ಕೊನೆಗೂ ಟ್ರಾಫಿಕ್ ಸಮಸ್ಯೆಗೆ ಮುಕ್ತಿ !
ಯುವ ಭಾರತ ಸುದ್ದಿ ಇಂಡಿ :
ಕಳೆದ ಎರಡು ವರ್ಷದಿಂದ ಬಸವೇಶ್ವರ ವೃತ್ತದಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಸಾರ್ವಜನಿಕರಿಗೆ,ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ಉಂಟಾಗಿತ್ತು.
ಶಹರ ಪೊಲೀಸ್ ಠಾಣೆ ಇದ್ದರೂ ಟ್ರಾಫೀಕ್ ಸಮಸ್ಯೆ ಪರಿಹಾರವಾಗಿರಲಿಲ್ಲ.ಆದರೆ ಸಿಪಿಐ ಮಹಾದೇವ ಶಿರಹಟ್ಟಿ ಅವರು ಶಹರ ಪೊಲೀಸ್ ಠಾಣೆ ಸಿಪಿಐ ಪ್ರಭಾರ ವಹಿಸಿಕೊಂಡ ಮೇಲೆ ಬಸವೇಶ್ವರ ವೃತ್ತದಿಂದ ಕೆಇಬಿ,ಮಹಾವೀರ ವೃತ್ತ,ಅಗರಖೇಡ ರಸ್ತೆ,ಸಿಂದಗಿ ರಸ್ತೆ,ಬಸ್ ನಿಲ್ದಾಣ ಮುಂಭಾಗ ಟ್ರಾಫೀಕ್ ಸಮಸ್ಯೆ ಪರಿಹಾರವಾಗಿದ್ದು,ಇದಕ್ಕಾಗಿ ಶ್ರಮಿಸಿದ ಸಿಪಿಐ ಮಹಾದೇವ ಶಿರಹಟ್ಟಿ ಅವರಿಗೆ ಪಟ್ಟಣದ ನಾಗರಿಕರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿದ್ದಸಿರಿ ಬ್ಯಾಂಕಿನ ನಿರ್ದೇಶಕ ಹಾಗೂ ಪಟ್ಟಣದ ಹಿರಿಯ ಮುಖಂಡ ಜಗದೀಶ ಕ್ಷತ್ರಿ ಹೇಳಿದರು.
ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ,ಶಹರ ಪೊಲೀಸ್ ಠಾಣೆಗೆ ಸುಮಾರು ೪೦ ರಿಂದ ೫೦ ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಇದೆ.ಆದರೆ ಸರಿಯಾದ ನಿರ್ವಹಣೆ ಮಾಡದೆ ಇದ್ದುದ್ದಕ್ಕಾಗಿ ಟ್ರಾಫೀಕ್ ಸಮಸ್ಯೆಯಿಂದ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸಿದ್ದರು.ಹಿಂದಿನ ಅಽಕಾರಿಗಳ ಕಳಕಳಿ ,ಕಾಳಜಿ ಇಲ್ಲದಕ್ಕಾಗಿ ಟ್ರಾಫೀಕ್ ಸಮಸ್ಯೆಯಿಂದ ಹಲವು ಜನರು ಅಪಘಾತಗೊಂಡು ತೊಂದರೆ ಅನುಭವಿಸುತ್ತಿದ್ದಾರೆ.
ಬಸವೇಶ್ವರ ವೃತ್ತದಲ್ಲಿ ಪೊಲೀಸ್ ಚೌಕಿ ಇದೆ.ಟ್ರಾಫೀಕ್ ಸುಧಾರಣೆಗೆ ಧ್ವನಿ ವರ್ಧಕ ಇದೆ. ಎಲ್ಲವೂ ಇದ್ದರು ಬಳಕೆ ಮಾಡಿಕೊಂಡು ಟ್ರಾಫೀಕ್ ಸಮಸ್ಯೆ ಬಗೆಹರಿಸಿರಲಿಲ್ಲ. ಆದರೆ ಸಾರ್ವಜನಿಕರ ಕಾಳಜಿ,ಹಿತದೃಷ್ಟಿಯನ್ನು ಇಟ್ಟುಕೊಂಡು ಅಧಿಕಾರ ಬಳಕೆ ಮಾಡಿಕೊಂಡು ಇಂದು ಪ್ರತಿದಿನ ದ್ವೀಚಕ್ರ ವಾಹನಗಳು ನಿಲುಗಡೆಯಾಗುವ ಸುಣ್ಣದ ಗೆರೆಯನ್ನು ಹಾಕುವುದರ ಮೂಲಕ,ರಸ್ತೆಯ ಮೇಲೆ ಇರುವ ಹಣ್ಣಿನ ಅಂಗಡಿಗಳನ್ನು ಬದಿಗೆ ಸರಿಸಿ ರಸ್ತೆಗಳು ಟ್ರಾಫೀಕ್ ಸಮಸ್ಯೆಯಿಂದ ಮುಕ್ತ ಮಾಡಿದಕ್ಕಾಗಿ ಸಿಪಿಐ ಮಹಾದೇವ ಶಿರಹಟ್ಟಿ ಅವರಿಗೆ ಸಾರ್ವಜನಿಕರ ಪರವಾಗಿ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದು ಹೇಳಿದರು.