Breaking News

ಲಿಂಗಾಯತ ಸಮಾವೇಶದ ನಿಮಿತ್ತ ಬೆಳಗಾವಿ ರಾಷ್ಟ್ರೀಯ ಹೆದ್ದಾರಿ -48 ರಲ್ಲಿ ಮಾರ್ಗ ಬದಲಾವಣೆ

Spread the love

ಲಿಂಗಾಯತ ಸಮಾವೇಶದ ನಿಮಿತ್ತ ಬೆಳಗಾವಿ ರಾಷ್ಟ್ರೀಯ ಹೆದ್ದಾರಿ -48 ರಲ್ಲಿ ಮಾರ್ಗ ಬದಲಾವಣೆ

ಯುವ ಭಾರತ ಸುದ್ದಿ ಬೆಳಗಾವಿ :
ಪಂಚಮಸಾಲಿ ಲಿಂಗಾಯತ ಸಮಾಜದವರು ಗುರುವಾರ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಪ್ರಮುಖ ಮಾರ್ಗದಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.

ಸುವರ್ಣ ವಿಧಾನ ಸೌಧದಲ್ಲಿ ಕರ್ನಾಟಕ ಸರ್ಕಾರದ ವಿಧಾನ ಮಂಡಲದ ಚಳಗಾಲದ ಅಧಿವೇಶನ ಪ್ರಾರಂಭವಾಗಿದ್ದು , ದಿನಾಂಕ 22/12/2022 ರಂದು ಅಂಗಾಯತ ಸಮಾಜದವರು ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿರುತ್ತಾರೆ .

ಆ ಕಾಲಕ್ಕೆ ಸುಮಾರು 4-5 ಲಕ್ಷ ಜನರು ಹಿರೇಬಾಗೇವಾಡಿಯಿಂದ ಬಸ್ತವಾಡ ಸಮಾವೇಶ ಸ್ಥಳದವರೆಗೆ ಪಾದಯಾತ್ರೆ ಮೂಲಕ ಬೆಳಗಾವಿ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಮೇಲೆ ಬರುವವರಿದ್ದು, ಆ ಕಾಲಕ್ಕೆ ಸುಗಮ ವಾಹನ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಈ ಕೆಳಗಿನಂತೆ ಮಾರ್ಗ ಬದಲಾವಣೆ ಮಾಡಲಾಗಿರುತ್ತದೆ .

1. ಬೆಳಗಾವಿಯಿಂದ ಹಿರೇಬಾಗೇವಾಡಿ ಮಾರ್ಗವಾಗಿ ಧಾರವಾಡ ಕಡೆಗೆ ಹೋಗುವ ಲಘು ವಾಹನಗಳು ರಾಷ್ಟ್ರೀಯ ಹೆದ್ದಾರಿ -48 ರ ಎಡಬದಿಯ ರಸ್ತೆಯನ್ನು ಉಪಯೋಗಿಸತಕ್ಕದ್ದು .

2. ಬೆಳಗಾವಿಯಿಂದ ಧಾರವಾಡ ಕಡೆಗೆ ಹೋಗುವ ಭಾರಿ ವಾಹನಗಳ ಸಂಚಾರವನ್ನು ಬಾಗೇವಾಡಿ ಮಾರ್ಗವಾಗಿ ಹೋಗುವುದನ್ನು ನಿರ್ಬಂಧಿಸಲಾಗಿದೆ . ಭಾರಿ ವಾಹನಗಳು ಬೆಳಗಾವಿಯಿಂದ ಸಾಂಬ್ರಾ – ನೇಸರಗಿ – ಬೈಲಹೊಂಗಲ ಕ್ರಾಸ್ – ಎಮ್.ಕೆ.ಹುಬ್ಬಳ್ಳಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 48 ಕ್ಕೆ ಹೋಗಿ ಸೇರುವುದು .

3. ಧಾರವಾಡ ಕಡೆಯಿಂದ ಬೆಳಗಾವಿಗೆ ಬರುವ ಲಘು ವಾಹನಗಳು ಬಾಗೇವಾಡಿ ಟೋಲ ನಾಕಾ ದಾಟಿದ ನಂತರ ಬಲಗಡೆಯ ರಸ್ತೆಗೆ ಹೋಗುವುದು. ಎಡಗಡೆಯ ರಸ್ತೆಯಲ್ಲಿ ಪಾದಯಾತ್ರೆ ಇರುವುದರಿಂದ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ . ಬಲಗಡೆಯ ರಸ್ತೆಯನ್ನು ಕಿರ್ಲೋಸ್ಕರ್‌ ಶೋರೂಂ ವರೆಗೆ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ . ಈ ಮೇಲಿನಂತೆ ಹಿರೇಬಾಗೇವಾಡಿಯಿಂದ ಬೆಳಗಾವಿ ಕಡೆಗೆ ಸಾಗಿದ ರಾಷ್ಟ್ರೀಯ ಹೆದ್ದಾರಿ -48 ರಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದ್ದು , ಸಾರ್ವಜನಿಕರು ಬದಲಾದ ಮಾರ್ಗಗಳಲ್ಲಿ ಸಂಚರಿಸಿ ಸಹಕರಿಸಲು ಕೋರಲಾಗಿದೆ .


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

fourteen + four =