Breaking News

ಬೆಳಗಾವಿ

ಬೆಳಗಾವಿಯಲ್ಲಿ ಅಮಿತ್ ಶಾ

ಬೆಳಗಾವಿಯಲ್ಲಿ ಅಮಿತ್ ಶಾ ಯುವ ಭಾರತ ಸುದ್ದಿ ಬೆಳಗಾವಿ : ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ. ಎಂ.ಕೆ.ಹುಬ್ಬಳ್ಳಿಯಲ್ಲಿ ಬಿಜೆಪಿಯ ಜನಸಂಕಲ್ಪ ಯಾತ್ರೆ ಮುಗಿಸಿಕೊಂಡು ಬಂದಿರುವ ಅಮಿತ್ ಶಾ ಅವರು ಬೆಳಗಾವಿಯ ಖಾಸಗಿ ಹೋಟೆಲಿಗೆ ಆಗಮಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸೇರಿದಂತೆ ಘಟಾನುಘಟಿ ನಾಯಕರು …

Read More »

ಭೀಕರ ಬೈಕ್ ಅಪಘಾತ : ಮೂವರು ಸಾವು

ಭೀಕರ ಬೈಕ್ ಅಪಘಾತ : ಮೂವರು ಸಾವು ಯುವ ಭಾರತ ಸುದ್ದಿ ರಾಯಬಾಗ : ಬೈಕ್ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಯಬಾಗ ತಾಲೂಕಿನ ನಿಡಗುಂದಿ ಬಳಿ ಶನಿವಾರ ನಡೆದಿದೆ. ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿದ್ದು ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ. ರಾಯಬಾಗ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Read More »

ಕಾದರವಳ್ಳಿಯ ಮಲಪ್ರಭಾ ನದಿತೀರದ ಚರಂತಿಮಠದ ವತಿಯಿಂದ ಶ್ರೀ ಸದ್ಗುರು ಅದೃಶ್ಯ ಶಿವಯೋಗೀಶ್ವರರ 86 ನೇ ಸ್ಮರಣೋತ್ಸವ

ಕಾದರವಳ್ಳಿಯ ಮಲಪ್ರಭಾ ನದಿತೀರದ ಚರಂತಿಮಠದ ವತಿಯಿಂದ ಶ್ರೀ ಸದ್ಗುರು ಅದೃಶ್ಯ ಶಿವಯೋಗೀಶ್ವರರ 86 ನೇ ಸ್ಮರಣೋತ್ಸವ ಯುವ ಭಾರತ ಸುದ್ದಿ ಇಟಗಿ : ಕಾದರವಳ್ಳಿ ಗ್ರಾಮದ ಮಲಪ್ರಭಾ ನದಿ ತೀರದ ಶ್ರೀ ಸದ್ಗುರು ಅದೃಶ್ಯಶಿವಯೋಗೀಶ್ವರರ ಜ್ಞಾನಾಶ್ರಮ ಚರಂತಿಮಠದಲ್ಲಿ ಶ್ರೀ ಸದ್ಗರು ಅದೃಶ್ಯಶಿವಯೋಗೀಶ್ವರರ 86 ನೇ ಸ್ಮರಣೋತ್ಸವ ಅಂಗವಾಗಿ ಮೇಣೆ ಉತ್ಸವ ವಿಜ್ರಂಭಣೆಯಿಂದ ನಡೆಯಿತು. ಚರಂತಿಮಠದ ಮೂಲ ಗದ್ದುಗೆಯಿಂದ ಆರಂಭಗೊಂಡ ಶ್ರೀ ಸದ್ಗುರು ಅದೃಶ್ಯಶಿವಯೋಗೀಶ್ವರರ ಮೇಣೆ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ …

Read More »

ಸಂಧಾನವು ವಿರೋಧಾತ್ಮಕವಲ್ಲದ ನ್ಯಾಯ ವಿಧಾನವಾಗಿದೆ :ಕಮಲ್

ಸಂಧಾನವು ವಿರೋಧಾತ್ಮಕವಲ್ಲದ ನ್ಯಾಯ ವಿಧಾನವಾಗಿದೆ :ಕಮಲ್ ಯುವ ಭಾರತ ಸುದ್ದಿ ಬೆಳಗಾವಿ: ನ್ಯಾಯ ವಿಧಾನವು ಬದಲಾದಂತೆ ಇತ್ತೀಚಿನ ದಿನಗಳಲ್ಲಿ ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆಯುನ್ಯಾಯಾಂಗ ವ್ಯವಸ್ಥೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಪಕ್ಷಗಾರರ ನಡುವಿನ ವಿವಾದವನ್ನು ಸುಲಭವಾಗಿ ತನ್ನದೇ ವಿಶಿಷ್ಟ ಶೈಲಿಯ ಕ್ರಮ ವಿಧಾನಗಳಾದ ‘ಮಾತುಕತೆ’ ಹಾಗೂ ‘ಮಧ್ಯಸ್ಥಿಕೆ’ ಮೂಲಕ ಶೀಘ್ರವಾಗಿ ಪರಿಹರಿಸುತ್ತದೆ. ಇದನ್ನು ವಿವಾದಗಳ ವಿವಿಧ ಶ್ರೇಣಿಗೆ ಅನ್ವಯಿಸಿ, ಪರಿಹಾರ ಕಂಡುಕೊಳ್ಳಲು ಸೂಕ್ತ ವೇದಿಕೆಯಾಗಿದೆ. ಜೊತೆಗೆ ಸಂಧಾನವು ಸ್ವಯಂ …

Read More »

ನೇಕಾರ ಸಮುದಾಯ ಸಂಘಟಿತವಾಗಲಿ ; ಹಂಪಿ ಹೇಮಕೂಟದ ಗಾಯತ್ರಿ ಪೀಠದ ಶ್ರೀ ದಯಾನಂದ ಮಹಾಸ್ವಾಮೀಜಿ ಕರೆ

ನೇಕಾರ ಸಮುದಾಯ ಸಂಘಟಿತವಾಗಲಿ ; ಹಂಪಿ ಹೇಮಕೂಟದ ಗಾಯತ್ರಿ ಪೀಠದ ಶ್ರೀ ದಯಾನಂದ ಮಹಾಸ್ವಾಮೀಜಿ ಕರೆ ಯುವ ಭಾರತ ಸುದ್ದಿ ರಾಮದುರ್ಗ : ನಮ್ಮ ನೇಕಾರ ಸಮಾಜ ಉನ್ನತಿ ಹೊಂದಬೇಕಾದರೆ, ಸಂಘಟಿತರಾಗಬೇಕು. ಇದರೊಟ್ಟಿಗೆ ಸರ್ವರಂಗಗಳು ಮುಂದೆ ಬರಬೇಕು ಎಂದು ಹಂಪಿ ಹೇಮಕೂಟದ ಗಾಯತ್ರಿ ಪೀಠದ ಶ್ರೀಶ್ರೀಶ್ರೀ ದಯಾನಂದ ಮಹಾಸ್ವಾಮಿಗಳು ಹೇಳಿದರು. ರಾಮದುರ್ಗ ತಾಲೂಕಿನ ಮನಿಹಾಳ-ಸುರೇಬಾನ ಗ್ರಾಮದ ಘಾಳಿಪೇಟೆಯ ವೇ.ಮೂ.ಶ್ರೀ ಅಯ್ಯಪ್ಪಜ್ಜ ದೇವಸ್ಥಾನದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ 31 ಸರ್ವ ಧರ್ಮ …

Read More »

ಮುಚ್ಚಂಡಿಯ ಪೋರನ ಭಾಷಣಕ್ಕೆ ತಲೆದೂಗಿದ ಜನ

ಮುಚ್ಚಂಡಿಯ ಪೋರನ ಭಾಷಣಕ್ಕೆ ತಲೆದೂಗಿದ ಜನ ಯುವ ಭಾರತ ಸುದ್ದಿ ಬೆಳಗಾವಿ : ಐದು ವರ್ಷದ ಈ ಪುಟ್ಟ ಪೋರ ಕನ್ನಡ ಹಾಗೂ ಇಂಗ್ಲಿಷನಲ್ಲಿ ನಿರರ್ಗಳವಾಗಿ ಭಾಷಣ ಮಾಡುವುದು, ಒಂದು ಲಕ್ಷದವರೆಗೆ ಅಂಕಿಗಳನ್ನು ಹೇಳುವುದು ಹಾಗೂ ಜಗತ್ತಿನ ಅನೇಕ ವಿಜ್ಞಾನಿಗಳ ಹೆಸರನ್ನು ಥಟ್ ಅಂತ ಹೇಳುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ. ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದ ಐದೂವರೆ ವರ್ಷದ ವೇದಾಂತ ಕೋಳಜಿಗೌಡ ಎಂಬ ಪುಟ್ಟ ಪೋರ ಯುಕೆಜಿ ಓದುತ್ತಿದ್ದಾನೆ. …

Read More »

ದೇಶ ಮೊದಲು ಉಳಿದೆಲ್ಲವೂ ನಂತರದ್ದು: ಸುರೇಶ ನಾಯರಿ

ದೇಶ ಮೊದಲು ಉಳಿದೆಲ್ಲವೂ ನಂತರದ್ದು: ಸುರೇಶ ನಾಯರಿ ಯುವ ಭಾರತ ಸುದ್ದಿ ಬೆಳಗಾವಿ : ಪ್ರತಿಯೊಬ್ಬ ವ್ಯಕ್ತಿಯು ದೇಶಕ್ಕೆ ಮೊದಲ ಆದ್ಯತೆ ನೀಡಬೇಕು. ನಂತರ ಪಕ್ಷ, ಮತ, ಪಂತ, ಸಿದ್ಧಾಂತಗಳು. ಹೀಗಾದಾಗ ನಾವೆಲ್ಲರೂ ಒಂದೇ ಎಂಬ ಭಾವನೆ ಎಲ್ಲರಲ್ಲೂ ಮೂಡಿ ದೇಶದ ಪ್ರಗತಿಯು ಸಾಧ್ಯವೆಂದು ಗುರು ವಿವೇಕಾನಂದ ವಿವಿಧ ಉದ್ದೇಶಗಳ ಸಹಕಾರ ಸಂಘದ ನಿರ್ದೇಶಕ ಸುರೇಶ್ ನಾಯರಿ ಅಭಿಪ್ರಾಯ ಪಟ್ಟರು. ನಗರದ ಗುರು ವಿವೇಕಾನಂದ ವಿವಿಧೋದ್ದೇಶಗಳ ಸಹಕಾರ ಸಂಘದ ಕಚೇರಿಯಲ್ಲಿ …

Read More »

ಬೆಳಗಾವಿಯಲ್ಲಿ ಸಿರಿಧಾನ್ಯ-ಸಾವಯವ ಮೇಳಕ್ಕೆ ಸಚಿವ ಗೋವಿಂದ ಕಾರಜೋಳ ಚಾಲನೆ

ಬೆಳಗಾವಿಯಲ್ಲಿ ಸಿರಿಧಾನ್ಯ-ಸಾವಯವ ಮೇಳಕ್ಕೆ ಸಚಿವ ಗೋವಿಂದ ಕಾರಜೋಳ ಚಾಲನೆ ಯುವ ಭಾರತ ಸುದ್ದಿ ಬೆಳಗಾವಿ : ಪಾಶ್ಚಿಮಾತ್ಯ ದೇಶಗಳ ಆಹಾರ ಪದ್ಧತಿ ಅನುಕರಣೆಯಿಂದ ಕಿಡ್ನಿ ಸಮಸ್ಯೆ, ಸಕ್ಕರೆ ಕಾಯಿಲೆ, ಕ್ಯಾನ್ಸರ್ ಮತ್ತಿತರ ರೋಗಗಳಿಂದ ನಾವು ಬಳಲುತ್ತಿದ್ದೇವೆ. ಆದ್ದರಿಂದ ಸಿರಿಧಾನ್ಯ ಹಾಗೂ ಸಾವಯವ ದೇಶೀಯ ಆಹಾರ ಸೇವನೆಯ ಮೂಲಕ ಆರೋಗ್ಯ ‌ರಕ್ಷಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕರೆ ನೀಡಿದರು. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಕೃಷಿ ಇಲಾಖೆ …

Read More »

ಚಿಂತನ ಮಂಥನ ಇಂದು

ಚಿಂತನ ಮಂಥನ ಇಂದು ಯುವ ಭಾರತ ಸುದ್ದಿ ಬೆಳಗಾವಿ : ಇಲ್ಲಿನ ಆರ್ ಪಿ ಡಿ ಕಾಲೇಜ್ ಎದುರಿನ ಶ್ರೀ ಕೃಷ್ಣ ಮಠದಲ್ಲಿ ಜನವರಿ 26 ರಂದು ಸಂಜೆ 4 ಕ್ಕೆ ವಿದ್ಯಾರ್ಥಿ ನಿಲಯದ ವತಿಯಿಂದ ಭಾರತೀಯ ಸಂಸ್ಕೃತಿ ಮತ್ತು ಯುವಕರ ಸ್ಥಿತಿಗತಿ ವಿಷಯವಾಗಿ ಚಿಂತನ ಮಂಥನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಹಿರಿಯ ವಕೀಲ ಆರ್.ಎಸ್. ಮುತಾಲಿಕ್ ಮುಖ್ಯ ಅತಿಥಿಯಾಗಿ ಆಗಮಿಸುವರು. ಶ್ರೀ ಕೃಷ್ಣ ಮಠದ ಅರ್ಚಕ ವೆಂಕಟೇಶ ಆಚಾರ್ಯ ಉಪಸ್ಥಿತರಿರುವರು. …

Read More »

ಮತಚಲಾವಣೆ ಅತ್ಯಂತ ಪವಿತ್ರ ಕಾರ್ಯ : ಡಾ. ಎಸ್.ಎಸ್. ತೇರದಾಳ

ಮತಚಲಾವಣೆ ಅತ್ಯಂತ ಪವಿತ್ರ ಕಾರ್ಯ : ಡಾ. ಎಸ್.ಎಸ್. ತೇರದಾಳ   ಯುವ ಭಾರತ ಸುದ್ದಿ ಬೆಳಗಾವಿ : ಪ್ರಜಾಪ್ರಭುತ್ವದ ಯಶಸ್ಸಿಗೆ ಮತಚಲಾವಣೆಯು ಅತ್ಯಂತ ನಿರ್ಣಾಯಕವಾದುದು. ಮತಚಲಾವಣೆಯಲ್ಲಿ ದೇಶದ ಭವಿಷ್ಯವಿದೆ ಎಂದು ಪ್ರಾಚಾರ್ಯ ಡಾ. ಶಂಕರ ಎಸ್. ತೇರದಾಳ ಅಭಿಪ್ರಾಯ ಪಟ್ಟರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗ, ಚುನಾವಣಾ ಸಾಕ್ಷರತಾ ಕ್ಲಬ್ ಹಾಗೂ ಮತದಾರರ ಜಾಗೃತ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ …

Read More »