Breaking News

ಪತ್ರಕರ್ತ ಪ್ರಾದೇಶಿಕತೆ ಮೀರಿ ನಡೆಯಬೇಕು : ಸಿಎಂ ಬೊಮ್ಮಾಯಿ ಅಭಿಮತ

Spread the love

ಪತ್ರಕರ್ತ ಪ್ರಾದೇಶಿಕತೆ ಮೀರಿ ನಡೆಯಬೇಕು : ಸಿಎಂ ಬೊಮ್ಮಾಯಿ ಅಭಿಮತ

ಯಾವುದೋ ಒಂದು ದಿನಪತ್ರಿಕೆ ಹೊರ ತಂದು ಪತ್ರಕರ್ತರು ಎಂದು ಹೇಳಿಕೊಳ್ಳುವ ಐಡೆಂಟಿಟಿ ಕಾರ್ಡ್ ಪತ್ರಕರ್ತರ ಸಂಖ್ಯೆ ಹೆಚ್ಚುತ್ತಿರುವುದು ಅತ್ಯಂತ ಕಳವಳಕಾರಿ-ಶಿವಾನಂದ ತಗಡೂರು

ಯುವ ಭಾರತ ಸುದ್ದಿ ವಿಜಯಪುರ :
ಪತ್ರಿಕೆಗಳು ಪ್ರಾದೇಶಿಕವಾಗಿ ಹೊರ ಬರಬಹುದು. ಆದರೆ ಪತ್ರಕರ್ತರು ಪ್ರಾದೇಶಿಕವಾಗಬಾರದು. ಪತ್ರಕರ್ತ ಅಖಂಡ ಕರ್ನಾಟಕದ ಪತ್ರಕರ್ತನಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶಯ ವ್ಯಕ್ತಪಡಿಸಿದರು.

ನಗರದ ಕಂದಗಲ್ ಹನುಮಂತ ರಾಯ ರಂಗಮಂದಿರದಲ್ಲಿ ಶನಿವಾರ ನಡೆದ 37 ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತರು ಅಖಂಡ ಕರ್ನಾಟಕದ ಬಗ್ಗೆ ಚಿಂತನೆ ನಡೆಸಿದಾಗ ಮಾತ್ರ ಸಂಪೂರ್ಣ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ. ಓದುಗನೇ ಈಗ ಪತ್ರಕರ್ತರಾಗಿರುವ ಕಾಲಘಟ್ಟದಲ್ಲಿ ಈ ವೃತ್ತಿಯನ್ನು ಗಟ್ಟಿಗೊಳಿಸುವ ಪ್ರಯತ್ನದ ಭಾಗವಾಗಿ ಪತ್ರಕರ್ತರು ವಿಶ್ವಾಸಾರ್ಹತೆ ಮತ್ತು ಬದ್ಧತೆಯನ್ನು ಪ್ರದರ್ಶಿಸುವ ಮೂಲಕ ವೃತ್ತಿಗೆ ಗೌರವ ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿ ಅಭಿಮತ ವ್ಯಕ್ತಪಡಿಸಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ,
ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ಸಮಾಜಪರ ಕಾಳಜಿ ಹಾಗೂ ಆಶಯಗಳನ್ನು ಇಂದು ಮತ್ತೆ ಅಳವಡಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದರು.

ಸ್ವತಂತ್ರ ಪೂರ್ವದಲ್ಲಿ ಮಾಧ್ಯಮದ ಆಶಯ ವಿಚಾರಗಳ ಬೆಳಕಿನಲ್ಲಿ ನೀತಿ ಸಂಹಿತೆಯನ್ನು ರೂಪಿಸಿಕೊಂಡು ಮುನ್ನಡೆಯಲು ಆತ್ಮಾವಲೋಕನಕ್ಕೆ ಇದೀಗ ಸಕಾಲವಾಗಿದೆ. ದೇಶದ ಸ್ವಾತಂತ್ರ್ಯದ ನೇತೃತ್ವ ವಹಿಸಿದ್ದ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರು ಸಹ ಪತ್ರಕರ್ತರಾಗಿದ್ದರು. ಅವರು ದೇಶದ ಬಗ್ಗೆ ತಮ್ಮದೇ ಆದ ಕನಸು ಕಂಡಿದ್ದರು ಎಂದು ಹೇಳಿದರು.
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದರು. ಕಾರ್ಯನಿರದ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸಾಮಾಜಿಕ ಜಾಲತಾಣ, ಯೂಟ್ಯೂಬ್ ಮಾಧ್ಯಮಗಳ ಹಾವಳಿಯಿಂದ 24 ಗಂಟೆಗಳಲ್ಲೇ ಪತ್ರಕರ್ತರಾಗಿ ರೂಪುಗೊಳ್ಳುವ ಇಂದಿನ ಕಾಲಘಟ್ಟದಲ್ಲಿ ನೈಜ ಪತ್ರಕರ್ತರು ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಿಸುವಂತಾಗಿದೆ. ಬದಲಾವಣೆ ಈಗ ಅನಿವಾರ್ಯ. ಇಂದಿನ ಆವಿಷ್ಕಾರಗಳಿಗೆ ಅನುಗುಣವಾಗಿ ಬದಲಾವಣೆ ಆಗದೆ ಹೋದರೆ ನೈಜ ಪತ್ರಕರ್ತರು ಕಳೆದು ಹೋಗಬೇಕಾಗುತ್ತದೆ. ನಮ್ಮ ಸಂಘಟನೆ ಇರುವುದು ಕಾರ್ಯನಿರತರಿಗೆ ಹೊರತು ಕಾರ್ಯ ಮರೆತವರಿಗೆ ಅಲ್ಲ. ಯಾವುದೋ ಒಂದು ದಿನಪತ್ರಿಕೆ ಹೊರ ತಂದು ಪತ್ರಕರ್ತರು ಎಂದು ಹೇಳಿಕೊಳ್ಳುವ ಐಡೆಂಟಿಟಿ ಕಾರ್ಡ್ ಪತ್ರಕರ್ತರ ಸಂಘ ಹೆಚ್ಚುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.


Spread the love

About Yuva Bharatha

Check Also

ಮತ್ತೆ ಕಂಪಿಸಿದ ಭೂಮಿ

Spread the loveಮತ್ತೆ ಕಂಪಿಸಿದ ಭೂಮಿ ಯುವ ಭಾರತ ಸುದ್ದಿ ವಿಜಯಪುರ : ತಿಕೋಟಾ ಪಟ್ಟಣ ಸೇರಿ ಸುತ್ತಲಿನ ಪ್ರದೇಶಗಳಲ್ಲಿ …

Leave a Reply

Your email address will not be published. Required fields are marked *

10 − 1 =