Breaking News

ಬೆಳಗಾವಿಯ ಆಶಾಕಿರಣ : ಜನ ನಾಯಕ ಕಿರಣ ಜಾಧವ

Spread the love

ಬೆಳಗಾವಿಯ ಆಶಾಕಿರಣ : ಜನ ನಾಯಕ ಕಿರಣ ಜಾಧವ

ಬೆಳಗಾವಿಯ ಯುವ ನಾಯಕ ಕಿರಣ ಜಾಧವ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಸಾರ್ವಜನಿಕ ಜೀವನಕ್ಕೆ ಧುಮುಕಿದ ಕಿರಣ ಜಾಧವ ಅವರು ಈ ಹಿಂದೆ ಬೆಳಗಾವಿ ಉತ್ತರ ಮತಕ್ಷೇತ್ರದಿಂದ ಬಿಜೆಪಿಯಿಂದ ಕಣಕ್ಕಿಳಿದು ತುಸು ಅಂತರದಿಂದ ಸೋಲು ಅನುಭವಿಸಿದ್ದರು. ಬಿಜೆಪಿಯಲ್ಲಿ ಅತ್ಯಂತ ಸಕ್ರಿಯರಾಗಿ ಸಂಘಟನೆಯನ್ನು ಕಟ್ಟಿ ಬೆಳೆಸುತ್ತಿರುವ, ಜನ ನಾಯಕರಾಗಿ ಗುರುತಿಸಿಕೊಂಡಿರುವ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತರಾಗಿದ್ದಾರೆ. ಬಿಜೆಪಿಯಿಂದ ಟಿಕೆಟ್ ಪಡೆದು ಶಾಸಕರಾಗಿ ಬೆಳಗಾವಿ ಮಹಾನಗರವನ್ನು ತಮ್ಮದೇ ಆದ ಕನಸುಗಳ ಮೂಲಕ ಕಟ್ಟುವ ಯೋಚನೆ ಅವರದ್ದಾಗಿದೆ.

 

ಯುವ ಭಾರತ ವಿಶೇಷ ಬೆಳಗಾವಿ : ಬೆಳಗಾವಿಯ ವಿಮಲ್ ಫೌಂಡೇಶನ್ ಸಂಸ್ಥಾಪಕ, ಬಿಜೆಪಿ ನಾಯಕ ಹಾಗೂ ಸಕಲ ಮರಾಠಾ ಸಮಾಜದ ಮುಂಚೂಣಿ ಮುಖಂಡರಾಗಿರುವ ಕಿರಣ ಜಾಧವ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಸಾಮಾಜಿಕ ಕಾರ್ಯಕರ್ತರಾಗಿ ಹೆಸರು ಮಾಡಿರುವ ಕಿರಣ ಜಾಧವ ಅವರು ಇಡೀ ಜಗತ್ತಿಗೆ ಕೊರೊನಾ ಬಂದಾಗ ಬಡವರು ಹಾಗೂ ದೀನದಲಿತರಿಗೆ ನೆರವು ನೀಡುವ ಮೂಲಕ ಅವರ ಸಂಕಷ್ಟಕ್ಕೆ ಧಾವಿಸಿದ್ದರು. ಆ ಸಂದರ್ಭದಲ್ಲಿ ತಮ್ಮಿಂದಾದ ಸಹಾಯವನ್ನು ಸಮಾಜಕ್ಕೆ ನೀಡಿದ್ದರು.

ಜೊತೆಗೆ ಕಾಲಕಾಲಕ್ಕೆ ಬಡವರು, ದೀನ-ದಲಿತರಿಗೆ ಅಗತ್ಯ ಸಹಾಯ ಮಾಡುವ ಮೂಲಕ ತಾವು ಒಬ್ಬ ಶ್ರೇಷ್ಠ ಜನನಾಯಕ ಎನ್ನುವುದನ್ನು ಸಾಬೀತುಪಡಿಸಿದ್ದರು. ಮರಾಠಾ ಸಮಾಜದ ಬೆಳವಣಿಗೆಗೆ ಬೆಳಗಾವಿಯಲ್ಲಿ ಕಿರಣ ಜಾಧವ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಅವರು ಸಮಾಜಕ್ಕೆ ಬೇಕಾದ ಮೀಸಲಾತಿ ಸೇರಿದಂತೆ ಇತರ ಸಂದರ್ಭಗಳಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದ್ದರು. ಕೆಲ ದಿನಗಳ ಹಿಂದಷ್ಟೇ ಮರಾಠಾ ಸಮಾಜಕ್ಕೆ ಮೀಸಲಾತಿ ನೀಡುವಂತೆ ಬೆಳಗಾವಿಯ ವಿಧಾನ ಮಂಡಲದ ಅಧಿವೇಶನ ನಡೆಯುತ್ತಿರುವ ವೇಳೆ ಸುವರ್ಣ ವಿಧಾನ ಸೌಧದ ಬಳಿ ಬೃಹತ್ ಪ್ರತಿಭಟನೆ ಆಯೋಜಿಸಿ ಗಮನ ಸೆಳೆದಿದ್ದರು.

ಮರಾಠಾ ಸಮಾಜಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳ ಕುರಿತು ಕಿರಣ ಜಾಧವ ಅವರು ಸಮಾಜವನ್ನು ಸಂಘಟನಾತ್ಮಕವಾಗಿ ಒಗ್ಗೂಡಿಸುತ್ತಾ ಬಂದಿದ್ದಾರೆ. ಅವರ ಕ್ರಿಯಾಶೀಲ ನಾಯಕತ್ವದಡಿ ಮರಾಠಾ ಸಮಾಜ ಬೆಳಗಾವಿ ಸೇರಿದಂತೆ ಕರ್ನಾಟಕದಲ್ಲಿ ಒಂದೇ ವೇದಿಕೆಯಡಿ ಬಂದಿರುವುದು ಗಮನಿಸಬೇಕಾದ ಸಂಗತಿ. ಕೇವಲ ಮರಾಠಾ ಸಮಾಜಕ್ಕೆ ಮಾತ್ರ ತಮ್ಮನ್ನು ತಾವು ಸೀಮಿತಗೊಳಿಸಿಕೊಳ್ಳದ ಜನನಾಯಕ ಕಿರಣ ಜಾಧವ ಅವರು ಇತರ ಸಮಾಜಗಳಿಗೆ ಬೇಕಾಗಿರುವ ಹೋರಾಟಗಳಿಗೂ ನಾಯಕತ್ವ ವಹಿಸಿದ್ದಾರೆ. ಜೊತೆಗೆ ನಾಗರಿಕರಿಗೆ ಸಿಗಬೇಕಾದ ಮೂಲಭೂತ ಸೌಲಭ್ಯಗಳ ಕುರಿತು ಸಹ ಹೋರಾಟ ನಡೆಸಿದ ನೊಂದವರಿಗೆ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜನತೆಗೆ ನೆರವು ನೀಡುವುದು ಕಿರಣ ಜಾಧವ ಅವರಿಗೆ ಅತ್ಯಂತ ಅಚ್ಚು ಮೆಚ್ಚು. ಈ ದಿಸೆಯಲ್ಲಿ ಯಾರೇ ಬಂದರೂ ಅವರಿಗೆ ನೆರವಿನ ಸಹಾಯ ಹಸ್ತ ನೀಡುವ ಪರಂಪರೆಯನ್ನು ಮೊದಲಿನಿಂದಲೂ ಅನುಸರಿಸುತ್ತ ಬಂದಿದ್ದಾರೆ.

ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿರುವ ಕಿರಣ ಜಾಧವ ಅವರು ರಾಜ್ಯ ಹಾಗೂ ರಾಷ್ಟ್ರ ನಾಯಕರ ಜೊತೆ ಅತ್ಯುತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲು ಬಯಸಿರುವ ಅವರು ಅವರಿಗೆ ಪಕ್ಷ ಟಿಕೆಟ್ ನೀಡಿದರೆ ಇನ್ನು ಹೆಚ್ಚು ಜನಸೇವೆ ಮಾಡಲು ಅನುಕೂಲವಾಗುತ್ತದೆ ಎನ್ನುವುದು ಅವರ ಆಶಯವಾಗಿದೆ.

ಮುಂಬರುವ ದಿನಗಳಲ್ಲಿ ಕಿರಣ ಜಾಧವ ಸಾಮಾಜಿಕವಾಗಿ ಇನ್ನೂ ಹೆಚ್ಚು ಸೇವೆ ಸಲ್ಲಿಸಲು ಅನುಕೂಲವಾಗುವಂತೆ ಅವರಿಗೆ ಜವಾಬ್ದಾರಿಗಳು ಸಿಗುವಂತಾಗಲಿ ಎನ್ನುವುದು ಅವರ ಅಭಿಮಾನಿಗಳ ಮನದಾಳದ ಬಯಕೆಯಾಗಿದೆ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

8 − 2 =