Breaking News

ಬೆಳಗಾವಿ ಬಿ.ವಿ..ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ಅಂತರ ಕಾಲೇಜು ಟೇಬಲ್ ಟೆನ್ನಿಸ್ ಪಂದ್ಯಾವಳಿ ಆಯೋಜನೆ

Spread the love

ಬೆಳಗಾವಿ ಬಿ.ವಿ..ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ಅಂತರ ಕಾಲೇಜು ಟೇಬಲ್ ಟೆನ್ನಿಸ್ ಪಂದ್ಯಾವಳಿ ಆಯೋಜನೆ

ಬೆಳಗಾವಿ :
ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹಾಗೂ ಕೆಎಲ್‌ಇ ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯಗಳ ವತಿಯಿಂದ ಮಂಗಳವಾರ ಅಂತರ ಕಾಲೇಜು ಟೇಬಲ್ ಟೆನ್ನಿಸ್ ಪಂದ್ಯಾವಳಿಯನ್ನು (ಪುರುಷ ಮತ್ತು ಮಹಿಳೆಯರು) ಆಯೋಜಿಸಿತ್ತು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಟೇಬಲ್ ಟೆನ್ನಿಸ್ ಸಂಸ್ಥೆ ಉಪಾಧ್ಯಕ್ಷರು ಮತ್ತು ಬೆಳಗಾವಿ ಜಿಲ್ಲಾ ಟೇಬಲ್ ಟೆನ್ನಿಸ್ ಸಂಸ್ಥೆ ಗೌರವ ಕಾರ್ಯದರ್ಶಿ ಸಂಗಮ ಬೈಲೂರು ಅವರು ಈ ಪಂದ್ಯಾವಳಿಯನ್ನು ಉದ್ಘಾಟಿಸಿದರು.
ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಖಾಲೀದ್ ಇವರು ಗೌರವ ಅತಿಥಿಗಳಾಗಿ ಆಗಮಿಸಿದ್ದರು. ಮಹಾವಿದ್ಯಾಲಯದ ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷರು ನ್ಯಾಯವಾದಿ ಆರ್. ಬಿ. ಬೆಲ್ಲದ ಅವರು ಅಧ್ಯಕ್ಷತೆ ವಹಿಸಿದ್ದರು.
ಈ ಸಂಧರ್ಭದಲ್ಲಿ ಮಾತನಾಡಿದ ಸಂಗಮ ಬೈಲೂರು ಅವರು ಕ್ರೀಡೆಯಲ್ಲಿ ಉತ್ತಮ ಮಟ್ಟವನ್ನು ಸಾಧಿಸುವ ಬಗ್ಗೆ ಕ್ರೀಡಾಪಟುಗಳಿಗೆ ಆರು ತಂತ್ರಗಳನ್ನು ನೀಡಿದರು. ಅವುಗಳೆಂದರೆ ಬೆಳಗ್ಗೆ ಬೇಗ ಏಳುವುದು, ಸೋಲಿನಿಂದ ಮೇಲೇಳುವುದು, ಯಶಸ್ವಿ ಜನರೊಂದಿಗೆ ಸ್ನೇಹ ಬೆಳಸಿಕೊಳ್ಳುವುದು, ಸರಿಯಾದ ಶಿಕ್ಷಣ ಪಡೆಯುವುದು, ಸಾಮಾಜಿಕ ಜೀವನವನ್ನು ತ್ಯಾಗ ಮಾಡುವುದು ಮತ್ತು ಕೋಪವನ್ನು ನಿಯಂತ್ರಿಸುವುದು ಎಂದು ಹೇಳಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.

ಡಾ.ಖಾಲೀದ್ ಬಿ ಖಾನ್, ಕ್ರೀಡಾಪಟುಗಳಿಗೆ ಸ್ಪರ್ದಾತ್ಮಕವಾಗಿ ಆಡಲು ಹರಸಿದರು.

ಆರ್. ಬಿ.ಬೆಲ್ಲದ ಕ್ರೀಡಾಪಟುಗಳನ್ನು ತಮ್ಮ ಮಾತಿನ ಮೂಲಕ ಹುರಿದುಂಬಿಸುತ್ತ ಉತ್ತಮ ತಂಡವು ಗೆಲ್ಲಲೆಂದು ಆಶಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ. ಜಯಸಿಂಹ ಪರಿಚಯಿಸಿ ಸ್ವಾಗತಿಸಿದರು, ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ರೀಚಾ ರಾವ್ ವಂದಿಸಿದರು. ಪವಿತ್ರಾತಾ ಪಾಟೀಲ ನಿರೂಪಿಸಿದರು.

on 25th July 2023 the Karnataka State Law University, Hubballi has organized Inter-collegiate Table Tennis Tournament (Men & Women) with KLE Society’s B.V. Bellad Law College, Belagavi as a host.
The Tournament was inaugurated by the Chief Guest, Shri Sangam Bailoor, Vice-President Karnataka State Table Tennis Association & Honorary Secretary, Belagavi District Table Tennis Association.
Dr. Khalid B. Khan, Director Physical Education, Karnataka State Law University, Hubballi was the Guest of Honour and Shri R.B. Bellad, Advocate & Chairman Local Governing Body of B.V. Bellad Law College, Belagavi has presided over the function.
Speaking on the occasion Shri Sangam Bailoor has encouraged the participants regarding how to achieve excellence level in sports. He gave six important tricks to achieve excellence viz., start early in the morning, fail and raise quickly, have friendship with successful people, get proper education, sacrifice social life and control your anger.
Dr. Khalid khan wished the participants play sportively and Shri R.B. Bellad, Advocate & Chairman Local Governing Body of B.V. Bellad Law College, Belagavi while encouraging the participants wished that the best team may win. Dr. B. Jayasimha Principal of the college introduced welcomed the guests. Dr. Smt. Richa Rao, Physical Director, B.V. Bellad Law College, Belagavi and Coordinator of the event proposed vote of thanks. Ms. Pavitrata Patil was the Anchor of the function.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

4 − 4 =