ಸಂಸದನಾದ ಮೇಲೆ ವಿಜಯಪುರ ಜಿಲ್ಲೆಗೆ ಕೇಂದ್ರದಿಂದ ಲಕ್ಷ ಕೋಟಿ ಅನುದಾನ ; ರಮೇಶ ಜಿಗಜಿಣಗಿ
ಯುವ ಭಾರತ ಸುದ್ದಿ ಇಂಡಿ : ಕೆಪಿಟಿಸಿಎಲ್‌ನಿಂದ ವಿಜಯಪುರ ಜಿಲ್ಲೆಗೆ ಕೇಂದ್ರ ಸರ್ಕಾರ ೨ ಸಾವಿರ ಮೆ.ವ್ಯಾ ಐಎಸ್ಟಿಎಸ್ ಯೋಜನೆ ಅಡಿಯಲ್ಲಿ ವಿದ್ಯುತ್ ಕೇಂದ್ರ ಹಾಗೂ ಹಡಲಗಿಯಲ್ಲಿ ಕೇಂದ್ರ ಸರ್ಕಾರದ ಶೇ.೬೦ ಹಾಗೂ ರಾಜ್ಯ ಸರ್ಕಾರದ ಶೇ.೪೦ ಅನುಧಾನದ ಸಹಯೋಗದಲ್ಲಿ ೧೦ ಸಾವಿರ ಕೋಟಿ ಅನುದಾನದಲ್ಲಿ ೪೦೦ ಮೇ.ವ್ಯಾ ವಿದ್ಯುತ್ ಕೇಂದ್ರ ಮಂಜೂರು ಆಗಿದೆ.ನಾನು ಸಂಸದನಾದ ಮೇಲೆ ವಿಜಯಪುರ ಜಿಲ್ಲೆಗೆ ಕೇಂದ್ರದಿಂದ ೧ ಲಕ್ಷ ಕೋಟಿ ಅನುದಾನ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಮಂಜೂರು ಆಗಿದೆ .ನಾನು ಪುಣ್ಯವಂತನು.ನರೇಂದ್ರ ಮೋದಿ ಅವರ ನೇತ್ರತ್ವದ ಕೇಂದ್ರ ಸರ್ಕಾರದಲ್ಲಿ ರಾಜ್ಯ ಸಚಿವನಾಗಿ,ಸಂಸದನಾಗಿ ಕೆಲಸ ಮಾಡುವ ಯೋಗ ಸಿಕ್ಕಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ,ಹಡಲಗಿಯಲ್ಲಿ ಮಂಜೂರು ಆಗಿರುವ ೪೦೦ ಮೇ.ವ್ಯಾ ವಿದ್ಯುತ್ ಕೇಂದ್ರ ನಿರ್ಮಾಣಕ್ಕೆ ೬೦ ಎಕರೆ ಸರ್ಕಾರಿ ಭೂಮಿ ಒದಗಿಸಲಾಗಿದೆ ಎಂದು ಹೇಳಿದ ಅವರು,ಇಂಡಿ ತಾಲೂಕಿನ ಗೋರನಾಳ ಗ್ರಾಮಕ್ಕೆ ಬಾಂದಾರ ನಿರ್ಮಾಣ,ತಾಂಬಾ ಗ್ರಾಮದ ಹಳ್ಳಕ್ಕೆ ಸೇತುವೆ ಸಹಿತಿ ಬ್ಯಾರೇಜ್ ನಿರ್ಮಾಣ,ಕಪನಿಂಬರಗಿ ಗ್ರಾಮದ ಹಳ್ಳಕ್ಕೆ ಹಾಗೂ ಸಿಂದಗಿ ತಾಲೂಕಿನ ಖೈನೂರದಿಂದ ಮುರಡಿ ಗ್ರಾಮದ ಮಧ್ಯ ಸೇತುವೆ ಸಹಿತ ಬ್ಯಾರೇಜ್ ನಿರ್ಮಾಣ,ಬಂಟನೂರು-ಅರಳಹಳ್ಳಿ ಮಧ್ಯದ ಲಿಂಗದಹಳ್ಳಕ್ಕೆ ಸೇತುವೆ ಸಹಿತ ಬ್ಯಾರೇಜ್,ಚಡಚಣ ತಾಲೂಕಿನ ಕೇರೂರ-ಟಾಕಳಿ ಮಧ್ಯದ ಹಳ್ಳಕ್ಕೆ ಸೇತುವೆ ಸಹಿತ ಬ್ಯಾರೇಜ್ ನಿರ್ಮಾಣ,ಹಾವಿನಾಳ ಗ್ರಾಮದ ಸರ್ವೆ ನಂಬರ ೪೨೮ ಮತ್ತು ೪೨೯ ರಲ್ಲಿ ಸೇತುವೆ ಸಹಿತ ಬ್ಯಾರೇಜ್ ನಿರ್ಮಾಣ,ತದ್ದೇವಾಡಿ ಹಳ್ಳಕ್ಕೆ ಸೇತುವೆ ಸಹಿತ ಬ್ಯಾರೇಜ್ ನಿರ್ಮಾಣ ಹಾಗೂ ತಿಕೋಟಾ ತಾಲೂಕಿನ ಜಾಲಗೇರಿ,ಬಾಬಾನಗರ ಗ್ರಾಮದ ಬಳಿ ಬಾಂದಾರ ನಿರ್ಮಾಣ,ಬಬಲೇಶ್ವರ ತಾಲೂಕಿನ ಕಾತ್ರಾಳ-ಬಿದರಿ ಗ್ರಾಮದ ಬಳಿ ಬಾಂದಾರ ನಿರ್ಮಾಣ,ಮುದ್ದೇಬಿಹಾಳ ತಾಲೂಕಿನ ಮಡಿಕೇಶೀರುರ ಹಾಗೂ ಲಿಂಗದಳ್ಳಿ ಗ್ರಾಮದ ಬಳಿ (ಕೆಂಗಲಬೀಳ) ಬಳಿಯ ಸೋಗಲಿ ನಾಲಾಕ್ಕೆ ಬಾಂದಾರ ನಿರ್ಮಾಣ,ಕೋಲಾರ ತಾಲೂಕಿನ ಮುತ್ತಲದಿನ್ನಿ ,ರೋಣಿಹಾಳ ಹಳ್ಳಕ್ಕೆ ಬಾಂದಾರ ನಿರ್ಮಾಣ,ತಾಳಿಕೋಟಿ ತಾಲೂಕಿನ ಬೊಮ್ಮನಳ್ಳಿ ಗ್ರಾಮದ ಬಳಿ ಬಾಂದಾರ ನಿರ್ಮಾಣ,ವಿಜಯಪುರ ತಾಲೂಕಿನ ಹೊನ್ನುಟಗಿ ಹಳ್ಳಕ್ಕೆ ಬಾಂದಾರ ನಿರ್ಮಾಣಕ್ಕೆ ಒಟ್ಟು ೪೧.೮೫ ಕೋಟಿ ಅನುಧಾನ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಮಿತಿ(ದಿಶಾ) ಸದಸ್ಯ ಭೀಮರಾಯಗೌಡ ಮದರಖಂಡಿ,ವಿಜಯಕುಮಾರ ಮಾನೆ ಇತರರು ಈ ಸಂದರ್ಭದಲ್ಲಿ ಇದ್ದರು.