Breaking News

ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಟಿಂಕರಿಂಗ್ ಲ್ಯಾಬ್ ಉದ್ಘಾಟಿಸಿದ- ಅಂಬಿರಾವ ಪಾಟೀಲ!!

Spread the love

ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಟಿಂಕರಿಂಗ್ ಲ್ಯಾಬ್ ಉದ್ಘಾಟಿಸಿದ- ಅಂಬಿರಾವ ಪಾಟೀಲ!!

 

 

ಯುವ ಭಾರತ ಸುದ್ದಿ ಘಟಪ್ರಭಾ : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕೋಡಿ ಇವರ ಸಂಯುಕ್ತ ಆಶ್ರಯದಲ್ಲಿ ಇಲ್ಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮಂಜೂರಾದ ಅಟಲ್ ಟಿಂಕ್‌ರಿಂಗ್ ಲ್ಯಾಬ್‌ನ್ನು ಇಂದು ಕಾರ್ಮಿಕ ಮುಖಂಡರಾದ ಅಂಬಿರಾವ್ ಪಾಟೀಲ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಗೌರಿಶಂಕರ ಕಡೆಚೂರ ಮಾತನಾಡಿ, ರಾಜ್ಯದಲ್ಲಿ ಅತೀ ಹೆಚ್ಚು ಅಂದರೆ 23 ಅಟಲ್ ಟಿಂಕ್‌ರಿಂಗ್ ಲ್ಯಾಬ್ ಗೋಕಾಕ ಮತ್ತು ಅರಭಾವಿ ಕ್ಷೇತ್ರದಲ್ಲಿ ಮಂಜೂರಾಗಿದೆ. ಅಟಲ್ ಟಿಂಕ್‌ರಿಂಗ್ ಲ್ಯಾಬ್‌ಗಳಿಂದ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣದಲ್ಲಿ ತಮಗೆ ಯಾವುದರಲ್ಲಿ ಆಸಕ್ತಿ ಇದೆ ಎನ್ನುವುದನ್ನು ಮುಂಚಿತವಾಗಿ ತಿಳಿದುಕೊಂಡು ಮುಂದೆ ಬರುವ ಪದವಿ ಶಿಕ್ಷಣದಲ್ಲಿ ಅದೇ ಕ್ಷೇತ್ರದಲ್ಲಿ ಮುಂದುವರಿಯಬಹುವುದು.

ಪಿಯುಸಿ ಆದ ನಂತರ ಅವರಿಗೆ ಯವುದೆ ಗೊಂದಲುಗಳು ಉಂಟಾಗುವುದಿಲ್ಲ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಉತ್ತಮ ಗುರಿ ತಲುಪಲು ಇದರಿಂದ ಅನುಕೂಲವಾಗುತ್ತದೆ, ಆದ್ದರಿಂದ ಸರಕಾರದ ಯೋಜನೆಗಳನ್ನು ಪ್ರತಿಯೊಬ್ಬರು ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.


Spread the love

About Yuva Bharatha

Check Also

ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾರಾಗಿ, ಅಧಿಕಾರಿಗಳಿಗೆ ಶಾಸಕ ರಮೇಶ ಜಾರಕಿಹೊಳಿ ಕರೆ.!

Spread the loveಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾರಾಗಿ, ಅಧಿಕಾರಿಗಳಿಗೆ ಶಾಸಕ ರಮೇಶ ಜಾರಕಿಹೊಳಿ ಕರೆ.! ಗೋಕಾಕ: ಅಧಿಕಾರಿಗಳು ನದಿ ತೀರದ …

Leave a Reply

Your email address will not be published. Required fields are marked *

six + fifteen =