ಇಂಡಿ ಮಡಿವಾಳ ಮಾಚಿದೇವ ವೃತ್ತ ನಿರ್ಮಾಣಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಭೂಮಿಪೂಜೆ
ಯುವ ಭಾರತ ಸುದ್ದಿ ಇಂಡಿ :
ಪಟ್ಟಣದ ಸಿಂದಗಿ ರಸ್ತೆಯಲ್ಲಿ ಮಡಿವಾಳ ಮಾಚಿದೇವ ವೃತ್ತದಲ್ಲಿ ಮಡಿವಾಳ ಸಮುದಾಯದಿಂದ ಹಮ್ಮಿಕೊಂಡ ಮಡಿವಾಳ ಮಾಚಿದೇವ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಶರಣ ಮಡಿವಾಳ ಮಾಚಿದೇವ ವೃತ್ತ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ ಅವರು,ಶರಣ ಮಡಿವಾಳ ಮಾಚಿದೇವ ವೃತ್ತ ನಿರ್ಮಾಣಕ್ಕೆ ೨ ಲಕ್ಷ ರೂ.ಗಳನ್ನು ವಯಕ್ತಿವಾಗಿ ನೀಡಲಾಗುತ್ತಿದ್ದು,ವೃತ್ತ ನಿರ್ಮಾಣಕ್ಕೆ ಇನ್ನಷ್ಟು ಅನುಧಾನ ಬೇಕಾದರೂ ನೀಡಲಾಗುತ್ತದೆ.ವೃತ್ತ ಸುಂದರವಾಗಿ ನಿರ್ಮಾಣವಾಗಬೇಕು ಎಂದು ಹೇಳಿದ ಅವರು,ಬಸವಣ್ಣನವರ ಅನುಭವ ಮಂಟಪದಲ್ಲಿ ಮಡಿವಾಳ ಮಾಚಿದೇವರಂತ ಶರಣರು ಈ ನಾಡಿನಲ್ಲಿ ಆರೋಗ್ಯಯುತ ಸಮ ಸಮಾಜ ನಿರ್ಮಾಣಕ್ಕೆ ತಮ್ಮ ವಚನಗಳ ಮೂಲಕ ಶ್ರಮಿಸಿದ್ದಾರೆ.ಬಸವಣ್ಣನವರು ಮೊದಲು ಮಾಡಿಕೊಂಡು ನಾಡಿನ ಶರಣರು ತೊರಿಸಿದ ಮಾರ್ಗದಲ್ಲಿ ನಾವೆಲ್ಲರು ನಡೆಯೋಣ ಎಂದು ಹೇಳಿದರು.
ಮಡಿವಾಳ ಮಾಚಿದೇವ ಸಮಾಜದ ತಾಲೂಕು ಅಧ್ಯಕ್ಷ ಶ್ರೀಶೈಲ ಅಗಸರ,ಉಪಾಧ್ಯಕ್ಷ ಅಶೋಕ ಅಗಸರ,ಖಚಾಂಚಿ ಚಂದ್ರಾಮ ಅಗಸರ,ಕಾಂಗ್ರೆಸ್ ಮುಖಂಡರಾದ ಜಾವೀದ ಮೊಮಿನ,ಜಟ್ಟೆಪ್ಪ ರವಳಿ,ಇಲಿಯಾಸ ಬೊರಾಮಣಿ,ಶ್ರೀಶೈಲ ಅಗಸರ,ಶಿವಾನಂದ ಮಡಿವಾಳ,ಆಕಾಶ ಅಗಸರ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.