Breaking News

ರಾಜಯೋಗ ಕಲಿತು ಪರಮಾತ್ಮನ ಶಕ್ತಿ ಪಡೆದು ಜೀವನ ಉಜ್ವಲಗೊಳಿಸಿಕೊಳ್ಳಲು ರಾಜಯೋಗಿನಿ ಅಂಬಿಕಾಜಿ ಕರೆ

Spread the love

ರಾಜಯೋಗ ಕಲಿತು ಪರಮಾತ್ಮನ ಶಕ್ತಿ ಪಡೆದು ಜೀವನ ಉಜ್ವಲಗೊಳಿಸಿಕೊಳ್ಳಲು  ರಾಜಯೋಗಿನಿ ಅಂಬಿಕಾಜಿ ಕರೆ

ಯುವ ಭಾರತ ಸುದ್ದಿ ಬೆಳಗಾವಿ :
ಕರ್ನಾಟಕ ಸರಕಾರ ಹಾಗೂ ಬ್ರಹ್ಮಾಕುಮಾರೀಸ್ ರವರ ಸಂಯುಕ್ತ ಸಹಯೋಗದೊಂದಿಗೆ ದಿವ್ಯಾಂಗ ಸೇವಾ ಅಭಿಯಾನದ ಉದ್ಘಾಟನಾ ಸಮಾರಂಭ ಸರ್ಕಾರಿ ಕಿವುಡ ಹೆಣ್ಣುಮಕ್ಕಳ ಶಾಲೆ, ಆಝಮ್ ನಗರ ಬೆಳಗಾವಿ ಇಲ್ಲಿ ಸೋಮವಾರ
ನಡೆಯಿತು.
ಬಸವರಾಜ ಎ.ಎಮ್. ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೆಳಗಾವಿ ಇವರು ಮಾತನಾಡಿ, ದಿವ್ಯಾಂಗ ಮಕ್ಕಳು ವ್ಯಕ್ತಿತ್ವ ವಿಕಸನ ಹೊಂದಿ ಅನೇಕ ತರಬೇತಿ ಪಡೆದು ಉದ್ಯೋಗ ಪಡೆಯಿಲಿ ಎಂದು ಆಶಿಸಿದರು.
ಸಾನಿಧ್ಯ ವಹಿಸಿದ್ದ ಬ್ರಹ್ಮಾಕುಮಾರಿ ರಾಜಯೋಗಿನಿ ಅಂಬಿಕಾಜಿ ಮಾತನಾಡಿ, ಮನುಷ್ಯರಿಗೆ ಕೇಳಿಸಿಕೊಳ್ಳುವುದು ಮಾತನಾಡುವುದರಲ್ಲಿ ವಿಘ್ನಗಳು ಬರುತ್ತವೆ, ಆದರೆ ಈ ಮಕ್ಕಳು ವಿಘ್ನಗಳಿಂದ ದೂರವಾಗಿದ್ದಾರೆ. ಸಹಜ ರಾಜಯೋಗ ಕಲಿತು ಪರಮಾತ್ಮನ ಶಕ್ತಿ ಪಡೆದು ಈ ಮಕ್ಕಳ ಜೀವನ ಉಜ್ವಲವಾಗಲಿ. ಈ ವಿಶೇಷ ಆತ್ಮಗಳು ಈ ಅಭಿಯಾನದಲ್ಲಿ ಸಶಕ್ತಿಕರಣ ಹೊಂದಲಿ ಎಂದು ಆಶೀರ್ವಚನ ನೀಡಿದರು.

ಬಿ.ಕೆ. ಸೂರ್ಯಮಣಿ ಭಾಯಿ ಮೌಂಟ್ ಅಬು ಅವರು ಕರ್ನಾಟಕ ಸರ್ಕಾರದ ಅನುಮತಿ ಮೂಲಕ ಈ ಅಭಿಯಾನ ಬೆಳಗಾವಿ, ಬಿಜಾಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ನೂರಾರು ಸಂಘ ಸಂಸ್ಥೆಗಳ ಜೊತೆಗೆ ಸಂಪರ್ಕ ಹೊಂದಿ ದಿವ್ಯಾಂಗರ ಸೇವೆಗೆ ಕಾರಣಿಕರ್ತವಾಗಿದೆ. ಬೌದ್ಧಿಕ ಮಾನಸಿಕ ಶಾರೀರಿಕ ವ್ಯಕ್ತಿತ್ವ ವಿಕಾಸಕ್ಕಾಗಿ ಬ್ರಹ್ಮಾಕುಮಾರಿ ಸಂಸ್ಥೆ ಪ್ರಯತ್ನಿಸುತ್ತಿದೆ. ದಿವ್ಯಾಂಗ ಮಕ್ಕಳ ಆಂತರಿಕ ಶಕ್ತಿ ವಿಕಾಸ ಮಾಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಸರ್ವರ ಸಹಕಾರದಿಂದ ಇಡೀ ದೇಶದಲ್ಲಿ ಈ ಸೇವೆ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದರು.
ನಾಮದೇವ ವಿ. ಭಿಲ್ಕಾರ, ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ, ವಿಜಯ ಮೋರೆ, ಮಾಜಿ ಮೇಯರ್ ಹಾಗೂ ಕಾರ್ಯಾಧ್ಯಕ್ಷರು ‘ಶಾಂತಾಯಿ ವೃದ್ಧಾಶ್ರಮ’ ಬೆಳಗಾವಿ, ಗೌಡರ, ಸುಪೆರಿಂಟೆಂಡೆಂಟ್ ಸರ್ಕಾರಿ ಕಿವುಡ ಮಕ್ಕಳ ಶಾಲೆ, ಆಝಮ್ ನಗರ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಚಿತ್ರಪ್ರದರ್ಶನ, ಪ್ರಾಯೋಗಿಕ ತರಬೇತಿ, ದಿವ್ಯಗುಣಗಳ ಆಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿ ದಿವ್ಯಾಂಗ ಸಮಾನತೆ, ಸಂರಕ್ಷಣೆ ಹಾಗೂ ಸಶಕ್ತಿಕರಣದ ಬಗ್ಗೆ ಜಾಗೃತಿ ಮೂಡಿಸಲಾಯಿತು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

eight − 7 =