Breaking News

ಸಿದ್ದರಾಮಯ್ಯ ನವರು ಒಬ್ಬ ನರಹಂತಕ ಮುಖ್ಯಮಂತ್ರಿಯಾಗಿದ್ದರು ಎಂದು ಆರೋಪಿಸಿದ ನಳಿನಕುಮಾರ ಕಟಿಲ್.!

Spread the love

ಸಿದ್ದರಾಮಯ್ಯ ನವರು ಒಬ್ಬ ನರಹಂತಕ ಮುಖ್ಯಮಂತ್ರಿಯಾಗಿದ್ದರು ಎಂದು ಆರೋಪಿಸಿದ ನಳಿನಕುಮಾರ ಕಟಿಲ್.!


ಗೋಕಾಕ: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ೧೮ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟಿಲ ಹೇಳಿದರು.
ಅವರು, ಬುಧವಾರದಂದು ನಗರದಲ್ಲಿ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡ ಜನಸ್ಪಂದನ ಹಾಗೂ ಗೋಕಾಕ ಮತಕೇತ್ರದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ೨೦೧೮ ರಲ್ಲಿ ಜಿಜಿಪಿ ಪಕ್ಷಕ್ಕೆ ೧೦೦ಕ್ಕೂ ಹೆಚ್ಚು ಸ್ಥಾನ ಬಂದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರು ಸಹ ಸಿದ್ದರಾಮಯ್ಯ ಕುಮಾರಸ್ವಾಮಿ ಅನೈತಿಕ ಸಂಬAಧ ಸರ್ಕಾರ ಇತ್ತು. ಈ ಒಂದು ವರ್ಷದ ಸರ್ಕಾರದಲ್ಲಿ ತಾಜ್ ಹೋಟೆಲ್‌ನಲ್ಲಿ ಕುಳಿತು ಸಿಎಂ ಹೆಚ್‌ಡಿಕೆ ಆಡಳಿತ ನಡೆಸುತ್ತಿದ್ದರು ಎಂದರು.
ವಿರೋಧ ಪಕ್ಷದ ಶಾಸಕರು ಆಡಳಿತ ಪಕ್ಷಕ್ಕೆ ಹೋಗುವುದನ್ನು ಕಂಡಿದ್ದಿರಿ ಆದರೆ ಆಡಳಿತ ಪಕ್ಷದಲ್ಲಿದ್ದ ಪವರ್‌ಫುಲ್ ನಾಯಕ ರಮೇಶ ಜಾರಕಿಹೊಳಿ ಅವರು ಬಂಡಾಯ ಎದ್ದು ೧೭ ಶಾಸಕರನ್ನು ಕರೆದುಕೊಂಡು ರಾಜೀನಾಮೆ ನೀಡಿ ಬಜೆಪಿ ಬೆಂಬಲಿಸಿ ಅಧಿಕಾರಕ್ಕೆ ತಂದರು ಆಗ ಮುಖ್ಯಮಂತ್ರಿಯಾದ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರಕಾರ ಒಳ್ಳೆಯ ಕೆಲಸ ಮಾಡಿದರು. ಕೊವೀಡ ಸಂದರ್ಭದಲ್ಲಿ ಅನ್ನಭಾಗ್ಯ, ಆಸ್ಪತ್ರೆ ನೇಕಾರರಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ, ಕಲ್ಯಾಣ ಕರ್ನಾಟಕ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು. ಈಗಿರುವ ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಅಭಿವೃದ್ಧಿ ಮಾಡುತ್ತಿದ್ದು, ಡಬ್ಬಲ ಇಂಜನ ಸರಕಾರ ಕರ್ನಾಟಕ ಮತ್ತು ದೇಶದಲ್ಲಿ ನಂ.೧ ಕಾರ್ಯವಾಗುತ್ತಿದೆ. ಅಲ್ಲಿಂದ ನಡೆದ ಎಲ್ಲಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಗೆದ್ದಿದೆ. ಸಾರ್ವಜನಿಕ ಮುಂದಿನ ದಿನಗಳಲ್ಲಿ ಎಲ್ಲರೂ ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕು ಎಂದು ವಿನಂತಿಸಿದರು.


ಕಾಂಗ್ರೆಸ್ ಪಕ್ಷ ಅಧಿಕಾರಿದಲ್ಲಿ ಇದ್ದಾಗ ಕರ್ನಾಟಕ ಲೂಟಿ ಮಾಡಿ ಡಿಕೆಶಿ ಜೈಲಿಗೆ ಹೋಗಿದ್ದರು. ಒಂದು ಸಮಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅತೀ ಕೆಟ್ಟದಾಗಿ ಬೈದಿದ್ದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಕಾಲಿಗೆ ಬಿದ್ದು ಪಕ್ಷದಲ್ಲಿ ಅಧಿಕಾರ ಉಪಯೋಗಿಸಿ ಪೆಮೆಂಟ ಮಾಡಿ ಮುಖ್ಯಮಂತ್ರಿಯಾಗಾದ್ದಾರೆ. ಸಿದ್ದರಾಮಯ್ಯ ನವರು ಒಬ್ಬ ನರಹಂತಕ ಮುಖ್ಯಮಂತ್ರಿ ಎಂದ ಆರೋಪಿಸಿದ ಕಟಿಲ್ ಅವರು ಇಡಿ ಜಗತ್ತು ಇಂದು ಭಾರತದ ಜೈ ಜೈ ಕಾರ ಹಾಕುತ್ತಿದೆ. ಜಗತ್ತಿನಲ್ಲಿ ಶಾಂತಿಯನ್ನು ಸೃಷ್ಟಿಸುವ ಶಕ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದೆ. ರಾಹುಲ್ ಗಾಂಧಿ ಅವರ ಭಾರತ ಜೋಡೊ ಪಾದಯಾತ್ರೆಯನ್ನು ಟಿಕಿಸಿದ ಕಟಿಲ ಅವರು ಭಾತರ ಜೊಡೋ ಬಿಡಿ ಕಾಂಗ್ರೆಸ್ ಜೋಡೋ ಕಾರ್ಯ ಮಾಡಿ. ಪಾರ್ಟಿಯಲ್ಲಿ ರಾಷ್ಟ್ರೀಯ ಒಬ್ಬ ರಾಷ್ಟ್ರೀಯ ಅಧ್ಯಕ್ಷ ಮಾಡುಲು ತಿನುಕಾಡುತ್ತಿದೆ. ಇವರಿಂದ ಮುಖ್ಯಮಂತ್ರಿ ಮಾಡಲು ಸಹ ಸಾಧ್ಯವಿಲ್ಲ ಎಂದರು.
ಸತೀಶ ಜಾರಕಿಹೊಳಿ ಈ ಬಾರಾ ಭಾರಿ ಕಷ್ಟ: ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕ ಸತೀಶ ಜಾರಕಿಹೊಳಿ ಅವರಿಗೂ ಸಹ ಟಾಂಗ ನೀಡಿ ಮಾತನಾಡಿದ ನಳಿನಕುಮಾರ ಕಟೀಲ ಅವರು, ಸಿದ್ದರಾಮಯ್ಯ ನವರಿಗೆ ಚುನಾವಣೆ ಸ್ವರ್ಧಿಸಲು ಕ್ಷೇತ್ರ ಇಲ್ಲದಂತಾಗಿದೆ ಅದರಿಂದ ಸತೀಶ ಜಾರಕಿಹೊಳಿ ಅವರು ನಾನು ಎಲ್ಲಿ ಹೋಗುತ್ತೇನೆ ಎಂಬ ಚಿಂತನೆಯಲ್ಲಿದ್ದಾರೆ. ಬೆಳಗಾವಿಯಲ್ಲಿ ಸತೀಶ ಅವರಿಗೆ ಸ್ಥಾನ ವಿಲ್ಲ. ಅವರು ಬಹಳ ಚಿಂತೆಯಲ್ಲಿ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ ಎಂದು ಸತೀಶ ಜಾರಕಿಹೊಳಿ ಅವರ ನಡೆಯನ್ನು ಕೆಣಕಿದರು.
ಪಕ್ಷದ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ ಬರುವ ಚುನಾವಣೆಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಪಾತ್ರ ಹೆಚ್ಚಿದೆ. ಬಿಜೆಪಿ ಪಕ್ಷ ಮುಸ್ಲಿಂ ವಿರೋಧಿ ಪಕ್ಷ ಅಲ್ಲಾ, ಈ ದೇಶ ಮುಸ್ಲಿಂ ಮತ್ತು ಹಿಂದುಗಳದ್ದು, ಇಬ್ಬರೂ ಕೂಡಿ ದೇಶವನ್ನು ಕಟ್ಟುತ್ತಿದ್ದೇವೆ. ಬಿಜೆಪಿ ಪಕ್ಕದಲ್ಲಿ ಮುಸ್ಲಿಂ ಮತ್ತು ಹಿಂದುಗಳ ಪ್ರೀತಿಯಿಂದ ಇದ್ದು ಸಂಘಟನೆ ಮಾಡುತ್ತಿದ್ದಾರೆ ಶಾಸಕ ರಮೇಶ ಜಾರಕಿಹೊಳಿ ಅವರ ಮುಂದಾಳತ್ವದಲ್ಲಿ ಪಕ್ಷ ಗಟ್ಟಿಗೋಳಿಸೋಣ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಶಾಸಕ ರಮೇಶ ಜಾರಕಿಹೊಳಿ ಅವರು ವಹಿಸಿದ್ದರು.
ಇದೇ ಸಂದರ್ಭದಲ್ಲಿ ನಮ್ಮ ಆಫ್ ನಮೋ ಆಫ್ ಬಿಡುಗಡೆ ಗೊಳಿಸಿದರು ಕಾರ್ಯಕ್ರಮಕ್ಕೂ ಮೊದಲು ಗೋವಿಗೆ ಪೂಜೆ ಸಲ್ಲಿಸಲಾಯಿತು.
ವೇದಿಕೆಯ ಮೇಲೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಹಣುಮಂತ ನಿರಾಣಿ, ಸಂಸದೆ ಮಂಗಳಾ ಅಂಗಡಿ, ಪಕ್ಷದ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ, ಮಾಜಿ ಶಾಸಕರುಗಳಾದ ಶಶಿಕಾಂತ ನಾಯಕ, ಎಂ.ಎಲ್.ಮುತ್ತೆನ್ನವರ, ಲಕ್ಷ್ಮಣ ತಪಸಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಸುಭಾಷ್ ಪಾಟೀಲ, ನಗರ ಮಂಡಳ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಶಫೀ ಜಮಾದಾರ, ಸುರೇಶ ಕಾಡದವರ, ಜಯಾನಂದ ಮುನವಳ್ಳಿ, ಚಂದ್ರಶೇಖರ್ ಕವಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

15 − nine =