Breaking News

BIG BREAKING ನೋಟು ರದ್ದು : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Spread the love

BIG BREAKING ನೋಟು ರದ್ದು : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಯುವ ಭಾರತ ಸುದ್ದಿ ದೆಹಲಿ : ಮೋದಿ ಸರ್ಕಾರಕ್ಕೆ ನ್ಯಾಯಾಲಯ ಬಿಗ್ ರಿಲೀಫ್ ನೀಡಿದೆ. 500 ಹಾಗೂ 1,000 ರೂ . ನೋಟುಗಳನ್ನು ಅಮಾನೀಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ . ಕೇಂದ್ರ ಸರ್ಕಾರದ ನೋಟು ಅಮಾನೀಕರಣ ನಿರ್ಧಾರ ಸರಿಯಾಗಿದೆ ಎಂದು ನ್ಯಾಯಮೂರ್ತಿ ಎಸ್.ಎ. ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳಿರುವ ಪೀಠವು ತೀರ್ಪು ಪ್ರಕಟಿಸಿದೆ . 2016 ರಲ್ಲಿ ಸರ್ಕಾರವು ನೋಟು ಬ್ಯಾನ್ ಮಾಡುವ ನಿರ್ಧಾರಕ್ಕೆ ಸಂಬಂಧಿಸಿದ ದಾಖಲೆ ಸಲ್ಲಿಸಬೇಕೆಂದು ಸುಪ್ರೀಂ ಕೋರ್ಟ್ 2022 ರ ಡಿ .7 ರಂದು ಕೇಂದ್ರ ಸರ್ಕಾರ ಮತ್ತು ಆರ್‌ಬಿಐಗೆ ನಿರ್ದೇಶನ ನೀಡಿತ್ತು .

ನೋಟ್ ಬ್ಯಾನ್ ಪ್ರಶ್ನಿಸಿ ಸಲ್ಲಿಸಲಾಗಿರುವ 58 ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ . ನೋಟ್ ಅಮಾನೀಕರಣ ವಿಚಾರಗಳಲ್ಲಿ ಸುಪ್ರೀಂ ಮಧ್ಯಪ್ರವೇಶಿಸುವಂತಿಲ್ಲ . ನೋಟ್ ಬದಲಿಸಲು ಸರ್ಕಾರ ಜನರಿಗೆ ನೀಡಿದ ಕಾಲಾವಕಾಶ ಸರಿಯಾಗಿದೆ . ಆ ಮೂಲಕ ಪಂಚಪೀಠವು ಕೇಂದ್ರ ಸರ್ಕಾರದ ಕ್ರಮದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎನ್ನುವ ಅಭಿಪ್ರಾಯವನ್ನು ತಿಳಿಸಿದೆ .

ನೋಟ್ ಬ್ಯಾನ್ ಸಂಸತ್ತಿನಲ್ಲಿ ಚರ್ಚಿಸಬೇಕೆಂದ ಪೀಠ :ನೋಟು ಅಮಾನೀಕರಣ ಆರಂಭಿಸಿರುವುದು ಕೇಂದ್ರ ಸರ್ಕಾರವೇ ಹೊರತು ಆರ್‌ಬಿಐ ಅಲ್ಲ ಎಂದು ನ್ಯಾ . ನಾಗರತ್ನ ಹೇಳಿದ್ದಾರೆ . ಈ ಕೇಸ್‌ನಲ್ಲಿ 2 ನೇ ತೀರ್ಪು ಓದಿದ ಅವರು , ನೋಟ್ ಬ್ಯಾನ್‌ಗೆ ಕೇಂದ್ರ ಹಾಗೂ ಆರ್‌ಬಿಐಗೆ ಅಧಿಕಾರವಿದೆ . ಆದರೆ , ನೋಟ್ ಬ್ಯಾನ್ ಆರ್‌ಬಿಐಯ ಪರಮಾಧಿಕಾರವಲ್ಲ.

ಕೇಂದ್ರದ ನೋಟು ಅಮಾನೀಕರಣ ನೀತಿಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ . 2016 ರ ನವೆಂಬರ್ 8 ರಂದು ರಾತ್ರಿ 8:15 ರ ಸುಮಾರಿಗೆ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿ , 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ್ದರು . ಮೋದಿ ತೆಗೆದುಕೊಂಡ ನಿರ್ಧಾರ ಭಾರತವಷ್ಟೇ ಅಲ್ಲ , ಇಡೀ ಜಗತ್ತೇ ಬೆರಗಾಗುವಂತೆ ಮಾಡಿತ್ತು . ಬಳಿಕ 1000 , 500 ಹಾಗೂ 2000 ಮುಖಬೆಲೆಯ ಹೊಸ ನೋಟುಗಳನ್ನು ಪರಿಚಯಿಸಲಾಗಿತ್ತು .

ನೋಟ್ ಬ್ಯಾನ್ : ಸುಪ್ರೀಂ 4.1 ಅನುಪಾತದ ತೀರ್ಪು 2016 ರ ನೋಟ್ ಬ್ಯಾನ್ ಪ್ರಶ್ನಿಸಿ ಸಲ್ಲಿಕೆಯಾಗಿದ್ದ 58 ಅರ್ಜಿ ವಜಾಗೊಳಿಸಿದ ಸುಪ್ರೀಂ ಪಂಚ ಪೀಠ , 4.1 ಅನುಪಾತದಲ್ಲಿ ತೀರ್ಪು ಪ್ರಕಟಿಸಿದೆ . ಆ ಮೂಲಕ ಕೇಂದ್ರ ಸರ್ಕಾರದ ನೋಟ್ ಬ್ಯಾನ್ ಕ್ರಮ ಸಿಂಧು ಎಂದು ಎತ್ತಿ ಹಿಡಿದಿದೆ . ನ್ಯಾ.ನಜೀರ್ ನೇತೃತ್ವದ ಪಂಚಪೀಠದಲ್ಲಿ ನಾಲ್ವರು ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ , ನ್ಯಾ.ಎಎಸ್ ಬೋಪಣ್ಣ ಹಾಗೂ ವಿ . ರಾಮಸುಬ್ರಮಣಿಯನ್ ನೋಟ್ ಬ್ಯಾನ್ ಸರಿಯಾದ ಕ್ರಮ ಎಂದು ಹೇಳಿದೆ . ಆದರೆ , ನ್ಯಾ . ನಾಗರತ್ನ ಅವರು ವ್ಯತಿರಿಕ್ತ ತೀರ್ಪು ನೀಡಿದ್ದಾರೆ .


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

3 + 6 =