Breaking News

ಇತ್ತೀಚಿನ ಸುದ್ದಿ

ಚುನಾವಣೋತ್ತರ ಸಮೀಕ್ಷೆಗಳಿಂದ ಸಂಭವನೀಯ ಅತಂತ್ರ ವಿಧಾನಸಭೆ ಭವಿಷ್ಯ: ಬಿಜೆಪಿ ಇಲ್ಲವೇ ಕಾಂಗ್ರೆಸ್‌ ಜೊತೆ ಮೈತ್ರಿಗೆ ಸಿದ್ಧ ಎಂದ ಕುಮಾರಸ್ವಾಮಿ..!,

ಚುನಾವಣೋತ್ತರ ಸಮೀಕ್ಷೆಗಳಿಂದ ಸಂಭವನೀಯ ಅತಂತ್ರ ವಿಧಾನಸಭೆ ಭವಿಷ್ಯ: ಬಿಜೆಪಿ ಇಲ್ಲವೇ ಕಾಂಗ್ರೆಸ್‌ ಜೊತೆ ಮೈತ್ರಿಗೆ ಸಿದ್ಧ ಎಂದ ಕುಮಾರಸ್ವಾಮಿ..! ಯುವ ಭಾರತ ಸುದ್ದಿ ಬೆಂಗಳೂರು: ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ತಮ್ಮ ಪಕ್ಷ ಕಾಂಗ್ರೆಸ್ ಅಥವಾ ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ)ದೊಂದಿಗೆ ಚುನಾವಣೋತ್ತರ ಮೈತ್ರಿಗೆ ಮುಕ್ತವಾಗಿದೆ ಎಂದು ಹೇಳಿದ್ದಾರೆ. ಶನಿವಾರದ ಮತಗಳ ಎಣಿಕೆಗೆ ಮುಂಚಿತವಾಗಿ ಅವರ ಈ ಹೇಳಿಕೆ ಬಂದಿದೆ. ಹೆಚ್ಚಿನ ಚುನಾವಣೋತ್ತರ ಅತಂತ್ರ ವಿಧಾನಸಭೆ …

Read More »

ಮತ ಎಣಿಕೆಯತ್ತ ಎಲ್ಲರ ಲೆಕ್ಕಾಚಾರ

ಮತ ಎಣಿಕೆಯತ್ತ ಎಲ್ಲರ ಲೆಕ್ಕಾಚಾರ ಯುವ ಭಾರತ ಸುದ್ದಿ ಬೆಂಗಳೂರು : ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಯಾರು ಗೆಲುವು ಪಡೆಯಬಹುದು ಎಂಬ ಚರ್ಚೆ ಈಗ ಎಲ್ಲೆಡೆ ನಡೆದಿದೆ. ಮತಗಟ್ಟೆ ಸಮೀಕ್ಷೆಯ ಮಾಹಿತಿ ಹಾಗೂ ಮತ ಎಣಿಕೆ ಮೂಡಿಸಿರುವ ಕುತೂಹಲದ ಮಧ್ಯೆಯೇ, ಅಧಿಕಾರ ಹಿಡಿಯುವರು ಯಾರು? ಅತಂತ್ರ ಪರಿಸ್ಥಿತಿ ಎದುರಾದರೆ ಯಾರ ಜತೆಗೆ ಕೈ ಜೋಡಿಸಬೇಕು? ಯಾರನ್ನು ಸೆಳೆಯಬೇಕು ಎಂಬ ಲೆಕ್ಕಾಚಾರ ವಿವಿಧ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ತುಸು ಚುರುಕುಗೊಂಡಿದೆ. …

Read More »

ಕರ್ನಾಟಕದಲ್ಲಿ 31 ಸಾವಿರ ಬೂತ್‌ಗಳಲ್ಲಿ ಬಿಜೆಪಿಗೆ ಮುನ್ನಡೆ : ಬಿ.ಎಲ್. ಸಂತೋಷ ಟ್ವೀಟ್‌

ಕರ್ನಾಟಕದಲ್ಲಿ 31 ಸಾವಿರ ಬೂತ್‌ಗಳಲ್ಲಿ ಬಿಜೆಪಿಗೆ ಮುನ್ನಡೆ : ಬಿ.ಎಲ್. ಸಂತೋಷ ಟ್ವೀಟ್‌ ‌ ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣಾ ಮತದಾನ ಮುಕ್ತಾಯವಾಗಿದ್ದು, ಅದರ ನಂತರ ಪ್ರಕಟವಾದ ಮತದಾನೋತ್ತರ ಸಮೀಕ್ಷಾ ವರದಿ ಬೇಕಿಲ್ಲ, ಈ ಹಿಂದಿನ ಎಕ್ಸಿಟ್ ಪೋಲ್ ಸಮೀಕ್ಷೆಗಳೆಲ್ಲ ಉಲ್ಟಾ ಪಲ್ಟಾ ಆಗಿದ್ದವು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಪ್ರತಿಕ್ರಿಯಿಸಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಶನಿವಾರ ನಡೆಯಲಿದೆ. ಈ …

Read More »

ಶನಿವಾರ ಚುನಾವಣಾ ಫಲಿತಾಂಶ ಘೋಷಣೆ !

ಶನಿವಾರ ಚುನಾವಣಾ ಫಲಿತಾಂಶ ಘೋಷಣೆ ! ಯುವ ಭಾರತ ಸುದ್ದಿ ಬೆಂಗಳೂರು : ವಿಧಾನಸಭಾ ಚುನಾವಣೆಯ ಕುತೂಹಲಕ್ಕೆ ಮೇ 13(ಶನಿವಾರ)ರಂದು ತೆರೆ ಬೀಳಲಿದೆ. ಅಂದು ರಾಜ್ಯದ ಎಲ್ಲಾ ವಿಧಾನಸಭಾ ಮತಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಮಧ್ಯಾಹ್ನ 1:00 ಸುಮಾರಿಗೆ ಚುನಾವಣೆ ಫಲಿತಾಂಶದ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ. ಈ ಸಲ ಬಹುತೇಕ ಚುನಾವಣಾ ಸಮೀಕ್ಷೆಗಳು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ನುಡಿದಿವೆ. ಆದರೆ ಕೆಲ ಸಮೀಕ್ಷೆಗಳು ಆಡಳಿತರೂಢ ಬಿಜೆಪಿ ಅಧಿಕಾರಕ್ಕೆ …

Read More »

ಎಸ್.ಎಸ್.ಎಲ್.ಸಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಅಭಿನಂದನೆ ಸಲ್ಲಿಸಿದ ಶಾಲಾ ಸಿಬ್ಬಂದಿ ವರ್ಗ

ಎಸ್.ಎಸ್.ಎಲ್.ಸಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಅಭಿನಂದನೆ ಸಲ್ಲಿಸಿದ ಶಾಲಾ ಸಿಬ್ಬಂದಿ ವರ್ಗ ಬೆಳಗಾವಿ : ಬೆಳಗಾವಿ ಗ್ರಾಮೀಣ ಭಾಗದ ಕಡೋಲಿ ಸರ್ಕಾರಿ ಪ್ರೌಡ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಾದ ಐಶ್ವರ್ಯ ಕಣಬರಗಿ 93.28%,ರೇಣುಕಾ ಅಜಾಣಿ 88.38% ಹಾಗೂ ಶ್ವೇತಾ ನರೋಟಿ 88.16% ಅಂಕ ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಒಟ್ಟು ಶಾಲಾ ಪಲಿತಾಂಶ 94.71% ಆಗಿದ್ದು, ಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕಡೋಲಿ ಸರ್ಕಾರಿ …

Read More »

ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನ, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ

ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನ, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಜನರ, ಕಾರ್ಯಕರ್ತರ ಆಸೆಯಂತೆ ಗೆಲುವಿನ ಅಂತರ ಹೆಚ್ಚಿನ ಪ್ರಮಾಣದಲ್ಲಾಗಲೆಂದು ದೇವರಲ್ಲಿ ಪ್ರಾರ್ಥನೆ: ಬಾಲಚಂದ್ರ ಜಾರಕಿಹೊಳಿ ಗೋಕಾಕ : ಜಿಲ್ಲೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಬಂದು ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರುತ್ತದೆ ಎಂದು ಕೆಎಂಎಫ್ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಹೊಸಪೇಟ ಗಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ‌೩ …

Read More »

69 ವರ್ಷದ ಬಳಿಕ ಮೊದಲ ಬಾರಿಗೆ ಮತ ಚಲಾವಣೆ

69 ವರ್ಷದ ಬಳಿಕ ಮೊದಲ ಬಾರಿಗೆ ಮತ ಚಲಾವಣೆ ಕೊಪ್ಪಳ: ಜನಿಸಿದ 18 ವರ್ಷಕ್ಕೆ ಮತದಾನದ ಹಕ್ಕು ಎಲ್ಲರಿಗೂ ದೊರಕಿರುತ್ತದೆ. ಕೆಲವರು ಕೆಲ ಕಾರಣಕ್ಕೆ ಮತದಾನ ಮಾಡಿರುವುದಿಲ್ಲ. ಅದರಂತೆ ಕೊಪ್ಪಳದಲ್ಲೂ ಓರ್ವ ಮಹಿಳೆ ತಮ್ಮ 69 ವರ್ಷದ ಬಳಿಕ ಇದೇ ಮೊದಲ ಬಾರಿಗೆ ಮತ ಚಲಾಯಿಸಿ ಗಮನ ಸೆಳೆದಿದ್ದಾರೆ. ಹೌದು, ಕೊಪ್ಪಳದ ಕಲ್ಯಾಣ ನಗರದ ನಿವಾಸಿ ರುಕ್ಮಿಣಿಬಾಯಿ ವಿಠ್ಠಲಾಚಾರ್ಯ ನರಗುಂದ ಎಂಬ 69 ವರ್ಷದ ಮಹಿಳೆ ಇದೇ ಮೊದಲ ಬಾರಿಗೆ …

Read More »

ಮತದಾನಕ್ಕೆ ಬಂದಿದ್ದ ಇಬ್ಬರ ಸಾವು

  ಮತದಾನಕ್ಕೆ ಬಂದಿದ್ದ ಇಬ್ಬರ ಸಾವು ಯುವ ಭಾರತ ಸುದ್ದಿ ಹಾಸನ/ಬೆಳಗಾವಿ : ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮತದಾನ ಮಾಡಿ ಪೋಲಿಂಗ್ ಬೂತ್‌ನಿಂದ ಹೊರಗೆ ಬಂದ ವ್ಯಕ್ತಿಯೊಬ್ಬ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಜಯಣ್ಣ (49) ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ಘಟನೆ ನಡೆದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಾಜಕೀಯ ಪಕ್ಷಗಳ ಕಾರ್ಯಕರ್ತರೊಂದಿಗೆ ಒಡನಾಟ ಹೊಂದಿದ್ದ ಜಯಣ್ಣ, ಬೆಳಗ್ಗೆ …

Read More »

ಕಿಚ್ಚ ಪತ್ರದಲ್ಲೇನಿದೆ ?

ಕಿಚ್ಚ ಪತ್ರದಲ್ಲೇನಿದೆ ? ಯುವ ಭಾರತ ಸುದ್ದಿ ಬೆಂಗಳೂರು : ಬಿಜೆಪಿ ವತಿಯಿಂದ ಕಿಚ್ಚ ಸುದೀಪ್​ ಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಸುದೀಪ್​ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಭರ್ಜರಿ ಪ್ರಚಾರ ಕಾರ್ಯ ನಡೆಸಿದ್ದರು. ರಾಜ್ಯದ ಪ್ರತಿಷ್ಠಿತ ಕಣಗಳಲ್ಲಿ ಒಂದಾದ ಶಿಕಾರಿಪುರ ಕ್ಷೇತ್ರವ್ಯಾಪ್ತಿಯ ಶಿಕಾರಿಪುರ ಹಾಗೂ ಶಿರಾಳಕೊಪ್ಪಗಳಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಪರ ಪ್ರಚಾರ ನಡೆಸಿದ್ದರು. ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ …

Read More »

5 ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರ

5 ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರ ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ಜಿಲ್ಲಾ ಬಾಲಭವನ ಹಾಗೂ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ 5 ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ 15 ದಿನಗಳ ಉಚಿತ ಬೇಸಿಗೆ ಶಿಬಿರವನ್ನು ಮೇ 16 ರಿಂದ ಮೇ 30 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಆಯೋಜಿಸಲಾಗಿದೆ. ಶಿಬಿರದಲ್ಲಿ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ …

Read More »