Breaking News

ಓರೆಹಚ್ಚದೇ ಆಚಾರಗಳನ್ನು ನಂಬಬೇಡಿ- ಶಿಕ್ಷಕ ದೇಮಶೆಟ್ಟಿ

Spread the love

ಓರೆಹಚ್ಚದೇ ಆಚಾರಗಳನ್ನು ನಂಬಬೇಡಿ- ಶಿಕ್ಷಕ ದೇಮಶೆಟ್ಟಿ

ಯುವ ಭಾರತ ಸುದ್ದಿ ಮಮದಾಪುರ :
ಗೋಕಾಕ ತಾಲೂಕಿನ ಮಮದಾಪುರದ ಬಿ. ಸಿ. ಎಂ ವಿದ್ಯಾರ್ಥಿಗಳ ವಸತಿ ನಿಲಯದ ಆವರಣದಲ್ಲಿ ಗ್ರಾಮದ ಸಾಮಾಜಿಕ ಕಳಕಳಿ ಹೊಂದಿದ ಮನಸ್ಸುಗಳ ಹೃದಯಗಳ ಆಶಯದಂತೆ ರಸಸವೀ ಫೌಂಡೇಶನ್ ಅಡಿಯದಲ್ಲಿ ಪಾಕ್ಷಿಕ ‘ಜ್ಞಾನಾಕ್ಷಯ’ ಚಿಂತಕರ ಚಾವಡಿ 22ನೇ ಮಾಲಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸ್ಥಳೀಯ ಚಿಂತಾಮಣಿ ಪಾವಟೆ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ರ. ವೀ ದೇಮಶೆಟ್ಟಿ ಹೋಮಕ್ಕೆ ತುಪ್ಪ ಬಳಸುವುದು, ಮಾವಿನ ಎಲೆಗಳ ತೋರಣ ಕಟ್ಟುವುದು ಮತ್ತು ಬೆಳಿಗ್ಗೆ ಬೇಗ ಏಳುವುದು ಹೀಗೆ ಹತ್ತಾರು ಹಳೆಯ ಆಚಾರಗಳಲ್ಲಿನ ವೈಜ್ಞಾನಿಕ ಅಂಶವನ್ನು ತಿಳಿಸುತ್ತ, ವಿದ್ಯಾರ್ಥಿಗಳ ಪ್ರಶ್ನೆಗೆ ಹೊಸ ವಿಚಾರಗಳನ್ನು ಮನವರಿಕೆ ಮಾಡಿದರು. ಪ್ರತಿ ಆಚರಣೆಗಳು ಮೂಢನಂಬಿಕೆಗಳಲ್ಲ ಪ್ರತಿಯೊಂದು ವೈಜ್ಞಾನಿಕ ವಿಚಾರಗಳನ್ನು ಹೊಂದಿರುವುದಾಗಿವೆ. ವೈಜ್ಞಾನಿಕ ಚಿಂತನೆ ಮಾಡುವತ್ತ ಸಾಗಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿಕೊಂಡ ನಾಟಕ ಗುರೂಜಿ ಮಾಳಪ್ಪ ಸುಣಧೋಳಿ ಕೆಲವೊಂದು ಹಳೆಯ ಆಚಾರಗಳನ್ನು ನೆನಪಿಸುತ್ತ, ಕುತೂಹಲ ವ್ಯಕ್ತ ಪಡಿಸುತ್ತ ಹಳೆಯ ಆಚಾರಗಳ ಬಗ್ಗೆ ಅನುಮಾನ ಸಂಶಯ ಉಂಟಾದಾಗ ವಿದ್ಯಾರ್ಥಿಗಳಾದವರು ಬಲ್ಲರಿಂದ ತಿಳಿಕೊಳ್ಳುವಂತೆ ಮನವಲಿಸಿದರು.

ವಸತಿನಿಲಯದ ಸಿಬ್ಬಂದಿ ಮಲ್ಲವ್ವ ವಡ್ಡರಗಾಂವಿ ಉಪಸ್ಥಿತರಿದ್ದರು.

ಪ್ರೀತಿ ಬ್ಯಾಹಟ್ಟಿಯವರು ವಿಜ್ಞಾನ ಗೀತೆಯನ್ನು ಹಾಡಿದರು. ಪ್ರಜ್ವಲ್ ಕಲ್ಲೋಳ್ಳಿ ಸ್ವಾಗತಿಸಿಕೊಂಡರು. ಪವಿತ್ರಾ ಕುರುಬಗಟ್ಟಿ ನಿರೂಪಿಸಿದರು. ಸುವಿತ್ರಾ ಮಾಳಕನವರವರು ಶರಣ ಮಡಿವಾಳ ಮಾಚಿದೇವರ ವಚನವನ್ನು ವಾಚಿಸಿದರು.


Spread the love

About Yuva Bharatha

Check Also

ಹಿರೇಬೂದನೂರ : ಭಕ್ತರ ಸನ್ಮಾನ

Spread the loveಹಿರೇಬೂದನೂರ : ಭಕ್ತರ ಸನ್ಮಾನ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ …

Leave a Reply

Your email address will not be published. Required fields are marked *

twenty − two =