Breaking News

ಕಾಂಗ್ರೆಸ್ 2ನೇ ಪಟ್ಟಿ ಪ್ರಕಟ

Spread the love

ಕಾಂಗ್ರೆಸ್ 2ನೇ ಪಟ್ಟಿ ಪ್ರಕಟ

ಯುವ ಭಾರತ ಸುದ್ದಿ ನವದೆಹಲಿ :
ಬಹು ನಿರೀಕ್ಷಿತ ಕಾಂಗ್ರೆಸ್ (Congress) ಅಭ್ಯರ್ಥಿಗಳ ಎರಡನೇ ಪಟ್ಟಿ 43 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಬೆಳಗಾವಿ ಜಿಲ್ಲೆಯಲ್ಲಿ ನಿಪ್ಪಾಣಿ-ಕಾಕಾ ಸಾಹೇಬ್ ಪಾಟೀಲ್, ಕಿತ್ತೂರು-ಬಾಬಾ ಸಾಹೇಬ್ ಪಾಟೀಲ್, ಗೋಕಾಕ್- ಮಹಾಂತೇಶ್ ಕಡಾಡಿ, ಸವದತ್ತಿ- ವಿಶ್ವಾಸ ವೈದ್ಯ ಅವರಿಗೆ ಟಿಕೆಟ್ ಸಿಕ್ಕಿದೆ.

ಇಂದು(ಏಪ್ರಿಲ್ 6) ಎಐಸಿಸಿ 42 ಕ್ಷೇತ್ರಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, ವಲಸಿಗರಿಗೆ ಕಾಂಗ್ರೆಸ್ ಹೈಕಮಾಂಡ್​ ಮಣೆ ಹಾಕಿದೆ. ಆದರೆ ಕೋಲಾರ ಟಿಕೆಟ್ ಯಾರಿಗೆ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿ ಉಳಿದಿದೆ.
ಜೆಡಿಎಸ್​ ತೊರೆದು ಕಾಂಗ್ರೆಸ್​ ಸೇರ್ಪಡೆಯಾದ್ದ ಮಾಜಿ ಶಾಸಕ ವೈ.ಎಸ್​.ವಿ.ದತ್ತಾ ಅವರಿಗೆ ಕೊಕ್ ನೀಡಲಾಗಿದೆ. ದತ್ತಾ ಅವರ ಬದಲಿಗೆ ಆನಂದ್ ಕೆ.ಎಸ್ ಅವರಿಗೆ ಟಿಕೆಟ್​ ನೀಡಲಾಗಿದೆ. ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದ ಕೂಡ್ಲಿಗಿ ಶಾಸಕರಾಗಿದ್ದ ಎನ್‌.ವೈ.ಗೋಪಾಲಕೃಷ್ಣ ಅವರಿಗೆ ಮೊಣಕಾಲ್ಮೂರು ಕ್ಷೇತ್ರದ ಟಿಕೆಟ್​ ನೀಡಲಾಗಿದೆ.
ಕಳೆದ ಮಾರ್ಚ್​ 25ರಂದು ಮೊದಲ ಹಂತದಲ್ಲಿ 124 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್​ ಬಿಡುಗಡೆ ಮಾಡಿತ್ತು. ಬಾಕಿ ಇದ್ದ 100 ಕ್ಷೇತ್ರಗಳ ಪೈಕಿ 2ನೇ ಪಟ್ಟಿಯಲ್ಲಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದು ಇನ್ನು 52 ಅಭ್ಯರ್ಥಿಗಳ ಪಟ್ಟಿ ಬಾಕಿ ಉಳಿಸಿಕೊಂಡಿದೆ.
42 ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
ನಿಪ್ಪಾಣಿ: ಕಾಕಾಸಾಹೇಬ್ ಪಾಟೀಲ್
ಗೋಕಾಕ: ಮಹಾಂತೇಶ್ ಕಡಾಡಿ
ಕಿತ್ತೂರು: ಬಾಬಾಸಾಹೇಬ್ ಡಿ ಪಾಟೀಲ
ಸವದತ್ತಿ: ವಿಶ್ವಾಸ ವಸಂತ ವೈದ್ಯ
ಮುಧೋಳ: ಆರ್ ಬಿ ತಿಮ್ಮಾಪುರ
ಬೀಳಗಿ: ಜಿಟಿ ಪಾಟೀಲ್
ಬಾದಾಮಿ: ಭೀಮಸೇನ ಚಿಮ್ಮನಕಟ್ಟಿ
ಬಾಗಲಕೋಟೆ: ಹುಲ್ಲಪ್ಪ ಮೇಟಿ
ವಿಜಯಪುರ ನಗರ: ಅಬ್ದುಲ್ ಹಮೀದ್
ನಾಗಾಠಾಣಾ: ವಿಠಲ್ ಕಟಕ್ದೊಂಡ
ಅಫಜಲ್ಪುರ: ಎಂ.ವೈ. ಪಾಟೀಲ
ಯಾದಗಿರಿ: ಚನ್ನಾರೆಡ್ಡಿ ಪಾಟೀಲ
ಗುರುಮಿಠಕಲ್: ಬಾಬುರಾವ್ ಚಿಂಚನಸೂರು
ಕಲ್ಬುರ್ಗಿ ದಕ್ಷಿಣ: ಅಲ್ಲಮಪ್ರಭು ಪಾಟೀಲ
ಬಸವಕಲ್ಯಾಣ: ವಿಜಯ ಧರಂ ಸಿಂಗ್
ಗಂಗಾವತಿ: ಇಕ್ಬಾಲ್ ಅನ್ಸಾರಿ
ನರಗುಂದ: ಬಿ.ಆರ್. ಯಾವಗಲ್
ಧಾರವಾಡ: ವಿನಯ ಕುಲಕರ್ಣಿ
ಕಲಘಟಗಿ: ಸಂತೋಷ ಲಾಡ್
ಶಿರಸಿ: ಭೀಮಣ್ಣ ನಾಯಕ್
ಯಲ್ಲಾಪುರ: ವಿ.ಎಸ್. ಪಾಟೀಲ್
ಕೂಡ್ಲಿಗಿ: ಡಾ ಶ್ರೀನಿವಾಸ್
ಮೊಳಕಾಲ್ಮೂರು: ಎನ್​.ವೈ. ಗೋಪಾಲಕೃಷ್ಣ
ಚಿತ್ರದುರ್ಗ: ಕೆ ಸಿ ವೀರೇಂದ್ರ
ಹೊಳಲ್ಕೆರೆ: ಆಂಜನೇಯ ಎಚ್.
ಚನ್ನಗಿರಿ: ಬಸವರಾಜ ಶಿವಗಂಗಾ
ತೀರ್ಥಹಳ್ಳಿ : ಕಿಮ್ಮನೆ ರತ್ನಾಕರ್
ಉಡುಪಿ: ಪ್ರಸಾದರಾಜ ಕಾಂಚನ್
ಕಡೂರು: ಆನಂದ ಕೆ.ಎಸ್.
ತುಮಕೂರು ನಗರ: ಇಕ್ಬಾಲ್ ಅಹ್ಮದ್
ಗುಬ್ಬಿ: ಎಸ್.ಆರ್. ಶ್ರೀನಿವಾಸ್
ಯಲಹಂಕ: ಕೇಶವ ರಾಜಣ್ಣ
ಯಶವಂತಪುರ: ಎಸ್ ಬಾಲರಾಜ ಗೌಡ
ಮಹಾಲಕ್ಷ್ಮಿ ಲೇಔಟ್: ಕೇಶವ ಮೂರ್ತಿ
ಪದ್ಮನಾಭನಗರ: ರಘುನಾಥ ನಾಯ್ಡು
ಮೇಲುಕೋಟೆ: ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ
ಮಂಡ್ಯ: ಪಿ ರವಿಕುಮಾರ
ಕೆಆರ್ ಪೇಟೆ: ಬಿಎಲ್ ದೇವರಾಜ್
ಬೇಲೂರು : ಬಿ ಶಿವರಾಂ


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

12 − ten =