Breaking News

ದೇಶ ಕಟ್ಟುವಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ- ವೆಂಕಟೇಶ ಶಿಂಧಿಹಟ್ಟಿ.!

Spread the love

ದೇಶ ಕಟ್ಟುವಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ- ವೆಂಕಟೇಶ ಶಿಂಧಿಹಟ್ಟಿ.!


ಗೋಕಾಕ: ಸರಕಾರ ಕಾರ್ಮಿಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಕಾರ್ಮಿಕರು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಕಾರ್ಮಿಕ ಇಲಾಖೆ ಪ್ರಾದೇಶಿಕ ಉಪಆಯುಕ್ತ ವೆಂಕಟೇಶ ಶಿಂಧಿಹಟ್ಟಿ ಹೇಳಿದರು.
ಅವರು, ನಗರದ ಶಾಸಕರ ಗೃಹಕಚೇರಿಯಲ್ಲಿ ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ನೌಕರರ ಸಂಘ ಗೋಕಾಕ ಶಾಖೆ ಮತ್ತು ಗೋಕಾಕ ತಾಲೂಕು ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶ ಕಟ್ಟುವಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದಾಗಿದ್ದು, ಪ್ರತಿಯೊಬ್ಬ ಕಾಯಕ ಜೀವಿಯೂ ಕಾರ್ಮಿಕನಾಗಿದ್ದು, ಕಾರ್ಮಿಕರಿಗೆ ಒಳ್ಳೆಯ ಸ್ಥಾನ ಮಾನ ನೀಡಿ ಅವರನ್ನು ಸಮಾಜದಲ್ಲಿ ಗೌರವಯುತವಾಗಿ ನಡೆಸಿಕೊಳ್ಳುವದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಇದೇ ಸಂದರ್ಭದಲ್ಲಿ ನಗರವನ್ನು ಸೌಂದರ್ಯವಾಗಿಡಲು ಶ್ರಮಿಸುತ್ತಿರುವ ನಗರಸಭೆಯ ಪೌರಕಾರ್ಮಿಕರನ್ನು, ವಿವಿಧ ಇಲಾಖೆಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಹಾಗೂ ಪತ್ರಕರ್ತರನ್ನು ಸತ್ಕರಿಸಲಾಯಿತು.


ಕಾರ್ಮಿಕ ಇಲಾಖೆಯಿಂದ ನೀಡಲಾಗುತ್ತಿರುವ ಕಟ್ಟಡ ಕಾರ್ಮಿಕರಿಗೆ ಕೀಟ್‌ಗಳನ್ನು ಫಲಾನುಭವಿಗಳಿಗೆ ವಿತರಿಸಿ, ಕಾರ್ಮಿಕ ಕಾಶಪ್ಪ ಮ್ಯಾಗೇರಿ ಇವರ ಸುಪುತ್ರಿಯ ಮದುವೆಗೆ ಕಾರ್ಮಿಕ ಇಲಾಖೆಯಿಂದ ಬಿಡುಗಡೆಯಾದ ೫೦ಸಾವಿರ ರೂಪಾಯಿ ಸಹಾಯ ಧನವನ್ನು ಕಾರ್ಮಿಕ ಆಯಕ್ತರು ಹಸ್ತಾಂತರಿಸಿದರು.
ವೇದಿಕೆಯ ಮೇಲೆ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಉಪಾಧ್ಯಕ್ಷ ಬಸವರಾಜ ಆರೇನ್ನವರ, ಜಿಪಂ ಮಾಜಿ ಸದಸ್ಯರಾದ ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ, ಶಾಸಕರ ಸಹಾಯಕರಾದ ಕಾಂತು ಎತ್ತಿನಮನಿ, ಸುರೇಶ ಸನದಿ, ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ಮುಖ್ಯ ವೈದ್ಯಾಧಿಕಾರಿ ರವೀಂದ್ರ ಅಂಟಿನ, ಟಿಎಚ್‌ಓ ಮುತ್ತಣ್ಣ ಕೊಪ್ಪದ, ಕಾರ್ಮಿಕ ನಿರೀಕ್ಷಕ ಪಾಂಡುರAಗ ಮಾವರಕರ, ತಾಲೂಕಾಧಿಕಾರಿಗಳಾದ ಡಾ. ಮೋಹನ ಕಮತ, ಎಮ್ ಎಮ್ ನದಾಫ್, ಜಯಶ್ರೀ ಶಿಲವಂತ, ನೌಕರರ ಸಂಘದ ಅಧ್ಯಕ್ಷ ಬಸವರಾಜ ಮುರಘೋಡ, ಪತ್ರಕರ್ತರ ಸಂಘದ ಅಧ್ಯಕ್ಷ ಮನೋಹರ ಮೇಗೇರಿ, ಗೌರವಾಧ್ಯಕ್ಷ ಭೀಮಶಿ ಭರಮನ್ನವರ, ಕರವೇ ಗಜಸೇನೆ ಅಧ್ಯಕ್ಷ ಪವನ ಮಹಾಲಿಂಗಪೂರ ಸೇರಿದಂತೆ ಅನೇಕರು ಇದ್ದರು.
ನೌಕರ ಸಂಘದ ಖಜಾಂಚಿ ಬಿ ಎ ಮಾಲದಿನ್ನಿ ಸ್ವಾಗತಿಸಿ, ವಂದಿಸಿದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

14 + ten =