Breaking News

Yuva Bharatha

ಕಾಳಿಂಗಪ್ಪ ಕಮ್ಮಾರ ನಿಧನ

ಕಾಳಿಂಗಪ್ಪ ಕಮ್ಮಾರ ಯುವ ಭಾರತ ಸುದ್ದಿ ಇಟಗಿ : ಖಾನಾಪುರ ತಾಲೂಕು ಇಟಗಿ ಗ್ರಾಮದ ಗ್ರಾಮದೇವಿ ದೇವಸ್ಥಾನದ ಅರ್ಚಕರಲ್ಲಿ ಒಬ್ಬರಾದ ಕಾಳಿಂಗಪ್ಪ ಶಿವಲಿಂಗಪ್ಪ ಕಮ್ಮಾರ (82) ನಿಧನರಾದರು. ಮೃತರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳು ಇದ್ದಾರೆ.

Read More »

ಗಿಜರೆ ಆಸ್ಪತ್ರೆ ವತಿಯಿಂದ ಉಚಿತ ರಕ್ತ ತಪಾಸಣೆ ಶಿಬಿರ

ಗಿಜರೆ ಆಸ್ಪತ್ರೆ ವತಿಯಿಂದ ಉಚಿತ ರಕ್ತ ತಪಾಸಣೆ ಶಿಬಿರ ಯುವ ಭಾರತ ಸುದ್ದಿ ಬೆಳಗಾವಿ : ಗಣೇಶಪುರ ಅಯೋಧ್ಯಾ ನಗರ ಗಿಜರೆ ಪ್ರೈಮ್ ಕೇರ್ ಹಾಸ್ಪಿಟಲ್ ವತಿಯಿಂದ ಮಾರ್ಚ್ 13 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ಉಚಿತ ರಕ್ತ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಈ ಶಿಬಿರ ಹಮ್ಮಿಕೊಳ್ಳಲಾಗಿದ್ದು ನಾಗರಿಕರು ಇದರ ಸದುಪಯೋಗ ಪಡೆಯುವಂತೆ ಕೋರಲಾಗಿದೆ.

Read More »

ಬೆಳಗಾವಿಯ ಸುಪ್ರಸಿದ್ಧ ಪರಿಸರವಾದಿ, ಅಪ್ಪಟ ಗಾಂಧಿವಾದಿ ಶಿವಾಜಿ ಕಾಗಣೇಕರ ಅವರಿಗೆ ಇಂದು ಡಾಕ್ಟರೇಟ್ ಪ್ರದಾನ

ಬೆಳಗಾವಿಯ ಸುಪ್ರಸಿದ್ಧ ಪರಿಸರವಾದಿ, ಅಪ್ಪಟ ಗಾಂಧಿವಾದಿ ಶಿವಾಜಿ ಕಾಗಣೇಕರ ಅವರಿಗೆ ಇಂದು ಡಾಕ್ಟರೇಟ್ ಪ್ರದಾನ ಯುವ ಭಾರತ ಸುದ್ದಿ ಗದಗ : ಇಲ್ಲಿಯ ಕರ್ನಾಟಕ ರಾಜ್ಯ ಗ್ರಾಮೀಣ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಮೂರನೇ ಘಟಿಕೋತ್ಸವ ಮಾರ್ಚ್ 10 ರಂದು ನಡೆಯಲಿದೆ. ಈ ಸಂದರ್ಭದಲ್ಲಿ ಬೆಳಗಾವಿಯ ಖ್ಯಾತ ಪರಿಸರವಾದಿ ಹಾಗೂ ರಾತ್ರಿ ಶಾಲೆಗಳನ್ನು ಆರಂಭಿಸಿ ಗ್ರಾಮೀಣ ಜನರಲ್ಲಿ ಶಿಕ್ಷಣ ಮತ್ತು ಜಲ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದ ಶಿವಾಜಿ ಕಾಗಣೆಕರ …

Read More »

ಗೋಕಾಕ : ಬಣ್ಣದೋಕುಳಿಯಲ್ಲಿ ಮಿಂದೆದ್ದ ಜನ

ಗೋಕಾಕ : ಬಣ್ಣದೋಕುಳಿಯಲ್ಲಿ ಮಿಂದೆದ್ದ ಜನ ಯುವ ಭಾರತ ಸುದ್ದಿ ಗೋಕಾಕ: ಗೋಕಾಕ ನಗರದಲ್ಲಿ ಎರಡನೇ ದಿನದ ಬಣ್ಣದಾಟ ಪಿಯುಸಿ ಪರೀಕ್ಷೆಯ ಮಧ್ಯದಲ್ಲೂ ಅತಿ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ ಪಿಯುಸಿ ಎರಡನೇ ವರ್ಷದ ವಿದ್ಯಾರ್ಥಿಗಳ ಪರೀಕ್ಷೆ ಹಿನ್ನಲೆ ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು. ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ತೆರಳಿದ ನಂತರದಲ್ಲಿ ರಂಗ ಪಂಚಮಿಯ ಎರಡನೇ ದಿನದ ಬಣ್ಣದಾಟ ಜರುಗಿತು. ಯುವಕರು, ಮಹಿಳೆಯರು ಮಕ್ಕಳು ಪರಸ್ಪರ ಒಬ್ಬರಿಗೊಬ್ಬರು ಬಣ್ಣ ಎರಚುವ ಮೂಲಕ …

Read More »

ರಾಜ್ಯದಲ್ಲೂ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ-ಲಕ್ಷ್ಮಣ ತಪಸಿ.!

ರಾಜ್ಯದಲ್ಲೂ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ-ಲಕ್ಷ್ಮಣ ತಪಸಿ.! ಗೋಕಾಕ: ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮಣಿಪುರ ಮತ್ತು ನಾಗಾಲ್ಯಾಂಡಗಳಿಗೆ ಬಿಜೆಪಿ ಪಕ್ಷ ಬಹುಮತಗಳಿಂದ ಅಧಿಕಾರಕ್ಕೆ ಬಂದಿದ್ದು ಅದರಂತೆಯೇ ರಾಜ್ಯದಲ್ಲೂ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಓಬಿಸಿ ಮೋರ್ಚಾ ರಾಷ್ಟಿçÃಯ ಕರ‍್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ ಹೇಳಿದರು. ಅವರು, ಗುರುವಾರದಂದು ಸಂಜೆ ನಗರದ ಬಸವೇಶ್ವರ ವೃತ್ತದಲ್ಲಿ ಮೂರು ರಾಜ್ಯಗಳಿಗೆ ಬಿಜೆಪಿ ಅಧಿಕಾರ ಗೆಲುವು ಹಾಗೂ ತ್ರಿಪುರಾದಲ್ಲಿ …

Read More »

ಬೆಳಗಾವಿ ಪೊಲೀಸರ ಕಾರ್ಯಾಚರಣೆ : ಅಂತರರಾಜ್ಯ ವಂಚಕರ ಬಂಧನ

ಬೆಳಗಾವಿ ಪೊಲೀಸರ ಕಾರ್ಯಾಚರಣೆ : ಅಂತರರಾಜ್ಯ ವಂಚಕರ ಬಂಧನ ಯುವ ಭಾರತ ಸುದ್ದಿ,  ಬೆಳಗಾವಿ : ಬೆಳಗಾವಿ ಪೊಲೀಸರು ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ಸು ಸಾಧಿಸಿದ್ದಾರೆ. ಬೆಳಗಾವಿ ಎಪಿಎಂಸಿ ಪೊಲೀಸ್‌ ಕಾರ್ಯಾಚರಣೆ ಕುಖ್ಯಾತ ಅಂತರರಾಜ್ಯ ವಂಚಕರ ಬಂಧನ ಒಟ್ಟು ರೂ .6,09,000 ಮೌಲ್ಯದ ಬಂಗಾರ , ನಗದು, ಮೋಟರ್‌ ಸೈಕಲ್‌ಗಳ ಜಪ್ತಿ ಮಾಡಿಕೊಂಡಿದ್ದಾರೆ. ದಿನಾಂಕ . 29/11/2022 ಎ.ಪಿ.ಎಂ.ಸಿ ಪೊಲೀಸ್ ಠಾಣೆಯ ಹದ್ದಿಯ ಮುರಳೀಧರ ಕಾಲನಿಯ ಸೋಮಲಿಂಗ ಅಮ್ಮಣಗಿ , …

Read More »

ಭಾಷೆಯಲ್ಲಿ ಮಡಿವಂತಿಕೆ ಜಾಸ್ತಿಯಾದರೆ ಭಾಷೆಯೂ ಮಡಿಯುತ್ತದೆ

ಭಾಷೆಯಲ್ಲಿ ಮಡಿವಂತಿಕೆ ಜಾಸ್ತಿಯಾದರೆ ಭಾಷೆಯೂ ಮಡಿಯುತ್ತದೆ ಯುವ ಭಾರತ ಸುದ್ದಿ ಕಾಸರಗೋಡು : ಬಹುಭಾಷಾ ಪ್ರದೇಶವಾಗಿರುವ ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅನುವಾದದ ಕುರಿತಾಗಿ ಹಮ್ಮಿಕೊಂಡಿರುವ ರಾಷ್ಟ್ರೀಯ ವಿಚಾರ ಸಂಕಿರಣ ಔಚಿತ್ಯಪೂರ್ಣ ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಎಚ್. ವೆಂಕಟೇಶ್ವರಲು ಹೇಳಿದರು. ಭಾಷೆಗಳ ಅಳಿವು ಉಳಿವಿನ ಮೇಲೆ ಮನುಷ್ಯನ ಅಸ್ತಿತ್ವವಿದೆ. ಭಾರತದ ವಿವಿಧ ಪ್ರಾದೇಶಿಕ ಭಾಷೆಗಳ ಅಭಿವೃದ್ದಿಯನ್ನು ಪ್ರೋತ್ಸಾಹಿಸಬೇಕಾಗಿದೆ ಎಂದರು. ಕಾಸರಗೋಡಿನ ಪೆರಿಯದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ …

Read More »

ಮೇ ಮೊದಲ ವಾರದಲ್ಲಿ ದ್ವಿತೀಯ ಪಿಯು ಫಲಿತಾಂಶ ಪ್ರಕಟ: ಸಚಿವ ನಾಗೇಶ

ಮೇ ಮೊದಲ ವಾರದಲ್ಲಿ ದ್ವಿತೀಯ ಪಿಯು ಫಲಿತಾಂಶ ಪ್ರಕಟ: ಸಚಿವ ನಾಗೇಶ ಯುವ ಭಾರತ ಸುದ್ದಿ ತುಮಕೂರು: ಮೇ ಮೊದಲ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಬಿ.ಸಿ. ನಾಗೇಶ ಹೇಳಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರಿನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದರು. ಪರೀಕ್ಷೆಗೆ …

Read More »

ಬೆಳಗಾವಿ ಗಡಿಭಾಗ, ಉತ್ತರ ಕರ್ನಾಟಕ ಎಂದರೆ ಏಕೆ ತಾತ್ಸಾರ !

ಬೆಳಗಾವಿ ಗಡಿಭಾಗ, ಉತ್ತರ ಕರ್ನಾಟಕ ಎಂದರೆ ಏಕೆ ತಾತ್ಸಾರ ! ಅಖಂಡ ಕರ್ನಾಟಕ ನಿರ್ಮಾಣವಾದ ದಿನದಿಂದಲೂ ಸರಕಾರಗಳು ಬೆಳಗಾವಿ ಎಂದರೆ ತಾತ್ಸಾರ ಮಾಡುತ್ತಲೇ ಬಂದಿವೆ, ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಆಕಾಶವಾಣಿ ಕೇಂದ್ರಗಳು ಬೆಳಗಾವಿಗೇ ಬರಬೇಕಾಗಿತ್ತು ಬರಲಿಲ್ಲ – ಕಾರಣ ಗಡಿಭಾಗವೆಂಬ ಹಣೆಪಟ್ಟಿ. ಸುವರ್ಣ ವಿಧಾನಸೌಧ ಬಂದರೂ ಸಚಿವಾಲಯಗಳು ಬರಲಿಲ್ಲ. ಶಾಸಕರ ಭವನಗಳನ್ನು ನಿರ್ಮಿಸಲಿಲ್ಲ. ಪೂರ್ಣಾವಧಿಗೆ ಅಧಿವೇಶನಗಳನ್ನು ಮಾಡುತ್ತಿಲ್ಲ. ಬೆಳಗಾವಿಯಿಂದ ಪುಣೆ-ಮುಂಬಯಿ-ದೆಹಲಿ-ಬೆಂಗಳೂರು ನಡುವೆ ಹಾರುತ್ತಿದ್ದ ವಿಮಾನಗಳು ರದ್ದಾದವು. ವಂದೇ ಭಾರತ ರೈಲನ್ನು …

Read More »

ಲಿಂಗರಾಜ ಕಾಲೇಜಿನಲ್ಲಿ ವಿಶ್ವಮಹಿಳಾ ದಿನಾಚರಣೆ ಸಂಭ್ರಮ

ಲಿಂಗರಾಜ ಕಾಲೇಜಿನಲ್ಲಿ ವಿಶ್ವಮಹಿಳಾ ದಿನಾಚರಣೆ ಸಂಭ್ರಮ ಯುವ ಭಾರತ ಸುದ್ದಿ ಬೆಳಗಾವಿ : ಮಹಿಳೆಯರು ಜಾಗತಿಕವಾಗಿ ಅಗಾಧ ಸಾಧನೆಯನ್ನು ಮಾಡಿದ್ದಾರೆ. ಇಂದು ಅವರು ಸ್ವಾವಲಂಬಿಗಳಾಗಿ ಜೀವನವನ್ನು ನಡೆಸುವಂತರಾಗಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕೆಂದು ರಾಣಿ ಚೆನ್ನಮ್ಮ ಬ್ಯಾಂಕ್ ಅಧ್ಯಕ್ಷೆ ಆಶಾ ಪ್ರಭಾಕರ ಕೋರೆ ಹೇಳಿದರು. ಲಿಂಗರಾಜ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಸಾಧನೆಯ ಶಿಖರವನ್ನು ಏರಿದ್ದಾರೆ. ಎಲ್ಲ ಕ್ಷೇತ್ರದಲ್ಲಿಯೂ ಮೌಲಿಕವಾದ ಕೊಡುಗೆಯನ್ನು ನೀಡಿದ್ದಾರೆ. …

Read More »