Breaking News

ಅಕ್ರಮ ಕಳ್ಳಬಟ್ಟಿ ಸಾಗಾಟ : ಬಂಧನ

Spread the love

ಅಕ್ರಮ ಕಳ್ಳಬಟ್ಟಿ ಸಾಗಾಟ : ಬಂಧನ

ಯುವ ಭಾರತ ಸುದ್ದಿ ಬೆಳಗಾವಿ :
ಅಕ್ರಮವಾಗಿ ಕಳ್ಳಬಟ್ಟಿ ಸಾರಾಯಿ ಸಾಗಾಟ ಮತ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಜಿಲ್ಲಾ ಸಿಇಎನ್ ಮತ್ತು ಬೆಳಗಾವಿ ಡಿಸಿಆರ್ ಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಂಕರ ವೀರಭದ್ರ ಅಲದಾಳಿ(43) ಅಕ್ರಮ ಕಳ್ಳಬಟ್ಟಿ ಸಾಗಾಟ ಪ್ರಕರಣದಲ್ಲಿ ಬಂಧಿತ ವ್ಯಕ್ತಿಯಾಗಿದ್ದಾನೆ. 19ರಂದು ಜಿಲ್ಲಾ ಸಿಇಎನ್ ಪೊಲೀಸ್ ಠಾಣೆ ಮತ್ತು ಬೆಳಗಾವಿ ಡಿಸಿಆರ್ ಬಿ ಅಧಿಕಾರಿ ಮತ್ತು ಸಿಬ್ಬಂದಿಗಳು ಖಚಿತ ಮಾಹಿತಿ ಆಧರಿಸಿ, ಸಾರ್ವಜನಿಕರಿಗೆ ಅಕ್ರಮವಾಗಿ ಮಾರಾಟ ಮಾಡಲು ಕಳ್ಳಬಟ್ಟಿ ಸಾರಾಯಿಯನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಹುಕ್ಕೇರಿ ತಾಲೂಕಿನ ನಾಗನೂರ ಗ್ರಾಮದಲ್ಲಿ ದಾಳಿ ನಡೆಸಿದ್ದಾರೆ. ದಾಳಿ ಕಾಲಕ್ಕೆ ಆರೋಪಿ ಶಂಕರ ವೀರಭದ್ರ ಅಲದಾಳಿ(43) ಸಾ: ನಾಗನೂರ ಕೆ. ಎಮ್ ಈತನಿಗೆ ದಸ್ತಗೀರ ಮಾಡಿ ಆತನ ವಶದಲ್ಲಿದ್ದ 20 ಲೀಟರ್ ಕಳ್ಳಬಟ್ಟಿ ಸಾರಾಯಿ ಮತ್ತು ದ್ವಿಚಕ್ರವಾಹನ ನಂಬರ ಕೆಎ 23, ಇಎಫ್ 3162 ಇದನ್ನು ವಶಪಡಿಸಿಕೊಂಡಿದ್ದಾರೆ.
ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

one × 1 =