ಇಂಡಿ ಪುರಸಭೆಯ ವಾರ್ಡ್ 18 ರಲ್ಲಿ ನಗರೋತ್ಥಾನ ಯೋಜನೆ ಅಡಿಯಲ್ಲಿ ಚರಂಡಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ
ಯುವ ಭಾರತ ಸುದ್ದಿ ಇಂಡಿ:
ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಜನಪರ ಯೋಜನೆಗಳು ಜಾರಿಗೆ ತಂದಿದ್ದು ಹಾಗೂ ಜಿಲ್ಲೆಯ ಸಂಸದ ರಮೇಶ ಜಿಗಜಿಣಗಿ ಅವರು ಜಿಲ್ಲೆಯ ಅಭಿವೃದ್ದಿಗೆ ಸಾಕಷ್ಟು ಅನುಧಾನ ಮಂಜೂರು ಮಾಡಿಸಿದ್ದಾರೆ.ಸಂಸದ ರಮೇಶ ಜಿಗಜಿಣಗಿ ಅವರ ಅಧಿಕಾರವಧಿಯಲ್ಲಿ ಜಿಲ್ಲೆ ಅಭಿವೃದ್ದಿ ಪಥದಲ್ಲಿ ಮುಂದೆ ಸಾಗಿದೆ ಎಂದು ಪುರಸಭೆ ಸದಸ್ಯ ವಿಜಯಕುಮಾರ ಮೂರಮನ ಹೇಳಿದರು.
ಅವರು ಬುಧವಾರ ಪುರಸಭೆಯ ವಾರ್ಡ೧೮ ರಲ್ಲಿ ನಗರೋತ್ಥಾನ ಯೋಜನೆ ಅಡಿಯಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತ್ರತ್ವದ ಕೇಂದ್ರದ ಬಿಜೆಪಿ ಸರ್ಕಾರ ಹಿಂದೆಂದೂ ಆಗದಷ್ಟು ಅಭಿವೃದ್ದಿ ಯೋಜನೆಗಳು ದೇಶದಲ್ಲಿ ಜಾರಿಗೊಳಿಸಿದ್ದಾರೆ.ಪ್ರಧಾನಿ ಅವರ ಅಭಿವೃದ್ದಿ ಕಾರ್ಯಗಳನ್ನು,ಅಭಿವೃದ್ದಿಯ ವೇಗವನ್ನು ವಿಶ್ವ ಬೆರಗಾಗಿದೆ. ಜಿಲ್ಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಪುರಸ್ಕೃತ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಸಂಸದ ರಮೇಶ ಜಿಗಜಿಣಿ ಅವರು ಶ್ರಮಿಸುತ್ತಿದ್ದಾರೆ.ಗ್ರಾಮದ ಪ್ರತಿ ಮನೆ ಮನೆಗೂ ಪೈಪಲೈನ್ ಅಳವಡಿಸಿ ನೀರು ಪೊರೈಸುವ ಜಲಜೀವನ್ ಮಿಷನ್ ಯೋಜನೆ ,ಗ್ರಾಮೀಣ ಸ್ವಚ್ಚಭಾರತ ಮಿಷನ್,ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ,ರಾಷ್ಟೀಯ ಉದ್ಯೋಗ ಖಾತರಿ ಯೋಜನೆ,ಚತುಷ್ಪಥ ಹೆದ್ದಾರಿ,ದ್ವೀಪಥ ಹೆದ್ದಾರಿ,ಇಂಡಿ,ಅಥರ್ಗಾ,ನಾಗಠಾಣ ಗ್ರಾಮಕ್ಕೆ ಬೈಪಾಸ್ ರಸ್ತೆ,ವಿದ್ಯುತ್ ವಿತರಣಾ ಕೇಂದ್ರಗಳು,ಬ್ರಾಡ್ಜಗೇಜ್,ವಿದ್ಯುತ್ ಚಾಲಿತ ರೈಲು ಸೇರಿದಂತೆ ಹಲವು ಅಭಿವೃದ್ದಿ ಕಾಮಗಾರಿಗಳು ಸಂಸದ ರಮೇಶ ಜಿಗಜಿಣಗಿ ಅವರು ಮಾಡಿದ್ದಾರೆ. ಕೊರೊನಾದಿಂದ ಸ್ಥಗಿತಗೊಂಡಿದ್ದ ಇಂಡಿ ರೈಲು ನಿಲ್ದಾಣದ ಮೂಲಕ ಹಾದು ಹೋಗುವ ಮೈಸೂರು -ಸಾಯಿ ನಗರ,ಮೈಸೂರು-ಬಾಗಲಕೋಟ ಬಸವ ಎಕ್ಸಪ್ರೆಸ್ ರೈಲು ಪುನ ಆರಂಭಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿದಕ್ಕಾಗಿ ಸಂಸದ ರಮೇಶ ಜಿಗಜಿಣಗಿ ಅವರಿಗೆ ತಾಲೂಕಿನ ಜನತೆಯ ಪರವಾಗಿ ಅಭಿನಂದಿಸುವುದಾಗಿ ಹೇಳಿದರು.
ಶಿವು ಬಗಲಿ,ಧರ್ಮರಾಜ ಶಿವಪುರ,ಬಿಜೆಪಿ ಎಸ್ಸಿ ಮೊರ್ಚಾ ತಾಲೂಕು ಅಧ್ಯಕ್ಷ ರಮೇಶ ಧರೆನವರ,ಅಂಬರೀಶ ದಶವಂತ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.