ರವಿವಾರ ಸಂಜೆ ಗೋಕಾಕ ಬಿಜೆಪಿ ಬೂತ್ ಅಧ್ಯಕ್ಷರು- ಪೇಜ್ ಪ್ರಮುಖರ ಸಭೆ

ಯುವ ಭಾರತ ಸುದ್ದಿ ಗೋಕಾಕ : ಗೋಕಾಕ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ನಗರ ಮತ್ತು ಗ್ರಾಮೀಣ ಮಂಡಲದ ವತಿಯಿಂದ ಬೂತ್ ಅಧ್ಯಕ್ಷರು ಮತ್ತು ಪ್ರಮುಖರ ಸಭೆ ಫೆ. 12 ರಂದು ಸಂಜೆ 5:00 ಕ್ಕೆ ಗೋಕಾಕ ಎಲ್‌ಇಟಿ ಕಾಲೇಜು ರಸ್ತೆಯ ಮಯೂರ ಸ್ಕೂಲ್ ಮೈದಾನದಲ್ಲಿ ನಡೆಯಲಿದೆ. ಗೋಕಾಕ ಮತಕ್ಷೇತ್ರದ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು, ಜನಪ್ರತಿನಿಧಿಗಳು, ಸಾಹುಕಾರ್ ಅಭಿಮಾನಿಗಳು ಭಾಗವಹಿಸುವಂತೆ ನಗರ ಬಿಜೆಪಿ ಅಧ್ಯಕ್ಷ ಭೀಮಶಿ ಭರಮನ್ನವರ ಮತ್ತುಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೊಳ ಮನವಿ ಮಾಡಿದ್ದಾರೆ.
YuvaBharataha Latest Kannada News