ಸಂಘಟಿತರಾಗಿ ಹಿಂದೂ ಧರ್ಮ ರಕ್ಷಣೆಗೆ ಮುಂದಾಗಿ-ಹಾರಿಕಾ ಮಂಜುನಾಥ.!
ಗೋಕಾಕ: ಜಾತಿ ಮತ ಪಂಥಗಳನ್ನು ಮನೆಗಳನ್ನು ಮನೆಗಳಿಗೆ ಸೀಮಿತಗೊಳಿಸಿ ನಾವೆಲ್ಲ ಹಿಂದೂ ಎಂದು ಸಂಘಟಿತರಾಗಿ ಹಿಂದು ಧರ್ಮ ರಕ್ಷಣೆಗೆ ಮುಂದಾಗುವAತೆ ಬೆಂಗಳೂರಿನ ಕುಮಾರಿ ಹಾರಿಕಾ ಮಂಜುನಾಥ ಕರೆ ನೀಡಿದರು.
ಅವರು, ರವಿವಾರದಂದು ನಗರದ ಮರಾಠ ಗಲ್ಲಿಯಲ್ಲಿ ಜೈ ಭವಾನಿ ಯುವಕ ಮಂಡಳದವರು ಹಮ್ಮಿಕೊಂಡ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಛತ್ರಪತಿ ಶಿವಾಜಿ ಮಾಹಾರಜರ ದೇಶ ಭಕ್ತಿ ಹಾಗೂ ಅಪ್ರತಿಮ ಪರಾಕ್ರಮವನ್ನು ಮೆಚ್ಚಿ ಜಗತ್ತೆ ಗೌರವಿಸುವದರೊಂದಿಗೆ ಅವರ ಜಯಂತಿಯನ್ನು ಆಚರಿಸುತ್ತಿದೆ. ಸಂಗೋಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜರು ದೇಶ ಹಾಗೂ ಧರ್ಮಗವನ್ನು ಉಳಿಸಲು ಹೊರಾಡಿದವರು. ಇಂಯಹ ವೀರರ ಆದರ್ಶಗಳು ಇಂದಿನ ಯುವ ಪೀಳಿಗೆ ಆಚರಣೆಗೆ ತರಬೇಕು. ಧರ್ಮ ರಕ್ಷಣೆಗೆ ಎಲ್ಲ ಹಿಂದುಗಳು ಸಂಘಟಿತರಾಗಬೇಕು. ಧರ್ಮ ಜಾಗೃತಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಮಕ್ಕಳಲ್ಲಿ ಹಿಂದೂ ಸಂಸ್ಕೃತಿಯ ಜಾಗೃತಿ ಮೂಢಿಸಿ ಅವರನ್ನು ದೇಶ ಭಕ್ತರನ್ನಾಗಿ ಮಾಡುವಂತೆ ಕರೆ ನೀಡಿದರು.
ಛತ್ರಪತಿ ಶಿವಾಜಿ ಮಾಹಾರಜರ ಪುತ್ಥಳಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೇದಿಕೆಯ ಮೇಲೆ ರಮಾಕಾಂತ ಕಂಡೂಸ್ಕರ್, ಪ್ರಕಾಶ ನಾಯಿಕ, ಬಾಳಾಸಾಹೇಬ ಮಾಂಗಳೇಕರ, ಸಚೀನ ಜಾಧವ, ದಶರಥ ಗುಡ್ಡದಮನಿ, ಕೃಷ್ಣಾ ಗುಡ್ಡದಮನಿ, ಮಹೇಶ ಚಿಗಡೊಳ್ಳಿ, ನಿರ್ಮಲ ಸುಭಂಜಿ, ಪ್ರಕಾಶ ಮುರಾರಿ, ರೂಪಾ ನಾಯಕ ಇದ್ದರು.