Breaking News

ಬೆಳಗಾವಿ

ಸಂಗೀತ ಸಾರ್ವಭೌಮ, ಗಾನ ಗಾರುಡಿಗ ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಅವರಿಗೆ ಇಲ್ಲಿಯ ಕಲಾವಿದರ ಬಳಗ,ಅಭಿಮಾನಿಗಳು ಕಲ್ಮೇಶ್ವರ ವೃತ್ತದಲ್ಲಿ ಶ್ರದ್ಧಾಂಜಲಿ ಅರ್ಪಿಸಿದರು

ಮೂಡಲಗಿ:- ಶುಕ್ರವಾರ ನಿಧನರಾದ ಸಂಗೀತ ಸಾರ್ವಭೌಮ, ಗಾನ ಗಾರುಡಿಗ ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಅವರಿಗೆ ಇಲ್ಲಿಯ ಕಲಾವಿದರ ಬಳಗ,ಅಭಿಮಾನಿಗಳು ಕಲ್ಮೇಶ್ವರ ವೃತ್ತದಲ್ಲಿ ಶ್ರದ್ಧಾಂಜಲಿ ಅರ್ಪಿಸಿದರು. ಭಜನಾ ಕಲಾವಿದ ಶಿವಪುತ್ರಯ್ಯ ಮಠಪತಿ ಸ್ವಾಮಿ ಪೂಜೆ ಸಲ್ಲಿಸಿದರು. ಜಾನಪದ ಕಲಾವಿದ,ಚಲನ ಚಿತ್ರ ಗಾಯಕ ಶಬ್ಬೀರ ಡಾಂಗೆ ಮಾತನಾಡಿ ಕಂಚಿನ ಕಂಠದಿಂದ 14ಭಾಷೆಗಳಲ್ಲಿ ಹಿಡಿತ ಸಾಧಿಸಿ ಗಾನ ಗಾರುಡಿಗ ಎಸ್.ಪಿ.ಬಾಲಸುಬ್ರಮಣ್ಯಂ ಅವರ ಅಗಲಿಕೆಯಿಂದ ಜಗತ್ತಿನ ಸಂಗೀತ ಲೋಕಕ್ಕೆ ತುಂಬ ಹಾನಿಯಾಗಿದೆ.ಎಸ್.ಪಿ. ಅವರು ಮೇರು ಕಲಾವಿದರಾಗಿದ್ದರೂ ಯುವ ಕಲಾವಿದರಿಗೆ …

Read More »

ಇಬ್ಬರು ಸರಗಳ್ಳರನ ಬಂಧಿಸಿದ ಮೂಡಲಗಿ ಪೊಲೀಸರು

ಮೂಡಲಗಿ : ಮಹಿಳೆ ಕೊರಳಲ್ಲಿ ಇರುವ ಬಂಗಾರದ ಮಂಗಳಸೂತ್ರವನ್ನು(ಗಂಟನ) ಕಿತ್ತುಕೊಂಡು ಪರಾರಿಯಾದ ಇಬ್ಬರು ಸರಗಳ್ಳರನ್ನು ಪೊಲೀಸರು ಬಂಧಿಸಿ ಆಭರಣವನ್ನು ವಶ ಪಡಿಸಿಕೊಂಡಿದ್ದಾರೆ. ರಾಯಬಾಗ ತಾಲೂಕಿನ ಮುಗಲಖೋಡ ಪಟ್ಟಣದ ರಾಜಶ್ರೀ ಬೆಣಚಿನಮರಡಿ ಎಂಬ ಮಹಿಳೆ ಸಪ್ಟಂಬರ್ 13 ರಂದು ತನ್ನ ಗಂಡನೊಂದಿಗೆ ಮೂಡಲಗಿ ತಾಲೂಕಿನ ಮಸಗುಪ್ಪಿಗೆ ಬೈಕ್ ಮೇಲೆ ಹೋಗುವಾಗ ಮಹಿಳೆಯ ಕೊರಳಲ್ಲಿರುವ ಸುಮಾರು 1,25,000 ಬೆಲೆಬಾಳುವ ಮಂಗಳಸೂತ್ರವನ್ನು (ಗಂಟನ) ಬೈಕ್ ಮೇಲೆ ಬಂದು ಕಿತ್ತುಕೊಂಡು ಪರಾರಿಯಾಗಿದ್ದರು. ಮೂಡಲಗಿ ಪೊಲೀಸ್ ಠಾಣೆ …

Read More »

ನರೇಂದ್ರ ಮೋದಿಯವರು ವಿಶ್ವದ ಶ್ರೇಷ್ಠ ಪ್ರಧಾನಿ- ಆರ್‍ಎಸ್‍ಎಸ್ ಮುಖಂಡ ಎಮ್.ಡಿ.ಚುನಮರಿ. ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಚಾಲನೆ..!!

  ಗೋಕಾಕ: ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಹುಟ್ಟು ಹಬ್ಬದ ಪ್ರಯುಕ್ತ ಅರಭಾಂವಿ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಆರ್‍ಎಸ್‍ಎಸ್ ಹಿರಿಯ ಮುಖಂಡ ಎಮ್.ಡಿ.ಚುನಮರಿ ಅವರು ಸಸಿಗೆ ನೀರುಣ ಸುವ ಮೂಲಕ ಚಾಲನೆ ನೀಡುತ್ತಿರುವುದು. ಚಿತ್ರದಲ್ಲಿ ನಾಗಪ್ಪ ಶೇಖರಗೋಳ, ಮಹಾದೇವ ಶೆಕ್ಕಿ, ಯಲ್ಲಾಲಿಂಗ ವಾಳದ ಮುಂತಾದವರು ಇದ್ದಾರೆ. ಯುವ ಭಾರತ ಸುದ್ದಿ,  ಗೋಕಾಕ: ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ನಂತರ …

Read More »

ಜಿಲ್ಲಾಧಿಕಾರಿಗಳಿಗೆ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ನಿರಾಶ್ರಿತರ ಮನವಿ ಅರ್ಪಣೆ ಬೆಳಗಾವಿಗೆ ತೆರಳಿ ಮನವಿ ಮಾಡಿಕೊಂಡ ನಿರಾಶ್ರಿತರು

  ಜಿಲ್ಲಾಧಿಕಾರಿ ಡಾ.ಎಂ.ಜಿ. ಹಿರೇಮಠ ಅವರಿಗೆ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ನಿರಾಶ್ರಿತರು ಬುಧವಾರದಂದು ಮನವಿ ಸಲ್ಲಿಸಿದರು. ಯುವ ಭಾರತ ಸುದ್ದಿ,  ಬೆಳಗಾವಿ : ಕಳೆದ ವರ್ಷ ಅಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಹಾನಿಯಾದ ಮನೆಗಳ ಫಲಾನುಭವಿಗಳು ನಿರಾಶ್ರಿತರಾಗಿದ್ದು, ಅವರಿಗೆ ಕೂಡಲೇ ವಸತಿ ಸೌಲಭ್ಯ ಕಲ್ಪಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ನಿರಾಶ್ರಿತರು ಮನವಿ ಸಲ್ಲಿಸಿದರು.   ಜಿಲ್ಲಾಧಿಕಾರಿ ಡಾ.ಎಂ.ಜಿ. ಹಿರೇಮಠ ಅವರಿಗೆ ಗೋಕಾಕ …

Read More »

ಕೊರೋನಾ ಸೋಂಕಿತರಿಗೆ ಆಸರೆಯಾಗಿ ನಿಂತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಪ್ರಶಂಸನೀಯ : ಡಾ.ಬೆಣಚಿನಮರಡಿ

ಮೂಡಲಗಿಯಲ್ಲಿ ಕೊರೋನಾ ವಾರಿಯರ್ಸ್‍ಗೆ ಆರೋಗ್ಯ ಸುರಕ್ಷತೆಗಾಗಿ ವಿವಿಧ ಸಲಕರಣೆಗಳ ವಿತರಣೆ ಮೂಡಲಗಿ : ಕಳೆದ ಆರು ತಿಂಗಳಿನಿಂದ ಹೆಮ್ಮಾರಿಯಂತೆ ಕಾಡುತ್ತಿರುವ ಕೊರೋನಾ ವೈರಸ್‍ನಿಂದಾಗಿ ಜನರ ಕಷ್ಟ-ಕಾರ್ಪಣ್ಯಗಳನ್ನು ಮನಗಂಡು ಅವರಿಗೆ ಆಸರೆಯಾಗಿ ಆಪದ್ಭಾಂದವರಾಗಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಹೃದಯ ವೈಶಾಲ್ಯ ಇಡೀ ನಾಡಿಗೆ ಮಾದರಿಯಾಗಿದೆ ಎಂದು ಹಿರಿಯ ತಜ್ಞ ವೈದ್ಯ ಡಾ.ಆರ್.ಎಸ್. ಬೆಣಚಿನಮರಡಿ ಶ್ಲಾಘಿಸಿದರು. ಇಲ್ಲಿಯ ಶಿವಬೋಧರಂಗ ಅರ್ಬನ್ ಸೊಸಾಯಿಟಿಯಲ್ಲಿ ಶನಿವಾರದಂದು ಕೊರೋನಾ ವಾರಿಯರ್ಸ್‍ಗೆ ಸಚಿವ ರಮೇಶ ಜಾರಕಿಹೊಳಿ …

Read More »

ಮನುಷ್ಯನನ್ನು ಮಾನವರನ್ನಾಗಿ ಮಾಡುವ ಶಕ್ತಿ ಶಿಕ್ಷಕರಲ್ಲಿದೆ. ರಾಷ್ಟ್ರ ನಿರ್ಮಾಣ ಮಾಡುವಲ್ಲಿ ರೈತ, ಸೈನಿರು, ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ

ಮೂಡಲಗಿ : ಮನುಷ್ಯನನ್ನು ಮಾನವರನ್ನಾಗಿ ಮಾಡುವ ಶಕ್ತಿ ಶಿಕ್ಷಕರಲ್ಲಿದೆ. ರಾಷ್ಟ್ರ ನಿರ್ಮಾಣ ಮಾಡುವಲ್ಲಿ ರೈತ, ಸೈನಿರು, ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಸ್ಥಳೀಯ ಈರಣ್ಣ ದೇವಸ್ಥಾನದ ಕೆ.ಎಚ್ ಸೋನವಾಲಕರ ಕಲ್ಯಾಣದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿ, ರಾಷ್ಟ ಹಾಗೂ ರಾಜ್ಯಮಟ್ಟದಲ್ಲಿ ಮೂಡಲಗಿ ವಲಯ ಮಿಂಚುವಲ್ಲಿ ಅಧಿಕಾರಿಗಳ ಶಿಕ್ಷಕರ ಕರ್ತವ್ಯ ನಿಷ್ಠೆಯಿಂದ ಮಾಡಿದ ಕಾರ್ಯ ಮೆಚ್ಚುವಂತಹದು. …

Read More »

ಮೂಡಲಗಿಯಿಂದ ಗುರ್ಲಾಪೂರ ವರಗೆ ರಸ್ತೆ ಅಭಿವೃದ್ಧಿ ಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ದಾಸಪ್ಪ ನಾಯಕ್ ಚಾಲನೆ

ಮೂಡಲಗಿ : ಮೂಡಲಗಿಯಿಂದ ಗುರ್ಲಾಪೂರ ವರಗೆ ರಸ್ತೆ ಅಭಿವೃದ್ಧಿ ಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ದಾಸಪ್ಪ ನಾಯಕ್ ಅವರು ಚಾಲನೆ ನೀಡಿದರು. ಇಂದು ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಪುರಸಭೆಯ SFC ವಿಶೇಷ ಅನುದಾನದ ಅಡಿಯಲ್ಲಿ 45 ಲಕ್ಷ ರೂ, ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ ಹಾಗೂ ಅತಿಶೀಘ್ರದಲ್ಲೇ ಈ ಅಭಿವೃದ್ಧಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು. …

Read More »

ಎರಡು ಕಡೆಯ ಕೇಸ್ ವಾಪಾಸ್‌ ಬಗ್ಗೆ ಸಿಎಂ ಜೊತೆ ಚರ್ಚಿಸಿ ನಿರ್ಧಾರ: ರಮೇಶ್‌ ಜಾರಕಿಹೊಳಿ

ಉಭಯ ತಂಡಗಳ ವಿರುದ್ಧ ಕೇಸ್‌ ದಾಖಲಾಗಿರುವ ಬಗ್ಗೆ ಮಾತನಾಡಿದ ಸಚಿವರು, ಪ್ರಕರಣ ವಾಪಸ್ ಬಗ್ಗೆ ಸಿಎಂ ಜತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಎರಡು ಕಡೆಯವರ ಪ್ರಕರಣ ವಾಪಸ್ ಪಡೆಯಲು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ಮೂರ್ತಿ ಅಧಿಕೃತ ಮಾಡೋ ವಿಚಾರದ ಬಗ್ಗೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.  ಯುವ ಭಾರತ ಸುದ್ದಿ, ಬೆಳಗಾವಿ: ಪೀರನವಾಡಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ರಮೇಶ ಜಾರಕಿಹೊಳಿ‌ ಬೆಳಗಾವಿಯಲ್ಲಿ ಹೇಳಿಕೆ …

Read More »

ಗೊಡಚಿನಮಲ್ಕಿ ಜಲಪಾತಕ್ಕೆ,ಮೂಲ ಸೌಕರ್ಯ ಒದಗಿಸಿ -ಶಿವರಡ್ಡಿ

. ಮೂಡಲಗಿ: ಗೊಡಚಿನಮಲ್ಕಿ ಜಲಪಾತ ಕಣ್ಮನ ಸೆಳೆಯುವ ಅತ್ಯಂತ ಸುಂದರ ರಮಣ ೀಯ ಪ್ರವಾಸಿಗರ ತಾಣವಾಗಿದೆ ಆದರೆ ಸಂಭಂದಿಸಿದ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಸಾಕಷ್ಟು ಪ್ರವಾಸಿಗರು ನಿರಾಸೆ ಪಡುವಂತಾಗಿದೆ ಜಲಪಾತಕ್ಕೆ ಮೂಲ ಸೌಕರ್ಯಗಳ ಕೊರತೆ,ಕುಡಿಯುವ ನೀರಿನ ಸಮಸ್ಯೆ,ಹದಗೆಟ್ಟ ರಸ್ತೆಗೆ ಡಾಂಬರಿಕರಣ ಮಾಡುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟಣೆಯ ತಾಲೂಕಾದ್ಯಕ್ಷ ಶಿವರಡ್ಡಿ ಹುಚರಡ್ಡಿ ನೇತೃದಲ್ಲಿ ಗುರುವಾರ ಕಲ್ಮೇಶ್ವರ ವೃತ್‍ದಲ್ಲಿ ಪ್ರತಿಭಟನೆ ನಡೆಸಿ ಗೋಕಾಕ ವಲಯ ಅರಣ್ಯಾಧಿಕಾರಿಗಳೆಗೆ ಮನವಿ ಸಲ್ಲಿಸಿದರು. ಈ ಪ್ರವಾಸಿ …

Read More »

ಮೂಡಲಗಿ ಪಿಎಸ್ಐ ಅವರ ಮತ್ತೊಂದು ಸಾಹಸ ನೆರೆ ಹಾವಳಿಯಲ್ಲಿ ಸಿಲುಕಿದ ಮಂಗಗಳಿಗೆ ರಕ್ಷಣೆ

ಮೂಡಲಗಿ: ಸಜ್ಜನರ ರಕ್ಷಣೆ ಮಾಡಲು ಅಪರಾಧಿಗಳನ್ನು ಶಿಕ್ಷಿಸಲು ಪೋಲಿಸ್ ಇಲಾಖೆ ಇರುವುದು ಸಾಮಾನ್ಯ ವಿಷಯವಾಗಿದೆ. ಆದರೆ ಕೆಲವೊಂದು ಪೊಲೀಸರು ಅಪರಾಧಿಗಳಿಗೆ ರಕ್ಷಣೆ ಕೊಟ್ಟು ಸಜ್ಜನರಿಗೆ ರಕ್ಷಣೆ ನೀಡಲು ವಿಫಲರಾದ ಇಂದಿನ ದಿನಗಳಲ್ಲಿ ಸಾಮಾನ್ಯರೊಂದಿಗೆ ಮಂಗಗಳಿಗೂ ರಕ್ಷಣೆ ನೀಡಿರುವ ಒಬ್ಬ ಪೋಲಿಸ್ ದಕ್ಷ ಅಧಿಕಾರಿ ಮೂಡಲಗಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಮ್ಮೆಯ ವಿಷಯವಾಗಿದೆ. ಮಂಗನಿಂದ ಮಾನವ ರೂಪ ತಾಳಿದ್ದಾನೆ. ಎಂಬುದನ್ನು ಅರಿತುಕೊಂಡ ಪಿಎಸ್ಐ ಮಲ್ಲಿಕಾರ್ಜುನ್ ಸಿಂಧೂರ್ ಅವರು ಇತ್ತೀಚಿಗೆ ಬಂದ ನೆರೆಹಾವಳಿ …

Read More »