Breaking News

ಉಪ್ಪಾರಟ್ಟಿ  ಗ್ರಾಮದಲ್ಲಿ ಪ್ರಧಾನಿ ಜನ್ಮದಿನ ಭರ್ಜರಿ ಆಚರಣೆ.!

Spread the love

ಉಪ್ಪಾರಟ್ಟಿ  ಗ್ರಾಮದಲ್ಲಿ ಪ್ರಧಾನಿ ಜನ್ಮದಿನ ಭರ್ಜರಿ ಆಚರಣೆ.!


ಯುವ ಭಾರತ ಸುದ್ದಿ,  ಗೋಕಾಕ್: ಪ್ರಧಾನಿ ನರೇಂದ್ರ ಮೋದಿ ಅವರು ರಾಮಜನ್ಮ ಭೂಮಿ ವಿವಾದ ಸುಸೂತ್ರವಾಗಿ ಬಗೆಹರಿಯಲು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಉಪ್ಪಾರಟ್ಟಿ ಗ್ರಾಮದ ಶ್ರೀ ಸಿದ್ಧಾರೂಡನ ಮಠದ ಶ್ರೀ ನಾಗೇಶ್ವರ ಸ್ವಾಮೀಜಿ ಹೇಳಿದರು.
ಅವರು ಗುರುವಾರದಂದು ಸಂಜೆ ತಾಲೂಕಿನ ಉಪ್ಪಾರಟ್ಟಿ ಗ್ರಾಮದಲ್ಲಿ ಸಚಿವ ರಮೇಶ ಜಾರಕಿಹೊಳಿ, ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಹಾಗೂ ಸಚಿವರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡ್ರ ಅವರ ನೇತ್ರತ್ವದಲ್ಲಿ ಉಪ್ಪಾರಟ್ಟಿ ಗ್ರಾಮದ ಯುವ ಧುರೀಣ ಹನಮಂತ ದುರ್ಗನ್ನವರ ಅವರ ಅಭಿಮಾನಿಗಳು ನರೇಂದ್ರ ಮೋದಿ ಅವರ 70 ನೇ ಜನ್ಮ ದಿನಾಚರಣೆ ಅಂಗವಾಗಿ ಬೃಹತ್ ಬ್ಯಾನರ್ ಅಳವಡಿಸಿ, ಸಿಹಿ ಹಂಚಿ, ನರೇಂದ್ರ ಮೋದಿ ಅವರ ಹೂ ಹಾರ ಹಾಕಿ ಜನ್ಮ ದಿನ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನರೇಂದ್ರ ಮೋದಿಯವರು ದೇಶಕ್ಕೆ ನೀಡಿದ ಸಾಧನೆ ದೊಡ್ಡದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದಾರೆ. ವಿಶ್ವದ ದೊಡ್ಡಣ್ಣ ಎನಿಸಿಕೊಳ್ಳುವ ಅಮೆರಿಕ ಸಹಿತ ಮೋದಿ ಮೋಡಿಗೆ ಒಳಗಾಗಿದ್ದು, ಭಾರತವಿಂದು ವಿಶ್ವಕ್ಕೆ ಗುರುವಾಗಿದೆ’ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಲಕ್ಕಪ್ಪಾ ಕಡಕೋಳ.,ಹಣಮಂತ ಕಡಕೋಳ, ಶ್ರೀ ಕಾರಂತ ಹೂನಕುಪ್ಪಿ.ಬಸು ನೇಸರಗಿ ,ತೀಪ್ಪಣ ಕಡಕೋಳ, ಹಣಮಂತ ಕಿಚಡಿ, ಸಿದ್ದಪ್ಪ ಆಡಿನ, ಲಕ್ಕಪ್ಪಾ ಕಿಚಡಿ.,ಸಂತೋಷ ಚಿಗದನ್ನವರ,ದಶರಥ ಕಿಚಡಿ,ಯಲ್ಲಾಲಿಂಗ ಕಡಕೋಳ, ಮಹಾದೇವ ಬಂಡಿ, ಸಂತೋಷ ಕಡಕೋಳ, ರಾಮಣ್ಣ ಶಿರಸಂಗಿ, ಲಕ್ಕಪ್ಪ ಕಡಕೋಳ, ನಾರಾಯಣ ದುರ್ಗನ್ನವರ, ಸಿದ್ರಾಮ ಕಪರಟ್ಟಿ, ಸಿದ್ದಪ್ಪ ಬೂದಿಗೊಪ್ಪ, ದಶರಥ ಕಿಚಡಿ, ಗಜು ಕಂಕನವಾಡಿ, ಸಂತೋಷ ಕಂಕನವಾಡಿ, ರಾಮಸಿದ್ದ ಸೊಪ್ಪಡ್ಲ, ಶಿವಾನಂದ ಚಿಗಡೊಳ್ಳಿ, ಮಹಾಂತೇಶ ದುಗಟಿ, ಭೀಮಶಿ ಚಿಗದನ್ನವರ, ಸುಭಾಸ ಬಂಡಿ, ಬಸು ಚಿಗದನ್ನವರ, ದಾನೇಶ ಕಿಚಡಿ, ಚಿದಾನಂದ ಬಾಗೋಜಿ,ಬಾಳಯ್ಯ ಅಜ್ಜನವರ, ಮಹಾದೇವ ಚೂನನ್ನವರ, ನಾಗಪ್ಪ ಹರಿಜನ,ಬಸವರಾಜ ಭರಮನ್ನವರ ಸೇರಿದಂತೆ ಗ್ರಾಮಸ್ಥರು ಇದ್ದರು.


Spread the love

About Yuva Bharatha

Check Also

ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ ಪರಮ ಪೀಠಾಚಾರ್ಯರಾದ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರರ ಸಾನ್ನಿಧ್ಯದಲ್ಲಿ ಜಾತ್ರಾ ಮಹೋತ್ಸವ

Spread the loveಸಾಮಾಜಿಕ ಸೌಹಾರ್ದತೆ ಸಾರುವ ಶ್ರೀ ಉಜ್ಜಯಿನಿ ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ.! ಶ್ರೀ ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ …

Leave a Reply

Your email address will not be published. Required fields are marked *

9 + seventeen =