Breaking News

ಇಬ್ಬರು ಸರಗಳ್ಳರನ ಬಂಧಿಸಿದ ಮೂಡಲಗಿ ಪೊಲೀಸರು

Spread the love

ಮೂಡಲಗಿ : ಮಹಿಳೆ ಕೊರಳಲ್ಲಿ ಇರುವ ಬಂಗಾರದ ಮಂಗಳಸೂತ್ರವನ್ನು(ಗಂಟನ) ಕಿತ್ತುಕೊಂಡು ಪರಾರಿಯಾದ ಇಬ್ಬರು ಸರಗಳ್ಳರನ್ನು ಪೊಲೀಸರು ಬಂಧಿಸಿ ಆಭರಣವನ್ನು ವಶ ಪಡಿಸಿಕೊಂಡಿದ್ದಾರೆ.

ರಾಯಬಾಗ ತಾಲೂಕಿನ ಮುಗಲಖೋಡ ಪಟ್ಟಣದ ರಾಜಶ್ರೀ ಬೆಣಚಿನಮರಡಿ ಎಂಬ ಮಹಿಳೆ ಸಪ್ಟಂಬರ್ 13 ರಂದು ತನ್ನ ಗಂಡನೊಂದಿಗೆ ಮೂಡಲಗಿ ತಾಲೂಕಿನ ಮಸಗುಪ್ಪಿಗೆ ಬೈಕ್ ಮೇಲೆ ಹೋಗುವಾಗ ಮಹಿಳೆಯ ಕೊರಳಲ್ಲಿರುವ ಸುಮಾರು 1,25,000 ಬೆಲೆಬಾಳುವ ಮಂಗಳಸೂತ್ರವನ್ನು (ಗಂಟನ) ಬೈಕ್ ಮೇಲೆ ಬಂದು ಕಿತ್ತುಕೊಂಡು ಪರಾರಿಯಾಗಿದ್ದರು.

ಮೂಡಲಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 166/2020 ಕಾಲಂ 392 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಸಿಪಿಐ ವೆಂಕಟೇಶ್ ಮುರನಾಳ ತನಿಖೆ ಕೈಕೊಂಡು ಪಿಎಸ್ಐ ಮಲ್ಲಿಕಾರ್ಜುನ ಸಿಂಧೂರ, ಎಮ್. ಎಸ್ ಬಡಿಗೇರ, ಆರ್ ಎಸ್ ಪೂಜೇರಿ, ಎನ್ ಎಸ್ ವಡೆಯರ, ಎಲ್ ಪಿ ಹಂಪಿಹೊಳಿ, ವ್ಹಿ ವಾಯ್ ಕೊಳವಿ, ಎಮ್ ವಾಯ್ ನದಾಫ್, ಆಯ್ ವಾಯ್ ಬಂಡ್ರೊಳ್ಳಿ, ಡಿ ಜಿ ಕೊಣ್ಣೂರ, ಎಸ್ ಬಿ ಪೂಜೇರಿ, ಪಿ ಎಮ್ ಸಪ್ತಸಾಗರ, ಎಸ್ ಆರ್ ತಳವಾರ, ಕೆ ವ್ಹಿ ಕದಮ, ಕೆ ಎಸ್ ರಾಮದಾಸ ರವರ ತಂಡ ರಚನೆ ಮಾಡಿ ಜಮಖಂಡಿ ತಾಲೂಕಿನ ಮದರಖಂಡಿ ಗ್ರಾಮದ ಅಮೀತ ಸಿದ್ರಾಮಗೋಳ (20) ಹಾಗೂ ರಬಕವಿ-ಬನಹಟ್ಟಿ ತಾಲೂಕಿನ ಮಾರಾಪೂರ ಗ್ರಾಮದ ಆನಂದ ಮೇತ್ರೆ (23) ಎಂಬ ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಂಡಿದ್ದಾರೆ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

2 × 4 =