Breaking News

ಜಿಲ್ಲಾಧಿಕಾರಿಗಳಿಂದ ಮತದಾರರ ಪಟ್ಟಿ ಪರಿಶೀಲನೆ

Spread the love

ಜಿಲ್ಲಾಧಿಕಾರಿಗಳಿಂದ ಮತದಾರರ ಪಟ್ಟಿ ಪರಿಶೀಲನೆ

ಯುವ ಭಾರತ ಸುದ್ದಿ ಬಸವನಬಾಗೇವಾಡಿ :
ಪಟ್ಟಣದ ಬಸವ ನಗರದಲ್ಲಿರುವ ಬಸವನಬಾಗೇವಾಡಿ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆ ಸಂಖ್ಯೆ ೭೪ ಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ೨೦೨೩ ಕ್ಕೆ ಸಂಬಂಧಿಸಿದಂತೆ ಸೂಪರ್ ಚೆಕಿಂಗ್ ಮಾಡಿದರು.

ಈ ಸಂದರ್ಭದಲ್ಲಿ ಯುವ ಮತದಾರ ಸೂರಜಕುಮಾರ ಪೂಲಸಿಂಗ ರಾಠೋಡ ಅವರನ್ನು ಮಾತನಾಡಿಸಿದ ಜಿಲ್ಲಾಧಿಕಾರಿ ಅವರು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಯಾವ ವಿಧಾನದಲ್ಲಿ ಅರ್ಜಿ ಸಲ್ಲಿಸಲಾಯಿತು ಎಂಬ ಮಾಹಿತಿ ಪಡೆದುಕೊಂಡರು. ಈ ಮತಗಟ್ಟೆಯಲ್ಲಿರುವ ಮನೆ ಮನೆ ಭೇಟಿ ನೀಡಿ ಮತಗಟ್ಟೆ ಅಧಿಕಾರಿಗಳು ಬಂದು ಮತದಾರರ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಕುರಿತು ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಮತದಾರರ ಪಟ್ಟಿಯ ಸ್ವೀಕೃತವಾದ ನಮೂನೆ ೬,೭,೮ ರ ಸೂಪರ್ ಚೆಕಿಂಗ್ ಮಾಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಡಿ.ಎಚ್.ಕೋಮಾರ, ಮತಗಟ್ಟೆ ಅಧಿಕಾರಿ ಎಸ್.ಎನ್.ನಾಯಕ, ಶಿರಸ್ತೇದಾರ ಎ.ಎಚ್.ಬೋರಗಿ, ಕಂದಾಯ ನಿರೀಕ್ಷಕ ಎ.ಎಚ್.ಮಾಣಿಕಬಾಯಿ, ಎಪ್‌ಡಿಎ ಬಿ.ಜಿ.ದಾನಿ, ಗ್ರಾಮಲೆಕ್ಕಾಧಿಕಾರಿ ಎಸ್.ಆರ್.ಕುಂಟೋಜಿ, ಗ್ರಾಮಸಹಾಯಕರಾದ ಅಲ್ಲಾಭಕ್ಷ ಕೊರಬು, ಸತೀಶ ವಾಲೀಕಾರ ಇತರರು ಇದ್ದರು. ನಂತರ ಕೆಲ ಯುವ ಮತದಾರರು ಜಿಲ್ಲಾಧಿಕಾರಿಗಳೊಂದಿಗೆ ನಿಂತುಕೊಂಡು ಪೋಟೋ ತೆಗೆಸಿಕೊಂಡರು.


Spread the love

About Yuva Bharatha

Check Also

ಮತ್ತೆ ಕಂಪಿಸಿದ ಭೂಮಿ

Spread the loveಮತ್ತೆ ಕಂಪಿಸಿದ ಭೂಮಿ ಯುವ ಭಾರತ ಸುದ್ದಿ ವಿಜಯಪುರ : ತಿಕೋಟಾ ಪಟ್ಟಣ ಸೇರಿ ಸುತ್ತಲಿನ ಪ್ರದೇಶಗಳಲ್ಲಿ …

Leave a Reply

Your email address will not be published. Required fields are marked *

ten − two =