Breaking News

ಸರಕಾರದ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಯವರೆಗೆ ತಲುಪಿಸುವಲ್ಲಿ ಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದೆ-ರಮೇಶ ಜಾರಕಿಹೊಳಿ.!

Spread the love

ಸರಕಾರದ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಯವರೆಗೆ ತಲುಪಿಸುವಲ್ಲಿ ಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದೆ-ರಮೇಶ ಜಾರಕಿಹೊಳಿ.!

 

ಯುವ ಭಾರತ ಸುದ್ದಿ  ಗೋಕಾಕ: ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತ್ರತ್ವವದ ರಾಜ್ಯ ಸರಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಸರಕಾರಗಳ ಯೋಜನೆಗಳು ಕಟ್ಟಕಡೆಯ ವ್ಯಕ್ತಿಯವರೆಗೆ ತಲುಪಿಸುವಲ್ಲಿ ಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ಶನಿವಾರದಂದು ನಗರದ ಕುರುಬರ ದಡ್ಡಿಯಲ್ಲಿ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಧಾನಿ ಮೋದಿ ತಮ್ಮ ೮ವರ್ಷದ ಆಡಳಿತ ಅವಧಿಯಲ್ಲಿ ಹೊರ ದೇಶಗಳು ಮೆಚ್ಚುವ ಕಾರ್ಯಗಳನ್ನು ಮಾಡಿದ್ದು, ಈಡಿ ವಿಶ್ವವೇ ಭಾರತ ದೇಶದತ್ತ ತಿರುಗಿ ನೋಡುವಂತಾಗಿದೆ. ಭಾರತವನ್ನು ವಿಶ್ವಗುರುವಾಗಿಸುವತ್ತ ತಮ್ಮ ಸಮರ್ಥ ನಾಯತ್ವದಲ್ಲಿ ಪ್ರಧಾನಿ ಮುನ್ನಡೆದಿದ್ದಾರೆ ಎಂದರು.


ರಾಜ್ಯ ಹಾಗೂ ಕೇಂದ್ರ ಸರಕಾರಗಳು ಶಿಕ್ಷಣ, ಗ್ರಾಮೀಣಾಭಿವೃದ್ಧಿ, ನೀರಾವರಿ, ಸಾಂಸ್ಕೃತಿಕ ಪುನರುತ್ಥಾನ, ಮೀಸಲಾತಿ, ಆರ್ಥಿಕ ನೆರವು, ಸಾಮಾಜಿಕ ಹಿತಾಸಕ್ತಿ, ಮಹಾತ್ಮರಿಗೆ ಗೌರವ ನೀಡುವ ನಿಟ್ಟಿನಲ್ಲಿ ಅನೇಕ ಅನೇಕ ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅಲ್ಲದೇ ರಾಜ್ಯ ಸರಕಾರ ಕನ್ನಡಕ್ಕಾಗಿ ನಾವು ಅಭಿಯಾನದಡಿ ‘ಮಾತಾಡ್ ಮಾತಾಡ್ ಕನ್ನಡ’, ರಾಜ್ಯಾಧ್ಯಂತ ಏಕ ಕಾಲದಲ್ಲಿ ‘ಕೋಟಿ ಕಂಠ ಗಾಯನ’ದಂತಹ ಐತಿಹಾಸಿಕ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಗೊಳಿಸಿದೆ ಎಂದು ತಿಳಿಸಿದರು.
ಪಕ್ಷದ ಕಾರ್ಯಕರ್ತರು ಸಂಘಟಿತರಾಗಿ ಮುಂಬರುವ ೨೦೨೩ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಭಿವೃದ್ಧಿಪರ ಯೋಜನೆಗಳ ಬಗ್ಗೆ ಜನರ ಮನೆ ಮನಗಳಿಗೆ ತಲುಪಿಸುವ ಕಾರ್ಯ ಮಾಡಿ, ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ಅಧಿಕಾರಿಕ್ಕೆ ತರಲು ನಿರಂತರ ಶ್ರಮಿಸುವಂತೆ ಕರೆ ನೀಡಿದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಉಪಾಧ್ಯಕ್ಷ ಬಸವರಾಜ ಆರೇನ್ನವರ, ಸ್ಥಾಯಿ ಸಮಿತಿ ಚೇರಮನ್ ಸಿದ್ದಪ್ಪ ಹುಚ್ಚರಾಯಪ್ಪಗೋಳ, ನಗರಸಭೆ ಸದಸ್ಯರುಗಳಾದ ಅಬ್ಬಾಸ ದೇಸಾಯಿ, ದುರ್ಗಪ್ಪ ಶಾಸ್ತಿçಗೊಲ್ಲರ, ಸಂತೋಷ ಮಂತ್ರನ್ನವರ, ಬಾಬು ಮುಳಗುಂದ, ಪ್ರಕಾಶ ಮುರಾರಿ, ಬಿಜೆಪಿ ಮುಖಂಡರುಗಳಾದ ಶಶಿಧರ ದೇಮಶೆಟ್ಟಿ, ಪ್ರಮೋದ ಜೋಶಿ, ಶಾಮಾನಂದ ಪೂಜೇರಿ, ಬಸವರಾಜ ಹಿರೇಮಠ, ಜ್ಯೋತಿ ಕೋಲ್ಹಾರ, ಶ್ರೀದೇವಿ ತಡಕೋಡ, ರಾಜೇಶ್ವರಿ ಒಡೆಯರ, ಲಕ್ಷö್ಮಣ ಖಡಕಭಾವಿ, ಮಲ್ಲಿಕ ತಳವಾರ, ಸುರೇಶ ಪತ್ತಾರ, ಲಕ್ಕಪ್ಪ ತಹಶೀಲ್ದಾರ, ಲಕ್ಷö್ಮಣ ತಳ್ಳಿ, ಕೆಂಚಪ್ಪ ಗೌಡಪ್ಪನವರ, ಮಂಜು ಪ್ರಭುನಟ್ಟಿ, ವಿರೇಂದ್ರ ಎಕ್ಕೇರಿಮಠ, ವಿಜಯಲಕ್ಷಿö್ಮÃ ಮಾಲದಿನ್ನಿ, ಗೀತಾ ಕಂಬಾರ, ಪಾರ್ವತಿ ಹಳ್ಳೂರ, ಮುತ್ತವ್ವ ವಿಜಾಪೂರಿ, ಸವಿತಾ ಪಾಟೀಲ, ಸಂತೋಷ ಕಟ್ಟಿಕಾರ, ಅನೀಲ ತುರಾಯಿದಾರ, ಆನಂದ ಉಳ್ಳಾಗಡ್ಡಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು.- ರಮೇಶ ಜಾರಕಿಹೊಳಿ.!

Spread the loveಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು.- ರಮೇಶ ಜಾರಕಿಹೊಳಿ.! ಗೋಕಾಕ: ಪತ್ರಿಕೆಗಳನ್ನು ಮನೆಗಳಿಗೆ ಸರಿಯಾದ …

Leave a Reply

Your email address will not be published. Required fields are marked *

3 + fifteen =