Breaking News

ಚಾಣಕ್ಯ ನೀಡಿದ ಸೂತ್ರವೇನು ಗೊತ್ತೇ ?

Spread the love

ಚಾಣಕ್ಯ ನೀಡಿದ ಸೂತ್ರವೇನು ಗೊತ್ತೇ ?

ಯುವ ಭಾರತ ಸುದ್ದಿ ದೆಹಲಿ : ಗಡಿ ವಿವಾದ ಕುರಿತು ಕರ್ನಾಟಕ – ಮಹಾರಾಷ್ಟ್ರ ಗಡಿ ಸಮಸ್ಯೆಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿನ್ನೆಯ ಪತ್ರಿಕಾಗೋಷ್ಠಿಯ ಸಾರಾಂಶ ಹೀಗಿದೆ.

ಇಂದು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವೆ ಗಡಿ ಸಮಸ್ಯೆ ಏನಿದೆ, ಈ ವಿವಾದದ ಮುಕ್ತಾಯ ಹಾಗೂ ಸಾಂವಿಧಾನಿಕ ಮಾರ್ಗದಲ್ಲಿ ಪರಿಹಾರಕ್ಕಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹಾಗೂ ಕರ್ನಾಟಕದ ಮುಖ್ಯಮಂತ್ರಿ, ಗೃಹಮಂತ್ರಿ ಹಾಗೂ ವರಿಷ್ಠರನ್ನು ಇಂದು ಇಲ್ಲಿಗೆ ಕರೆಸಲಾಗಿತ್ತು. ಎರಡೂ ಕಡೆಯವರೊಂದಿಗೆ ಭಾರತದ ಗೃಹ ಸಚಿವಾಲಯದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಉತ್ತಮ ಮಾತುಕತೆ ನಡೆಯಿತು. ಇಬ್ಬರೂ ಮುಖ್ಯಮಂತ್ರಿಗಳು ಸಕಾರಾತ್ಮಕವಾದ ಅನುಸಂಧಾನ ನಡೆಸಿದ್ದಾರೆ. ಹಾಗೂ ಈ ವಿಚಾರದಲ್ಲಿ ಸಹಮತ ವ್ಯಕ್ತಪಡಿಸಿದ್ದಾರೆ.

ಸಮಸ್ಯೆಯ ಮಾರ್ಗ ಹಾಗೂ ಸಮಸ್ಯೆಯ ಪರಿಹಾರ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗಡೆ ರಸ್ತೆಯಲ್ಲಿ ನಡೆಯಬಾರದು, ಬದಲಾಗಿ ಸಂವಿಧಾನಿಕವಾಗಿ ಒಪ್ಪಿತ ಮಾರ್ಗದಲ್ಲೇ ಸಾಧ್ಯವಿದೆ. ಹಾಗೆಯೇ ಕೆಲವೊಂದು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ, ಅವುಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.

ಮೊತ್ತಮೊದಲಾಗಿ ಸುಪ್ರೀಂ ಕೋರ್ಟ್ ಈ ಕುರಿತಾಗಿ ನಿರ್ಣಯ ತೆಗೆದುಕೊಳ್ಳುವವರೆಗೆ ಯಾವುದೇ ರಾಜ್ಯ ಈ ವಿಷಯವಾಗಿ ಮತ್ತೊಂದು ರಾಜ್ಯದ ಮೇಲೆ ಬೇಡಿಕೆ ಇಡುವುದಿಲ್ಲ. ಎರಡನೆಯದಾಗಿ, ಎರಡೂ ರಾಜ್ಯಗಳು ಸೇರಿ ಎರಡೂ ರಾಜ್ಯಗಳ 3-3 ಒಟ್ಟು 6 ಮಂತ್ರಿಗಳು ಕುಳಿತು ವಿವರವಾಗಿ ಈ ಸಮಸ್ಯೆಯ ಪರಿಹಾರಕ್ಕಾಗಿ ಚಿಂತನೆ ನಡೆಸಲಿದ್ದಾರೆ. ಎರಡೂ ರಾಜ್ಯಗಳ ನಡುವೆ ಚಿಕ್ಕಪುಟ್ಟ ಇತರ ಸಮಸ್ಯೆಗಳು ಇವೆ, ನೆರೆ ರಾಜ್ಯಗಳಲ್ಲಿ ಇದು ಸಾಮಾನ್ಯವಾಗಿ ಕಾಣಿಸುವಂತದ್ದು. ಇಂತಹ ಸಮಸ್ಯೆಗಳ ಪರಿಹಾರ ಕೂಡಾ ಈ 3-3 ಮಂತ್ರಿಗಳು ಮಾಡಲಿದ್ದಾರೆ.

ಎರಡೂ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿರುವಂತೆ ಅನ್ಯ ಭಾಷೆಯ ವ್ಯಕ್ತಿಗಳಿಗೆ ಅಥವಾ ಯಾತ್ರಾರ್ಥಿಗಳಿಗೆ ಅಥವಾ ವ್ಯಾಪಾರಿಗಳಿಗೆ ಯಾವುದೇ ರೀತಿಯ ಸಂಕಷ್ಟ ಎದುರಾಗಬಾರದು, ಇದಕ್ಕಾಗಿ ಒಬ್ಬ ಹಿರಿಯ ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ಎರಡೂ ರಾಜ್ಯಗಳು ಸಮಿತಿ ನಿರ್ಮಾಣಕ್ಕೆ ಸಹಮತ ವ್ಯಕ್ತಪಡಿಸಿದೆ. ಕಾನೂನು ಸುವ್ಯವಸ್ಥೆಯನ್ನು ಸಂವಿಧಾನಕ್ಕೆ ಅನುಸಾರವಾಗಿ ಸಮರ್ಪಕವಾಗಿಡಲು ಈ ಸಮಿತಿ ಕಾರ್ಯನಿರ್ವಹಿಸಲಿದೆ.

ವಿಷಯಗಳ ಚರ್ಚೆ ನಡೆದಾಗ ಇದೂ ಕೂಡಾ ಚರ್ಚೆಗೆ ಬಂದಿತ್ತು, ಎಲ್ಲದರ ನಡುವೆ ನಕಲಿ ಟ್ವಿಟ್ಟರ್ ಖಾತೆಗಳೂ ಪ್ರಮುಖ ಪಾತ್ರ ವಹಿಸಿತ್ತು. ಕೆಲವೊಂದು ನಕಲಿ ಟ್ವಿಟ್ಟರ್ ಖಾತೆಗಳು ದೊಡ್ಡ ನಾಯಕರ ಹೆಸರಲ್ಲಿ ರಚಿಸಿ ಬಳಸಿಕೊಳ್ಳಲಾಗಿದೆ. ಈ ವಿಷಯ ಇಷ್ಟೊಂದು ಗಂಭೀರ ಇದಕ್ಕಾಗಿ ಆಗಿದೆ, ಈ ತರಹದ ನಕಲಿ ಖಾತೆಗಳಿಂದಾಗಿ ಎರಡೂ ಭಾಗದ ಜನರ ಭಾವನೆಗಳು ಉದ್ದೀಪನಗೊಳ್ಳುತ್ತದೆ ಹಾಗೂ ಘಟನೆಗಳು ಸಂಭವಿಸುತ್ತವೆ. ಈ ರೀತಿಯಾಗಿ ಎಲ್ಲೆಲ್ಲಾ ನಕಲಿ ಟ್ವಿಟ್ಟರ್ ಖಾತೆಗಳ ಸಮಸ್ಯೆ ಮುನ್ನಲೆಗೆ ಬಂದಿದೆ ಅಲ್ಲೆಲ್ಲಾ ಎಫ್. ಐ. ಆರ್ ಹಾಕಲಾಗುವುದು ಹಾಗೂ ಜನತೆಯ ಮುಂದೆ ಇವುಗಳನ್ನು ಪ್ರಸ್ತುತಪಡಿಸಲಾಗುವುದು.

ಒಂದು ರೀತಿಯಾಗಿ ಸರ್ವಸಮ್ಮತ ನಿರ್ಣಯವನ್ನು ಇಂದಿನ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಎರಡೂ ರಾಜ್ಯದ ವಿಪಕ್ಷದ ಮಿತ್ರರನ್ನೂ ಕೂಡಾ ಈ ದೇಶದ ಗೃಹಮಂತ್ರಿಯಾಗಿ ವಿನಂತಿ ಮಾಡಿಕೊಳ್ಳಲು ಬಯಸುತ್ತೇನೆ. ರಾಜಕಾರಣದ ವಿರೋಧ ಏನೇ ಇರಲಿ, ಆಡಳಿತ ಪಕ್ಷದ ವಿರುದ್ಧ ರಾಜಕಾರಣ ಮಾಡಬಹುದು ಆದರೆ, ಎರಡೂ ರಾಜ್ಯಗಳ ಜನತೆಯ ಹಿತಕ್ಕಾಗಿ ಎರಡೂ ರಾಜ್ಯಗಳ ಗಡಿಯಲ್ಲಿ ಬದುಕುತ್ತಿರುವ ಅನ್ಯಭಾಷಿಗರ ಹಿತಕ್ಕಾಗಿ, ಇದನ್ನು ರಾಜಕಾರಣದ ವಿಷಯವಾಗಿ ಮಾಡಬಾರದು ಹಾಗೂ ಸಮಿತಿಯ ಚರ್ಚೆಯ ವರದಿಯ ಜತೆಗೆ ಸುಪ್ರೀಂ ಕೋರ್ಟ್‌ನ ತೀರ್ಪಿಗಾಗಿ ಕಾಯಬೇಕು. ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್, ಎನ್ ಸಿ ಪಿ ಹಾಗೂ ಉದ್ಧವ್ ಠಾಕ್ರೆಯವರ ಗುಂಪಿನ ಎಲ್ಲಾ ನಾಯಕರು ಈ ವಿಷಯದಲ್ಲಿ ಸಹಮತ ವ್ಯಕ್ತಪಡಿಸಲಿದ್ದಾರೆ ಹಾಗೂ ಈ ವಿಷಯಕ್ಕೆ ರಾಜಕಾರಣದ ಬಣ್ಣ ಬಳಿಯಲಾರರು ಎಂಬ ವಿಶ್ವಾಸವಿದೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

eighteen + 3 =