ಗೋಕಾಕ: ಸಹೋದರ ರಮೇಶ ಹಾಗೂ ಬಾಲಚಂದ್ರ ಬಿಜೆಪಿ ಪಕ್ಷದಲ್ಲಿದ್ದಾರೆ ಆ ಪಕ್ಷಕ್ಕೆ ಬೆಂಬಲಿಸೋದಾಗಿ ಕಾಂಗ್ರೇಸ್ ಮುಖಂಡ ಲಖನ್ ಜಾರಕಿಹೊಳಿ ಹೇಳಿದ್ದಾರೆ.
ಸೋಮವಾರದಂದು ಆದಿತ್ಯಾ ನಗರದ ತಮ್ಮ ನಿವಾಸದಲ್ಲಿ ಬಿಜೆಪಿ ಮುಖಂಡರುಗಳ ಭೇಟಿಯ ಬಗ್ಗೆ ಮಾತನಾಡಿ, ಬಿಜೆಪಿಗೆ ಬರುವಂತೆ ದೊಡ್ಡವರೆಲ್ಲ ಆಹ್ವಾನ ನೀಡಿದ್ದಾರೆ. ಸಹೋದರರಾದ ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಜೊತೆ ಚರ್ಚಿಸಿ ನಿರ್ಧರಿಸುತ್ತೇನೆ ಎಂದಿದ್ದಾರೆ.
ದಿ. ಸುರೇಶ ಅಂಗಡಿಯವರು ಜನಪರ ಕಾರ್ಯಗಳನ್ನು ಮಾಡುವ ಮೂಲಕ ಒಳ್ಳೆಯ ಜನಪ್ರತಿನಿಧಿಯಾಗಿದ್ದರು, ಸದ್ಯ ಸಹೋದರ ಹಾಗೂ ಸಹೋದರಿ ಮಂಗಲಾ ಅಂಗಡಿ ಇಬ್ಬರೂ ಕಣದಲ್ಲಿದ್ದು ಈ ಉಪಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸುತ್ತೇನೆ. ಕಾಂಗ್ರೆಸ್ ನಿಂದ ಸತೀಶ್ ಜಾರಕಿಹೊಳಿಗೆ ಟಿಕೆಟ್ ನೀಡಿದ್ದಾರೆ. ಅವರಿಗೆ ಯಾಕೆ ಟಿಕೆಟ್ ಕೊಟ್ಟಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ಅವರ ಪರ ಪ್ರಚಾರ ಮಾಡಲು ಮುಜುಗರವಾಗುತ್ತದೆ ಎಂದು ಹೇಳಿದರು.
ಕಷ್ಟ ಬಂದವರಿಗೆ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಬೇಕಾಗುತ್ತದೆ. ಸುಖದಲ್ಲಿ ಇರುವವರಿಗೆ ಸಹಾಯ ಮಾಡಿದ್ದೆವೆ. ಜಗದೀಶ ಶೆಟ್ಟರ, ಭೈರತಿ ಬಸವರಾಜ, ಉಮೇಶ ಕತ್ತಿ ನಮ್ಮ ಮನೆಗೆ ಬಂದಿದ್ದಾರೆ. ನಾವು ಅವರಿಗಾಗಿ ಬೆಂಬಲ ಸೂಚಿಸುತ್ತೆವೆ. ಮುಂದೆ ಒಳ್ಳೆಯದಾಗುತ್ತೆದೆ ಎಂದು ಭವಿಷ್ಯದ ರಾಜಕೀಯದ ಬಗ್ಗೆ ಮಾರ್ಮಿಕವಾಗಿ ಹೇಳಿದರು.
