ಕುತೂಹಲ ಕೆರಳಿಸಿದ ಈಶ್ವರಪ್ಪ ,ರಮೇಶ ಜಾರಕಿಹೊಳಿ ಜತೆಗಿನ ಸಿಎಂ ಬೊಮ್ಮಾಯಿ ಮಾತುಕತೆ !
ಯುವ ಭಾರತ ಸುದ್ದಿ ಬೆಳಗಾವಿ :
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸ್ಥಾನದ ಆಕಾಂಕ್ಷಿಗಳಾದ ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ ಹಾಗೂ ರಮೇಶ ಜಾರಕಿಹೊಳಿ ಅವರ ಜೊತೆ ಇಂದು ಸುದೀರ್ಘ ಚರ್ಚೆ ನಡೆಸಿದರು.
ಈಶ್ವರಪ್ಪ ಮತ್ತು ರಮೇಶ ಜಾರಕಿಹೊಳಿ ಅವರು ಸಚಿವ ಸಂಪುಟ ಸೇರ್ಪಡೆಯಾಗುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಮನದಲ್ಲಿರುವ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ವರಿಷ್ಠರು ಹಸಿರು ನಿಶಾನೆ ತೋರಿದರೆ ಸಚಿವ ಸಂಪುಟ ವಿಸ್ತರಣೆಗೆ ಜನವರಿಯಲ್ಲಿ ಚಾಲನೆ ಸಿಗಬಹುದು.
ಸಂಪುಟ ವಿಸ್ತರಣೆಯಾದರೆ ಘಟಾನುಘಟಿಗಳಾದ ಈಶ್ವರಪ್ಪ ಹಾಗೂ ರಮೇಶ ಜಾರಕಿಹೊಳಿ ಮತ್ತೆ ಸಚಿವ ಸಂಪುಟ ಸೇರುವುದರಲ್ಲಿ ಯಾವುದೇ ಸಂದೇಹ ಇಲ್ಲ. ಮುಖ್ಯಮಂತ್ರಿಗಳು ಇವರಿಬ್ಬರ ಜೊತೆ ಸುದೀರ್ಘ ಹೊತ್ತು ಅತ್ಯಂತ ಕುಶಲೋಪಕಾರಿಯಾಗಿ ಮಾತುಕತೆ ನಡೆಸಿದರು. ಒಟ್ಟಾರೆ ಬೊಮ್ಮಾಯಿ ಜೊತೆಗಿನ ಮಾತುಕತೆ ಸಕಾರಾತ್ಮಕವಾಗಿ ನಡೆದಿದೆ ಎನ್ನಲಾಗಿದೆ.