ಮತದಾರರ ಪಟ್ಟಿಯ ಪರೀಕ್ಷರಣೆಯ ಕಾರ್ಯವು ಇಂದಿನಿ0ದ ಡಿಸೆಂಬರ್-8ರ ವರೆಗೆ ನಡೆಯಲಿದೆ-ಪ್ರಕಾಶ ಹೊಳೆಪ್ಪಗೋಳ.!
ಗೋಕಾಕ: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಕ್ಷರಣೆ ನಿಮಿತ್ಯ ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳ ಜಾಥಾ ಕಾರ್ಯಕ್ರಮಕ್ಕೆ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರು ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಬುಧವಾರದಂದು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಮತದಾರರ ಪಟ್ಟಿಯ ಪರೀಕ್ಷರಣೆಯ ಕಾರ್ಯವು ಇಂದಿನಿAದ ಡಿಸೆಂಬರ್-೮ರ ವರೆಗೆ ನಡೆಯಲಿದ್ದು, ಸಾರ್ವಜನಿಕರು ಕರಡು ಮತದಾರರ ಪಟ್ಟಿಯನ್ನು ಪರೀಕ್ಷಿಸಿ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ಹೆಸರುಗಳನ್ನು ತೆಗೆದು ಹಾಕಲು ಹಾಗೂ ವರ್ಗಾವಣೆಗಾಗಿ ತಮಗೆ ಸಂಬAಧಿಸಿದ ಮತಗಟ್ಟೆಯ ಬಿಎಲ್‌ಓ ಗಳನ್ನು ಅವಶ್ಯಕ ದಾಖಲೆಗಳೊಂದಿಗೆ ಸಂಪರ್ಕ ಮಾಡಬೇಕೆಂದು ತಿಳಿಸಿದರು.
ಕರಡು ಮತದಾರರ ಪಟ್ಟಿಯ ಪರಿಕ್ಷರಣೆಯು ಇಂದಿನಿAದ ಆರಂಭವಾಗಿದ್ದು ಏನಾದರು ಹಕ್ಕು ಮತ್ತು ಆಕ್ಷೇಪಣೆಗಳು ಇದ್ದರೆ ಡಿಸೆಂಬರ್-೮ರೊಳಗಾಗಿ ತಕರಾರು ಸಲ್ಲಿಸಬೇಕು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ಹೆಸರುಗಳನ್ನು ತೆಗೆದು ಹಾಕಲು ಹಾಗೂ ವರ್ಗಾವಣೆಗಾಗಿ ವಿಶೇಷ ಅಭಿಯಾನವನ್ನು ನವಂಬರ್ ೧೨ ಹಾಗೂ ೨೦, ಡಿಸೆಂಬರ್ ೩ ಮತ್ತು ೪ ಹಮ್ಮಿಕೊಳ್ಳಲಾಗಿದ್ದು ಮತದಾರರು ಇದರ ಪ್ರಯೋಜನೆಯನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ಕಂದಾಯ ಅಧಿಕಾರಿ ಶಿವುಕುಮಾರ ಹಳ್ಳೂರ,ಕಂದಾಯ ನಿರೀಕ್ಷಕ ಸಂಜು ಕಡ್ಡಿ, ತಹಶೀಲದಾರ ಕಚೇರಿಯ ಅಧಿಕಾರಿ ಶಿವುಕುಮಾರ ಶೆಟ್ಟರ, ಶಿಕ್ಷಣ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ ಪಾಟೀಲ, ಜೆಎಸ್‌ಎಸ್ ಕಾಲೇಜಿನ ಸಿಬ್ಬಂದಿಯವರು ಇದ್ದರು.