ಇಂಡಿಯಲ್ಲಿ ಸಾರ್ವಜನಿಕರಿಗೆ ಕಿರಿಕಿರಿ
ಯುವ ಭಾರತ ಸುದ್ದಿ ಇಂಡಿ:
ಪಟ್ಟಣದಲ್ಲಿ ವೈಶ್ಯಾವಾಟಿಕೆ ಹೆಚ್ಚುತ್ತಿದ್ದು,ಇದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ. ಪಟ್ಟಣದ ಎಲ್ಲ ಲಾಡ್ಜಗಳಲ್ಲಿ ವೈಶ್ಯಾವಾಟಿಕೆ ರಾಜಾರೋಷವಾಗಿ ನಡೆಯುತ್ತಿದ್ದು ವೈಶ್ಯಾವಾಟಿಕೆ ನಿಯಂತ್ರಿಸಿ,ಆರೋಗ್ಯಯುತ ಸಮಾಜ ನಿರ್ಮಾಣ ಮಾಡಬೇಕಿದ್ದ ಅಧಿಕಾರಿಗಳು ಕಣ್ಣುಮುಚ್ಚಿಕುಳಿತುಕೊಂಡಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪಟ್ಟಣದಲ್ಲಿ ನಾಲ್ಕರಿಂದ ಐದು ಲಾಡ್ಜಗಳು ಇದ್ದು,ಪ್ರತಿನಿತ್ಯ ನೂರಾರು ಜನರು ಈ ಕಾರ್ಯಕ್ಕೆ ಲಾಡ್ಜಗಳಿಗೆ ಬರುತ್ತಾರೆ.ಮಹಾರಾಷ್ಟ್ರ-ಕರ್ನಾಟಕ ಗಡಿ ಭಾಗದಲ್ಲಿ ಇರುವ ಈ ತಾಲೂಕು ಕೇಂದ್ರಗಳಿಗೆ ಮಹಾರಾಷ್ಟ್ರ ದಿಂದಲೂ ವೈಶ್ಯಾವಾಟಿಕೆಗೆ ಜನರು ಬರುತ್ತಿದ್ದಾರೆ.ಶರಣರು,ಸಂತರು,ಕವಿಗಳು,ಸಾಹಿತಿಗಳು ಕಟ್ಟಿ ಬೆಳೆಸಿದ ಈ ನೆಲದಲ್ಲಿ ಇಂಥ ಕೆಲಸಗಳು ನಡೆಯುತ್ತಿರುವುದು ಪ್ರಜ್ಞಾವಂತರು ತಲೆತಗ್ಗಿಸುವಂತಾಗಿದೆ.
ಸಮಾಜ ಬಾಹಿರ ಕೆಲಸಗಳು ನಿತ್ಯ ರಾಜಾರೋಷವಾಗಿ ನಡೆಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದು ವಿಪರ್ಯಾಸ.ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಲಾಡ್ಜಗಲ್ಲಿ ನಡೆಯುತ್ತಿರುವ ಸಮಾಜ ತಲೆತಗ್ಗಿಸುವ ವೈಶ್ಯಾವಾಟಿಕೆ ದಂಧೆಯನ್ನು ನಿಯಂತ್ರಿಸಬೇಕು ಎಂದು ಪಟ್ಟಣದ ಸಾರ್ವಜನಿಕರು ಆಗ್ರಹಿಸಿದ್ದಾರೆ.