Breaking News

ಬಿಜೆಪಿ ಮಂಡಲದಿ0ದ ಬೃಹತ್ ಟ್ರಾö್ಯಕ್ಟರ್ ರ‍್ಯಾಲಿ ಚಾಲನೆ ನೀಡಿದ ಸರ್ವೋತ್ತಮ ಜಾರಕಿಹೊಳಿ.!

Spread the love

ಬಿಜೆಪಿ ಮಂಡಲದಿ0ದ ಬೃಹತ್ ಟ್ರಾö್ಯಕ್ಟರ್ ರ‍್ಯಾಲಿ ಚಾಲನೆ ನೀಡಿದ ಸರ್ವೋತ್ತಮ ಜಾರಕಿಹೊಳಿ.!

ಗೋಕಾಕ: ನಾಳೆ ನಡೆಯಲಿರುವ ಸ್ವಾತಂತ್ರö್ಯ ಅಮೃತ ಮಹೋತ್ಸವದ ನಿಮಿತ್ಯ ಅರಭಾವಿ ಬಿಜೆಪಿ ಮಂಡಲದಿ0ದ ಬೃಹತ್ ಟ್ರಾö್ಯಕ್ಟರ್ ರ‍್ಯಾಲಿಯನ್ನು ರವಿವಾರದಂದು ಇಲ್ಲಿಯ ಎನ್‌ಎಸ್‌ಎಫ್‌ದಲ್ಲಿ ಚಾಲನೆ ನೀಡಲಾಯಿತು.
ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಅವರು ಈ ರ‍್ಯಾಲಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಶಾಸಕ ಹಾಗೂ ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಈ ಟ್ರಾö್ಯಕ್ಟರ್ ರ‍್ಯಾಲಿಯಲ್ಲಿ ನೂರಾರು ರೈತರು ಭಾಗಿಯಾಗಿದ್ದರು. ೨೫೭ ಟ್ರಾö್ಯಕ್ಟರ್ ರ‍್ಯಾಲಿಗೆ ಎನ್‌ಎಸ್‌ಎಫ್‌ದಲ್ಲಿ ಚಾಲನೆ ನೀಡಿದ್ದು, ಲೋಳಸೂರ, ಅರಭಾವಿ, ದುರದುಂಡಿ, ಬಡಿಗವಾಡ, ಗಣೇಶವಾಡಿ, ದಂಡಾಪೂರ ಕ್ರಾಸ್, ರಾಜಾಪೂರ, ತುಕ್ಕಾನಟ್ಟಿ ಮಾರ್ಗವಾಗಿ ನಾಗನೂರ ಪಟ್ಟಣದ ಮಹಾಲಿಂಗೇಶ್ವರ ಮಠದಲ್ಲಿ ಸಮಾರೋಪಗೊಂಡಿತು.
ಸರ್ವೋತ್ತಮ ಜಾರಕಿಹೊಳಿ ಅವರು ಈ ಸಂದರ್ಭದಲ್ಲಿ ಮಾತನಾಡಿ, ೭೫ನೇ ಸ್ವಾತಂತ್ರೊö್ಯÃತ್ಸವವನ್ನು ನಾವೆಲ್ಲರೂ ಅದ್ದೂರಿಯಿಂದ ಆಚರಿಸುತ್ತಿದ್ದೇವೆ. ಈಗಾಗಲೇ ಪ್ರತಿ ಮನೆ-ಮನೆಗಳ ಮೇಲೆ ತಿರಂಗಾ ರಾರಾಜಿಸುತ್ತಿವೆ. ಜೊತೆಗೆ ಆರಭಾವಿ ಮತಕ್ಷೇತ್ರದಲ್ಲಿ ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸಾರಥ್ಯದಲ್ಲಿ ಈಗಾಗಲೇ ಎರಡು ಬಾರಿ ಬೈಕ್ ರ‍್ಯಾಲಿ ಮಾಡಲಾಗಿದೆ. ರೈತರು ಸಹ ಸ್ವಾತಂತ್ರೊö್ಯÃತ್ಸವದಲ್ಲಿ ಪಾಲ್ಗೊಳ್ಳುಲು ಅವರಿಗಾಗಿಯೇ ಟ್ರಾö್ಯಕ್ಟರ್ ರ‍್ಯಾಲಿ ಆಯೋಜಿಸಿದ್ದೇವೆ. ಅದ್ದೂರಿಯಾಗಿ ನಾವೆಲ್ಲರೂ ನಾಳಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದೇವೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಶ ಪಾಟೀಲ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮಶಿ ಮಾಳೆದವರ, ರೈತಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ ಮೂಡಲಗಿ, ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯಲ್ಲಿ ರೈತರು ಪಾಲ್ಗೊಂಡಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

nineteen − eighteen =