Breaking News

ಕರ್ನಾಟಕ

ಜುಲೈನಲ್ಲಿ ಬಜೆಟ್ ಅಧಿವೇಶನ

ಜುಲೈನಲ್ಲಿ ಬಜೆಟ್ ಅಧಿವೇಶನ ಬೆಂಗಳೂರು: ವಿಧಾನಸೌಧದಲ್ಲಿ ಜುಲೈ 3 ರಿಂದ 14ರವರೆಗೆ 10 ದಿನ ಬಜೆಟ್ ಅಧಿವೇಶನ ನಡೆಸಲು ತಾತ್ಕಾಲಿಕ ವೇಳಾಪಟ್ಟಿಯನ್ನು ಸರ್ಕಾರ ಪ್ರಕಟಿಸಿದೆ. ಮೊದಲ ದಿನ ಜುಲೈ 3ರಂದು ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಜುಲೈ 7 ರಂದು ಮುಖ್ಯಮಂತ್ರಿ ಬಜೆಟ್ ಮಂಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More »

ಕರೆಂಟ್ ಶಾಕ್: ಬಿಲ್ ಕಟ್ಟದಿರಲು ನೇಕಾರರ ನಿರ್ಧಾರ

ಕರೆಂಟ್ ಶಾಕ್: ಬಿಲ್ ಕಟ್ಟದಿರಲು ನೇಕಾರರ ನಿರ್ಧಾರ ಬೆಳಗಾವಿ: ಪ್ರತಿಯೊಬ್ಬರಿಗೂ ಉಚಿತ ವಿದ್ಯುತ್ ಘೋಷಿಸಿರುವ ಸರ್ಕಾರ, ಇನ್ನೊಂದೆಡೆ ಮಗ್ಗಗಳ ವಿದ್ಯುತ್ ದರ ಹೆಚ್ಚಿಸುವ ಮೂಲಕ ನೇಕಾರರ ಹೊಟ್ಟೆ ಮೇಲೆ ಬರೆ ಎಳೆಯುವ ಕೆಲಸ ಮಾಡಿದೆ. ಹೀಗಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಇನ್ನು ಮುಂದೆ ವಿದ್ಯುತ್ ಬಿಲ್ ಕಟ್ಟದಿರಲು ನೇಕಾರರು ನಿರ್ಧರಿಸಿದ್ದಾರೆ. ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದ ಸಭಾಭವನದಲ್ಲಿ ಗುರುವಾರ ನಡೆದ ಸಭೆಯಲ್ಲಿ ನೇಕಾರರು ವಿದ್ಯುತ್ ಬಿಲ್ ಕಟ್ಟದೇ …

Read More »

ಬೆಳಗಾವಿಯಲ್ಲಿ ರವಿವಾರ ಯಕ್ಷಗಾನ ಪ್ರದರ್ಶನ

ಬೆಳಗಾವಿಯಲ್ಲಿ ರವಿವಾರ ಯಕ್ಷಗಾನ ಪ್ರದರ್ಶನ ಬೆಳಗಾವಿ : ಕುಂದಾಪುರ ಕೋಣಿ ಶ್ವೇತಛತ್ರ ಯಕ್ಷಮಿತ್ರ ಇವರಿಂದ ಯಕ್ಷ ದಿಗ್ಗಜರಿಂದ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ಭೀಷ್ಮ ವಿಜಯ ಯಕ್ಷಗಾನ ಪ್ರದರ್ಶನ ಜೂನ್ 11 ರಂದು ಸಂಜೆ 5 ಕ್ಕೆ ನಗರದ ಕೋನವಾಳಗಲ್ಲಿಯ ಲೋಕಮಾನ್ಯ ರಂಗ ಮಂದಿರದಲ್ಲಿ ನಡೆಯಲಿದೆ. ಹಿಮ್ಮೇಳದಲ್ಲಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ರಾಮಚಂದ್ರ ಹೆಗಡೆ ಹಿಲ್ಲೂರು(ಭಾಗವತಿಕೆ), ನವೀನ ಭಂಡಾರಿ ಕಡತೋಕ (ಮದ್ದಳೆ), ಶ್ರೀನಿವಾಸ ಪ್ರಭು(ಚಂಡೆ), ಶಶಿಕಾಂತ ಶೆಟ್ಟಿ ಕಾರ್ಕಳ, ಸಚಿನ್ …

Read More »

ಮೇಲ್ಮನೆ ಚುನಾವಣೆಗೆ ದಿನಾಂಕ ಘೋಷಣೆ

ಮೇಲ್ಮನೆ ಚುನಾವಣೆಗೆ ದಿನಾಂಕ ಘೋಷಣೆ ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಸದಸ್ಯರ ರಾಜೀನಾಮೆಯಿಂದ ತೆರವಾಗಿರುವ ಮೂರು ಸ್ಥಾನಗಳ ಆಯ್ಕೆಗೆ, ಚುನಾವಣಾ ಆಯೋಗವು ಉಪ ಚುನಾವಣೆ ದಿನಾಂಕ ಪ್ರಕಟಿಸಿದೆ. ಬಾಬೂರಾವ್ ಚಿಂಚನಸೂರ, ಆರ್.ಶಂಕರ್‌ ಹಾಗೂ ಲಕ್ಷ್ಮಣ ಸವದಿ ಅವರು ಈ ಬಾರಿಯ ವಿಧಾನಸಭೆ ಚುನಾವಣೆಗೂ ಮುನ್ನ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಹೀಗಾಗಿ ತೆರವಾಗಿರುವ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಪರಿಷತ್‌ ಸದಸ್ಯರನ್ನು ವಿಧಾನಸಭೆ ಸದಸ್ಯರೇ ಮತದಾನದ ಮೂಲಕ ಆಯ್ಕೆ ಮಾಡಲಿದ್ದಾರೆ. ಚಿಂಚನಸೂರ …

Read More »

ಮುಂದೂಡಿಕೆ : ಮಳೆ ನಿಂತರೆ ಮಾತ್ರ ಇಂದು ಫೈನಲ್

ಮುಂದೂಡಿಕೆ : ಮಳೆ ನಿಂತರೆ ಮಾತ್ರ ಇಂದು ಫೈನಲ್ ಅಹಮದಾಬಾದ್‌: 2023ರ ಐಪಿಎಲ್‌ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್‌ಗೆ ಮಳೆ ಅಡ್ಡಿಪಡಿಸಿದ್ದು, ಪಂದ್ಯವನ್ನು ಮೇ 29(ಸೋಮವಾರ)ಕ್ಕೆ ಮುಂದೂಡಲಾಗಿದೆ. ನಿರಂತರವಾಗಿ ಮಳೆ ಸುರಿದ ಕಾರಣ ಪಂದ್ಯವನ್ನು ಮುಂದೂಡಲಾಗಿದೆ. ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ ಪಂದ್ಯದಲ್ಲಿ, ಹಾಲಿ ಚಾಂಪಿಯನ್‌ ಗುಜರಾತ್‌ ಟೈಟನ್ಸ್‌ ಹಾಗೂ ನಾಲ್ಕು ಬಾರಿ ಕಪ್‌ ಜಯಿಸಿರುವ ಚೆನ್ನೈ ಸೂಪರ್‌ಕಿಂಗ್ಸ್‌ ಮುಖಾಮುಖಿಯಾಗಿವೆ.

Read More »

ರಾಜ್ಯದ ಸಚಿವರ ಖಾತೆಗಳ ಹಂಚಿಕೆ

ರಾಜ್ಯದ ಸಚಿವರ ಖಾತೆಗಳ ಹಂಚಿಕೆ ಬೆಂಗಳೂರು- ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸಚಿವ ಸಂಪುಟ ಸಿಕ್ಕಿದ್ದು ಇಂದು 24 ಸಚಿವರ ಆಯ್ಕೆಯ ಕುರಿತು ತೀವ್ರ ಚರ್ಚೆಗಳ ನಂತರ ಸಂಪುಟ ವಿಸ್ತರಣೆಯನ್ನು ಅಂತಿಮಗೊಳಿಸಿ ಪ್ರಮಾಣ ವಚನ ನೆರವೇರಿತು. ಈ ಮೊದಲು ಮೇ 20 ರಂದು ಸಿಎಂ, ಡಿಸಿಎಂ ಸೇರಿದಂತೆ 10 ಶಾಸಕರ ಪ್ರಮಾಣ ವಚನ ಸ್ವೀಕರಿಸಿದ್ದರು. ಈಗ ಎಲ್ಲಾ 34 ಮಂತ್ರಿಗಳಿಗೆ ಖಾತೆಗಳ ಹಂಚಿಕೆ ಮಾಡಲಾಗಿದೆ. ಸಚಿವರ ಖಾತೆಗಳು- 1 ಸಿದ್ದರಾಮಯ್ಯ ಮುಖ್ಯಮಂತ್ರಿ …

Read More »

ಕಾಂಗ್ರೆಸ್ ನ ದುರಹಂಕಾರ, ದ್ವೇಷದ ಆಡಳಿತದ ಆಯಸ್ಸು ಲೋಕಸಭಾ ಚುನಾವಣೆಯವರೆಗೆ ಮಾತ್ರ: ಮಾಜಿ ಸಿಎಂ ಬೊಮ್ಮಾಯಿ

ಕಾಂಗ್ರೆಸ್ ನ ದುರಹಂಕಾರ, ದ್ವೇಷದ ಆಡಳಿತದ ಆಯಸ್ಸು ಲೋಕಸಭಾ ಚುನಾವಣೆಯವರೆಗೆ ಮಾತ್ರ: ಮಾಜಿ ಸಿಎಂ ಬೊಮ್ಮಾಯಿ ಬೆಂಗಳೂರು : ಕಾಂಗ್ರೆಸ್ ನ ದುರಹಂಕಾರ ಮತ್ತು ದ್ವೇಷದ ಆಡಳಿತದ ಆಯಸ್ಸು ಲೋಕಸಭಾ ಚುನಾವಣೆಯವರೆಗೆ ಮಾತ್ರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನೂತನವಾಗಿ ಸರ್ಕಾರ ರಚನೆ ಆಗಿದೆ. 8 ಜನರು ಕೂಡ ಸಚಿವರು ಆಗಿದ್ದಾರೆ. ಆ ಸಚಿವರು ಮಾತನಾಡುವುದನ್ನು ನೋಡಿದರೆ, ದ್ವೇಷದ, …

Read More »

ನೂತನ ಸಂಸತ್ ಭವನ ಉದ್ಘಾಟನೆ ಸ್ಮರಣಾರ್ಥ 75 ರೂ. ನಾಣ್ಯ ಬಿಡುಗಡೆ ಮಾಡಲಿರುವ ಕೇಂದ್ರ ಸರ್ಕಾರ : ವಿಶೇಷತೆ ಏನು..?

ನೂತನ ಸಂಸತ್ ಭವನ ಉದ್ಘಾಟನೆ ಸ್ಮರಣಾರ್ಥ 75 ರೂ. ನಾಣ್ಯ ಬಿಡುಗಡೆ ಮಾಡಲಿರುವ ಕೇಂದ್ರ ಸರ್ಕಾರ : ವಿಶೇಷತೆ ಏನು..? ನವದೆಹಲಿ : ನೂತನ ಸಂಸತ್ ಭವನದ ಉದ್ಘಾಟನೆಯ ಸ್ಮರಣಾರ್ಥ ₹ 75 ರ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಲಾಗುವುದು ಎಂದು ಹಣಕಾಸು ಸಚಿವಾಲಯ ಗುರುವಾರ ತಿಳಿಸಿದೆ. ಈ ನಾಣ್ಯ 75 ವರ್ಷಗಳ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ಆಚರಿಸುತ್ತಿರುವ ಭಾರತದ ಗೌರವದ ಗುರುತಾಗಿಯೂ ಕಾರ್ಯನಿರ್ವಹಿಸುತ್ತದೆ. ನಾಣ್ಯದ ಒಂದು ಬದಿ ಅಶೋಕ ಸ್ತಂಭದ …

Read More »

ಸೋಲಿನ ನೈತಿಕ ಹೊಣೆ ಹೊತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿ.ಎಂ.ಇಬ್ರಾಹಿಂ

ಸೋಲಿನ ನೈತಿಕ ಹೊಣೆ ಹೊತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿ.ಎಂ.ಇಬ್ರಾಹಿಂ ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್​ ಸೋಲಿನ ನೈತಿಕ ಹೊಣೆ ಹೊತ್ತು ಸಿ.ಎಂ. ಇಬ್ರಾಹಿಂ ಅವರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬುಧವಾರ (ಮೇ 24) ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ಇಬ್ರಾಹಿಂ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ರಾಜೀನಾಮೆ ಪತ್ರವನ್ನು ದೇವೇಗೌಡರು ಇನ್ನೂ ಅಂಗೀಕರಿಸಿಲ್ಲ ಎಂದು …

Read More »

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಎಚ್​​ಡಿ ಕುಮಾರಸ್ವಾಮಿ ಅವಿರೋಧ ಆಯ್ಕೆ

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಎಚ್​​ಡಿ ಕುಮಾರಸ್ವಾಮಿ ಅವಿರೋಧ ಆಯ್ಕೆ ಯುವ ಭಾರತ  ಸುದ್ದಿ ಬೆಂಗಳೂರು : ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಕಳೆದ ವಿಧಾನಸಭೆ ಅವಧಿಯಲ್ಲೂ ಕುಮಾರಸ್ವಾಮಿ ಅವರೇ ಜೆಡಿಎಸ್ ಪಕ್ಷದ ಶಾಸಕಾಂಗ ನಾಯಕರಾಗಿ ಸದನದಲ್ಲಿ ಪಕ್ಷವನ್ನು ಮುನ್ನಡೆಸಿದ್ದರು. ತಮ್ಮ ಅಧ್ಯಕ್ಷತೆಯಲ್ಲಿ ಈ ಅವಧಿಯ ಮೊದಲ ಶಾಸಕಾಂಗ ಪಕ್ಷದ ಸಭೆ ನಡೆಸಿದರು. ಈ ಸಭೆಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ …

Read More »