Breaking News

ಗೋಕಾಕ ಎಲ್.ಡಿ.ಎಸ್.ಫೌಂಡೇಶನ್ : ಶ್ರೀ ಸಿದ್ದೇಶ್ವರ ಸ್ವಾಮಿಗಳ ಸ್ಮರಣೋತ್ಸವ

Spread the love

ಗೋಕಾಕ ಎಲ್.ಡಿ.ಎಸ್.ಫೌಂಡೇಶನ್ : ಶ್ರೀ ಸಿದ್ದೇಶ್ವರ ಸ್ವಾಮಿಗಳ ಸ್ಮರಣೋತ್ಸವ

ಯುವ ಭಾರತ ಸುದ್ದಿ ಗೋಕಾಕ :
ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಬುದ್ಧ, ಬಸವಣ್ಣ, ಗಾಂಧಿಜೀ ಅವರ ಸಾಲಿಗೆ ಸೇರುವ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು ನುಡಿದಂತೆ ನಡೆದು ನಡೆದಾಡುವ ದೇವರೆಂದು ಪ್ರಸಿದ್ಧಿ ಪಡೆದವರು. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವು ಸಹ ಬಾಳಿ ಬದುಕಬೇಕು ಎಂದು ಜಾನಪದ ತಜ್ಞ ಡಾ.ಸಿ.ಕೆ.ನಾವಲಗಿ ಹೇಳಿದರು.
ಬುಧವಾರದಂದು ಸಾಯಂಕಾಲ ನಗರದಲ್ಲಿ ಇಲ್ಲಿನ ಎಲ್.ಡಿ.ಎಸ್.ಫೌಂಡೇಶನ್ ನವರು ಹಮ್ಮಿಕೊಂಡ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು ಸ್ಮರಣೋತ್ಸವ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಜ್ಞಾನದ ಖನಿ ಯಾಗಿದ್ದ ಶ್ರೀ ಸಿದ್ದೇಶ್ವರ ಸ್ವಾಮಿಗಳು. ೫ ಭಾಷೆಗಳಲ್ಲಿ ಪರಿಣಿತಿ ಹೊಂದಿದರವರು. ದೇಶ ವಿದೇಶಗಳಲ್ಲಿ ಸಂಚರಿಸಿ ಸರಳವಾಗಿ ಎಲ್ಲರ ಮನ ಮುಟ್ಟುವಂತೆ ಪ್ರವಚನ ನೀಡುತ್ತಿದ್ದರು. ಮನಕುಲಕ್ಕೆ ನೋವಾಗದಂತೆ ಎಂದು ನಡೆದುಕೊಳ್ಳದ ಸಿದ್ದೇಶ್ವರ ಶ್ರೀಗಳು ಮಾನವೀಯತೆಗೆ ಸಕಾರಮುರ್ತಿಯಾಗಿದ್ದರು. ಮೌನವಾಗಿ ಇರುತ್ತಿದ್ದ ಶ್ರೀಗಳ
ಹರಟೆಯಲ್ಲಿಯೂ ಸಹ ಜ್ಞಾನ ಇರುತ್ತಿತ್ತು. ಅಲ್ಲಂಪ್ರಭುವಿನ ವಚನಗಳನ್ನು ಎರೆಡು ಸಂಪುಟದಲ್ಲಿ ಹೊರ ತಂದು ಓದುಗರಿಗೆ ವಚನಗಳ ರಸದೌತಣವನ್ನು ಉಣಬಡಿಸಿದರು.
ವ್ಯಾಮೋಹ ಇಲ್ಲದ ಜೀವಿ ತಮ್ಮ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಹಾಕಿ ಕೊಟ್ಟ ದಾರಿಯಲ್ಲಿ ಬಾಳಿ ಬದುಕಿದವರು. ಹಸಿದವರಿಗೆ ಅನ್ನ , ಸಮಯಕ್ಕೆ ಮಹತ್ವ ನೀಡುತ್ತಿದ್ದ ಶ್ರೀಗಳು ವಿಜಯಪುರದಲ್ಲಿ ಬೃಹದಾಕಾರದ ಗ್ರಂಥಾಲಯವನ್ನು ಮಾಡಲು ಪ್ರೇರೆಪಿಸಿದ್ದರ ಪರಿಣಾಮ ವಿಜಯಪುರದಲ್ಲಿ ಸುಸಜ್ಜಿತ ಗ್ರಂಥಾಲಯವನ್ನು ನಿರ್ಮಾಣವಾಗಿದೆ ಈ ಗ್ರಂಥಾಲಯದಲ್ಲಿ ೧೫ ಸಾವಿರ ದೊಡ್ಡ ಪುಸ್ತಕಗಳು ಇವೆ ಕನ್ನಡ, ಉರ್ದು, ಸಂಸ್ಕೃತಿ ಇಂಗ್ಲಿಷ್ ,ಗ್ರೀಕ್ ಸೇರಿದಂತೆ ಐದು ಭಾಷೆಗಳ ಗ್ರಂಥಗಳನ್ನು ಈ ಗ್ರಂಥಾಲಯದಲ್ಲಿ ಇರಿಸಲಾಗಿದೆ.

ಶ್ರೀಗಳ ಅವರ ಪ್ರವಚನ ಕೇಳಿ ಸಾವಿರಾರು ಜನರ ಬದುಕು ಬದಲಾಗಿದೆ. ಸಿದ್ದೇಶ್ವರ ಶ್ರೀಗಳ ಬದುಕೆ ಒಂದು ಸಾಧನೆ ಪ್ರಕೃತಿಯ ಹಾಗೆ ಮನುಷ್ಯ ಇರಬೇಕು ಎನ್ನುತ್ತಿದ್ದ ಅವರಂತಹರನ್ನು ದೇವರು ಯುಗಕ್ಕೆ ಒಬ್ಬರಂತೆ ಭೂಮಿ ಮೇಲೆ ಕಳುಹಿಸುತ್ತಾನೆ ಇಂತಹ ಸತ್ಪುರುಷರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವಿಂದು ಸಾಗಿ ಸದೃಢ ಸಮಾಜ ನಿರ್ಮಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಎಲ್.ಡಿ.ಎಸ್.ಪೌಂಡೇಶನ್ ಉಪಾಧ್ಯಕ್ಷ ಲಕ್ಷ್ಮಣ ಯಮಕನಮರಡಿ, ಕಾರ್ಯದರ್ಶಿ ಶಂಕರ ಯಮಕನಮರಡಿ , ಚಂದ್ರಶೇಖರ್ ಯಮಕನಮರಡಿ, ಪದಾಧಿಕಾರಿಗಳಾದ ಸಾದಿಕ ಹಲ್ಯಾಳ, ತಾತಾಜಿ ಮಾಲಕರಿ, ಶರಣಗೌಡ ಬಿರಾದಾರ, ಮುಗುಟ ಪೈಲವಾನ, ಶಿವು ರಸ್ತಾನಪೂರ, ಶಬ್ಬೀರ ಮುಧೋಳ, ಕೃಷ್ಣಾ ಖಾನಪ್ಪನವರ ಉಪಸ್ಥಿತರಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

two × 1 =