ಸಂದಿಗ್ಧತೆಯಲ್ಲಿ ಸಿಲುಕಿದ ಮಹಾರಾಷ್ಟ್ರ ಏಕೀಕರಣ ಸಮಿತಿ !

ಯುವ ಭಾರತ ಸುದ್ದಿ ಬೆಳಗಾವಿ :
ಇಲ್ಲಿ ನಡೆಯುವ ವಿಧಾನ ಮಂಡಲದ ಅಧಿವೇಶನದ ಆರಂಭದ ದಿನದಂದೇ ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರತಿ ವರ್ಷ ಮಹಾಮೇಳಾವವನ್ನು ಏರ್ಪಡಿಸುತ್ತ ಬಂದಿದೆ. ಆದರೆ, ಈ ವರ್ಷ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಸ್ಪಷ್ಟ ಸಂದೇಶ ಎಂಇಎಸ್ ಪಾಲಿಗೆ ಮಹಾಮೇಳಾವ ನಡೆಸಲು ಅಡ್ಡಿಯಾಗಿದೆ.
ಅಮಿತ್ ಶಾ ಅವರು ಗಡಿಭಾಗದಲ್ಲಿ ಯಾವುದೇ ಪ್ರಚೋದನಾಕಾರಿ ಕಾರ್ಯಕ್ರಮ ನಡೆಸದಂತೆ ಕಠಿಣ ಸಂದೇಶ ರವಾನಿಸಿದ್ದಾರೆ. ಆದ್ದರಿಂದ ಈ ಬಾರಿ ಬೆಳಗಾವಿಯಲ್ಲಿ ನಡೆಯುವ ಕರ್ನಾಟಕ ವಿಧಾನ ಮಂಡಲದ ವಿಶೇಷ ಅಧಿವೇಶನದ ಆರಂಭದ ದಿನದಂದೇ ಮಹಾರಾಷ್ಟ್ರ ಏಕೀಕರಣ ಸಮಿತಿ ಮಹಾಮೇಳಾವವನ್ನು ನಡೆಸುತ್ತದೋ ಇಲ್ಲವೋ ಎನ್ನುವುದು ಇದುವರೆಗೆ ಖಚಿತವಾಗಿ ಇಲ್ಲ. ಕರ್ನಾಟಕ ಸರಕಾರ ಇದುವರೆಗೆ ಮಹಾಮೇಳಾವ ನಡೆಸಲು ಅನುಮತಿ ನೀಡಿಲ್ಲ. ಇನ್ನೊಂದಡೆ ಮಹಾ ಮೇಳಾವ ನಡೆಸಲು ಕನ್ನಡ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ.
YuvaBharataha Latest Kannada News