Breaking News

ಮನುಷ್ಯನನ್ನು ಮಾನವರನ್ನಾಗಿ ಮಾಡುವ ಶಕ್ತಿ ಶಿಕ್ಷಕರಲ್ಲಿದೆ. ರಾಷ್ಟ್ರ ನಿರ್ಮಾಣ ಮಾಡುವಲ್ಲಿ ರೈತ, ಸೈನಿರು, ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ

Spread the love

ಮೂಡಲಗಿ : ಮನುಷ್ಯನನ್ನು ಮಾನವರನ್ನಾಗಿ ಮಾಡುವ ಶಕ್ತಿ ಶಿಕ್ಷಕರಲ್ಲಿದೆ. ರಾಷ್ಟ್ರ ನಿರ್ಮಾಣ ಮಾಡುವಲ್ಲಿ ರೈತ, ಸೈನಿರು, ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಸ್ಥಳೀಯ ಈರಣ್ಣ ದೇವಸ್ಥಾನದ ಕೆ.ಎಚ್ ಸೋನವಾಲಕರ ಕಲ್ಯಾಣದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿ, ರಾಷ್ಟ ಹಾಗೂ ರಾಜ್ಯಮಟ್ಟದಲ್ಲಿ ಮೂಡಲಗಿ ವಲಯ ಮಿಂಚುವಲ್ಲಿ ಅಧಿಕಾರಿಗಳ ಶಿಕ್ಷಕರ ಕರ್ತವ್ಯ ನಿಷ್ಠೆಯಿಂದ ಮಾಡಿದ ಕಾರ್ಯ ಮೆಚ್ಚುವಂತಹದು. ರಾಷ್ಟ್ರ ಭದ್ರವಾಗಿರಲು ಶಿಕ್ಷಕರಿಂದ ಸಾದ್ಯವಿದೆ ಎಂದರು.

ಕೊರೋನಾ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಸಹಾಯ ಪ್ರಶಂಸಾರ್ಯವಾಗಿದೆ. ಮೂಡಲಗಿ ವಲಯದಲ್ಲಿ ಶೈಕ್ಷಣಿಕವಾಗಿ ಗುಣಮಟ್ಟದ ಗುಣಾತ್ಮಕ ಮೌಲ್ಯಯುತ ಶಿಕ್ಷಣ ಕೊಡಿಸುವದು ಆದ್ಯ ಕರ್ತವ್ಯವಾಗಿದೆ. ಎಲ್ಲರೂ ಶಿಕ್ಷಣ ಪಡೆದು ಸುಭದ್ರ ರಾಷ್ಟ ನಿರ್ಮಿಸಲು ಶ್ರಮಿಸಬೇಕು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಪ್ರದೇಶ ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಪತ್ರಿ ವರ್ಷವೂ ಮೂಡಲಗಿ ವಲಯದಲ್ಲಿ “ಗುರು ಜಾತ್ರೆ” ಮಾಡಲಾಗುತ್ತಿತು, ಆದರೆ ಈ ಮಹಾಮಾರಿ ಕೊರೋನಾ ಒಕ್ಕರಿಸಿ ಪರಿಣಾಮವಾಗಿ ಇಂದು ಆ ಗುರು ಜಾತ್ರೆ ಬದಲಿಗೆ ಸರಳ ರೀತಿಯಲ್ಲಿ ಶಿಕ್ಷಕರ ದಿನಾಚರಣೆ ಮಾಡುವಂತ ಸಂದಿಗ್ದ ಪರಸ್ಥಿತಿ ನಿರ್ಮಾಣವಾಗಿದು ಬೆಸರದ ಸಂಗತಿಯಾಗಿದೆ ಎಂದರು.

ನಮ್ಮ ದೇಶದಲ್ಲಿ ಶಿಕ್ಷಣ ಇಲಾಖೆಯೂ ಇರುವವರೆಗೂ ಮಾಜಿ ರಾಷ್ಟ್ರಪತಿ ಡಾ, ಎಸ್ ರಾಧಾಕೃಷ್ಣನ ಅವರು ಹೆಸರು ಅಜರಾಮರವಾಗಿರುತ್ತದೆ, ಕಹಾಮ ರಾಜ್ಯಧ್ಯಕ್ಷ ಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರವಾದ್ದು.

ಪ್ರವಾಹ ಸಂದರ್ಭದಲ್ಲಿ ವಲಯದ ಶಾಲೆಗಳು ಹಾನಿಯಾದಾಗ 6 ಕೋಟಿ ರೂ, ರೀಪೆರಿ ಅನುದಾನ, ಕಟ್ಟಡ ಮರು ನಿರ್ಮಾಣ ಕಾರ್ಯಗಳಿಗೆ 28 ಕೋಟಿ ರೂ ಅನುದಾನ ಹಾಗೂ ಕೋವಿಡ್-19 ಸಂದರ್ಭದಲ್ಲಿ ಮೂಡಲಗಿ ವಲಯದಲ್ಲಿ ಜರುಗಿದ ಎಸ್‌ಎಸ್‌ಎಲ್‌ಸಿ ಮಕ್ಕಳ ಪರೀಕ್ಷಗೆ ಎಲ್ಲರಿಗೂ ಮಾಸ್ಕ, ಸಾನಿಟೈಜರ, ಬಿಸ್ಕಿಟ ಉಚಿತವಾಗಿ ನೀಡಿ ಶಿಕ್ಷಣ ಪ್ರೇಮ ಮೆರೆದಿದ್ದಾರೆ.

ಜಿಪಂ ಸದಸ್ಯ ಗೋವಿಂದ ಕೋಪ್ಪದ ಮಾತನಾಡಿ, ಸಮಾಜದಲ್ಲಿ ಶಿಕ್ಷಕರ ಪಾತ್ರ ಅತ್ಯ ಅಮೂಲ್ಯವಾಗಿದೆ. ಮಕ್ಕಳ ಭವಿಷ್ಯ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಕಾರ್ಯ ಶ್ಲಾಘನೀಯವಾದುದ್ದು ಎಂದರು.

ಪ್ರಾಸ್ತಾವಿಕವಾಗಿ ಬಿಇಓ ಅಜಿತ ಮನ್ನಿಕೇರಿ ಮಾತನಾಡಿ, ವಲಯದ ಹಿರಿಮೆ ಶಿಕ್ಷಕರ ಪಾತ್ರ ಹಾಗೂ ಪಾಲಕ ಪೋಷಕ ಚುನಾಯಿತ ಪ್ರತಿನಿಧಿಗಳು ನೀಡಿದ ಸಹಕಾರದಿಂದ ಸಾಧ್ಯವಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಹಾಗೂ ಕಹಾಮ ರಾಜ್ಯಧ್ಯಕ್ಷ ಮತ್ತು ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಕಳುಹಿಸಿದ ಶುಭಾಶಯ ಸಂದೇಶ ವಾಚನ ಮಾಡಿದರು.

ಕಾರ್ಯಕ್ರಮದಲ್ಲಿ ನಿವೃತ, ಆದರ್ಶ ಶಿಕ್ಷಕರು, ಕೊರೋನಾ ಸಂದರ್ಭದಲ್ಲಿ ಶ್ರಮೀಸಿದ ಶಿಕ್ಷಕರನ್ನು ಸತ್ಕರಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಾಥಮಿಕ ಹಾಗೂ ಸರಕಾರಿ ನೌಕರರ ಸಂಘಗಳಿoದ ಶಿಕ್ಷಕರನ್ನು ಕೊರೋನಾ ವಾರಿರ್ಯಸ್ ಎಂದು ಪರಣಿಸಬೇಕೆಂದು ರಾಜ್ಯಸಭಾ ಸದಸ್ಯರಿಗೆ ಮನವಿ ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಶಾಸಕರ ಆಪ್ತ ಸಹಾಯಕರಾದ ನಾಗಪ್ಪ ಶೇಖರಗೋಳ, ಜಿಪಂ ಸದಸ್ಯರಾದ ಶಶಿಕಲಾ ಸಣ್ಣಕ್ಕಿ, ವಾಸಂತಿ ತೇರದಾಳ, ಮಿನಾಕ್ಷಿ ಜೋಡಟ್ಟಿ, ನಿವೃತ ತಾಲೂಕಾ ಆರೋಗ್ಯ ಅಧಿಕಾರಿ ಡಾ. ಆರ್ ಎಸ್ ಬೆಣಚಿನಮರಡಿ ಹಾಗೂ ಯುವ ಧುರಿಣರಾದ ಹಣಮಂತ ತೇರದಾಳ, ಸುಧೀರ ಜೋಡಟ್ಟಿ, ರವಿ ಪರುಶೆಟ್ಟಿ, ನಿವೃತ ದೈಹಿಕ ಶಿಕ್ಷಣಾಧಿಕಾರಿ ಎಸ್ ಎ ನಾಡಗೌಡರ ಹಾಗೂ ಶಿಕ್ಷಣ ವಿವಿಧ ಸಂಘಟನೆಗಳು, ವಲಯದ ಶಿಕ್ಷಕರು ಉಪಸ್ಥಿತರಿದ್ದರು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

2 + 3 =