Breaking News

ಭೀಕರ ಅಪಘಾತಕ್ಕೆ ಆರು ಯಲ್ಲಮ್ಮ ಭಕ್ತರ ದುರ್ಮರಣ

Spread the love

ಭೀಕರ ಅಪಘಾತಕ್ಕೆ ಆರು ಯಲ್ಲಮ್ಮ ಭಕ್ತರ ದುರ್ಮರಣ

ಯುವ ಭಾರತ ಸುದ್ದಿ ಬೆಳಗಾವಿ :
ಸುಪ್ರಸಿದ್ದ ದೇವಸ್ಥಾನಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳ ವಾಹನ ಮರಕ್ಕೆ ಗುದ್ದಿದ ಪರಿಣಾಮ ನಡೆದ ಭೀಕರ ಅಪಘಾತದಲ್ಲಿ ಆರು ಭಕ್ತರು ಮೃತ ಪಟ್ಟಿದ್ದಾರೆ.

ಚಿಂಚನೂರು ವಿಠ್ಠಲ ದೇವಸ್ಥಾನದ ಹತ್ತಿರ ಈ ಅಪಘಾತ ಸಂಭವಿಸಿದೆ. ಮಹೀಂದ್ರಾ ವಾಹನ ಆಲದ ಮರಕ್ಕೆ ಗುದ್ಧಿ ಇವರೆಲ್ಲ ಮೃತಪಟ್ಟಿದ್ದಾರೆ.

ರಾಮದುರ್ಗ ತಾಲೂಕಿನ ಹುಲಕುಂದ ನಿವಾಸಿಗಳು ಮೃತಪಟ್ಟಿದ್ದು ಮಧ್ಯರಾತ್ರಿ ಸವದತ್ತಿಯ ಯಲ್ಲಮ್ಮ ಗುಡ್ಡಕ್ಕೆ ತೆರಳುತ್ತಿದ್ದರು. ಹನುಮವ್ವ ನಾಕಾಡಿ (25) , ದೀಪಾ (32), ಸವಿತಾ (17 ), ಸುಪ್ರೀತಾ (11), ಮಾರುತಿ (42), ಇಂದಿರವ್ವ (24) ಮೃತರಾದವರು. ಕಟಕೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

twenty + 5 =