಯ ಸಂಪಾದಕರು ಆಗತಾನೆ ಎಚ್ ಎಮ್ ಟಿ ಕಂಪನಿಯ ಹೊಸ ಸಿಂಗಲ್ ಕಲರ್ ಆಫ್ ಸೆಟ್ ಮುದ್ರಣ ಯಂತ್ರ ಹಾಕಿದ್ದರು.ಅದರ ಮುದ್ರಣ ಕೆಲಸದ ಜಾಹೀರಾತನ್ನು ಇತರ ಕಡೆಗಳಂತೆ ಗೋವೆಯ ಪತ್ರಿಕೆಯಲ್ಲೂ ಹಾಕಿದ್ದರು.ಅದನ್ನು ನೋಡಿದ್ದ ಮುಖ್ಯಮಂತ್ರಿ ಪ್ರತಾಪಸಿಂಗ್ ರಾಣೆಯವರ ಪತ್ನಿ ವಿಜಯದೇವಿ ಫೋನ್ ಮಾಡಿದ್ದರು.

ರಾಣೆಯವರ ಪತ್ನಿ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಸೊಂಡೂರಿನ ಪ್ರಸಿದ್ಧ ರಾಜಮನೆತನವಾದ ಘೋರ್ಪಡೆ ಕುಟುಂಬದವರು.ದಿ.ಮುರಾರಿರಾವ್ ಘೋರ್ಪಡೆಯವರ( ಮಾಜಿ ಸಚಿವರು) ತಂಗಿ.ಅರಳು ಹುರಿದಂತೆ ಕನ್ನಡ ಮಾತನಾಡುತ್ತಿದ್ದ ಅವರ ಮನೆಯಲ್ಲಿಯ ಸೇವಕರೂ ಸಹ ಸೊಂಡೂರಿನಿಂದಲೇ ಹೋದವರಾಗಿದ್ದರು.

ಪತ್ರಿಕೆಯಲ್ಲಿ ನನ್ನೊಂದಿಗಿದ್ದ ದಿ.ಪ್ರಲ್ಹಾದ ಕಟ್ಟಿಯವರು ಗೋವೆಗೆ ಹೋದರು.ವಾಲ್ ಪೋಸ್ಟರ್ ಆರ್ಡರ್ ತಂದರು.ಕೊಟ್ಟೂ ಬಂದರು.

(ಅಶೋಕ ಚಂದರಗಿ, ಕನ್ನಡ ಹೋರಾಟಗಾರ, ಬೆಳಗಾವಿ).


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

14 + 18 =