Breaking News

ಅಂತರ್ ವಿವಿ ಅಥ್ಲೆಟಿಕ್ಸ್ : ಕೋಚ್/ ಮ್ಯಾನೇಜರ್ ಆಗಿ ರಿಚಾ ರಾವ್ ನೇಮಕ

Spread the love

ಅಂತರ್ ವಿವಿ ಅಥ್ಲೆಟಿಕ್ಸ್ :
ಕೋಚ್/ ಮ್ಯಾನೇಜರ್ ಆಗಿ ರಿಚಾ ರಾವ್ ನೇಮಕ

ಯುವ ಭಾರತ‌ ಸುದ್ದಿ ಬೆಳಗಾವಿ :
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಥ್ಲೆಟಿಕ್ಸ್ (ಪುರುಷ ಮತ್ತು ಮಹಿಳಾ) ತಂಡಗಳು ನೈಋತ್ಯ ವಲಯ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಲು ಚೆನ್ನೈನ ಟಿಎನ್ ಪಿಇಎಸ್ ವಿಶ್ವವಿದ್ಯಾನಿಲಯಕ್ಕೆ ತೆರಳುತ್ತಿವೆ. ಜನವರಿ 9 ರಿಂದ 12 ರವರೆಗೆ ಚಾಂಪಿಯನ್‌ಶಿಪ್ ನಡೆಯಲಿದ್ದು, ಬೆಳಗಾವಿ ಬಿ.ವಿ.ಬೆಲ್ಲದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ರಿಚಾ ರಾವ್ ಅವರನ್ನು ಈ ತಂಡಗಳ ಕೋಚ್ ಹಾಗೂ ಮ್ಯಾನೇಜರ್ ಆಗಿ ನೇಮಿಸಲಾಗಿದೆ.

ತಂಡವು 7.01.2023 ರಂದು ಹುಬ್ಬಳ್ಳಿಯಿಂದ ಹೊರಟು 13.01.2023 ರಂದು ಹಿಂದಿರುಗಲಿದೆ ಎಂದು ಹುಬ್ಬಳ್ಳಿ ಕೆಎಸ್ ಎಲ್ ಯು ಪ್ರಕಟಣೆ ತಿಳಿಸಿದೆ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

eighteen − fourteen =