ಗೋಕಾಕ ಜಲಪಾತದಲ್ಲಿ ಮೊಸಳೆ-ಕಣ್ಣಾಮುಚ್ಚಾಲೆ ಆಟವಾಡ್ತಿದೆ.!
ಗೋಕಾಕ: ಗೋಕಾಕ ಜಲಪಾತದ ಕೆಳಭಾಗದಲ್ಲಿ ಕಳೆದ ಹತ್ತು ದಿನಗಳಿಂದ ಮೊಸಳೆ ಪ್ರತ್ಯಕ್ಷವಾಗಿ ಕಣ್ಮರೆಯಾಗುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಮೊಸಳೆ ಕಂಡಿರುವ ವಿಡಿಯೋ ಹರಿದಾಡುತ್ತಿವೆ.
ಜಲಪಾತದ ಕೆಳಭಾಗದಲ್ಲಿರುವ ನೇಗಿನಾಳ ತೋಟ ( ತಡಸಲ ತೋಟ )ದ ಹತ್ತಿರ ಕಳೆದ ನಾಲ್ಕು ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಮೊಸಳೆ ಇಂದು ಮತ್ತೆ ಅದೇ ಜಾಗದಲ್ಲಿ ಪ್ರತ್ಯಕ್ಷವಾಗಿದೆ.
ಮೊಸಳೆ ಪತ್ತೆ ಸೆರೆಹಿಡಿಯಲು ಅರಣ್ಯ ಇಲಾಖೆ ತಂಡ ಕಳೆದ ಒಂದು ವಾರದಿಂದ ನಿರಂತರವಾಗಿ ಸ್ಥಳೀಯ ಅಯೂಬ್ ಖಾನ್ ತಂಡದ ಜೊತೆಗೆ ಪ್ರಯತ್ನಿಸುತ್ತಿದ್ದು, ದಡಕ್ಕೆ ಬಂದ ಮೊಸಳೆ ಸೆರೆಹಿಡುವಷ್ಟರಲ್ಲೆ ನದಿಗೆ ಹಾರುತ್ತಿದೆ.
ಈ ಮೊದಲು ಗೋಕಾಕ ಜಲಪಾತ ಮೇಲೆ ನಿಂತು ಮಾತ್ರ ವಿಕ್ಷಣೆ ಮಾಡಬಹುದಾಗಿತ್ತು ಕಳೆದ ಕೆಲವು ವರ್ಷಗಳಿಂದ ಕೆಳಭಾಗದಿಂದ ವಿಕ್ಷಣೆಗೆ ಅನುಕೂಲವಾಗುವಂತೆ ರಸ್ತೆ ಮಾಡಲಾಗಿದ್ದು, ಸದ್ಯ ಈ ರಸ್ತೆ ಬಂದ್ ಮಾಡಲಾಗಿದೆ. ಹೀಗಾಗಿ ಮೊಸಳೆಯಿಂದ ಜನರಿಗೆ ಯಾವುದೇ ಅಪಾಯವಿಲ್ಲ. ಅರಣ್ಯ ಇಲಾಖೆಯ ತಂಡದಿಂದ ಮೊಸಳೆ ಶೋಧ ಕಾರ್ಯ ಮುಂದುವರೆದಿದೆ ಎಂದು ವಲಯ ಅರಣ್ಯ ಅಧಿಕಾರಿ ಸಂಜೀವಕುಮಾರ ಸವಸುದ್ದಿ ತಿಳಿಸಿದ್ದಾರೆ.