Breaking News

ರಾಮದುರ್ಗ : ನಿಟ್ಟುಸಿರು ಬಿಟ್ಟ ಬಿಜೆಪಿ !

ರಾಮದುರ್ಗ : ನಿಟ್ಟುಸಿರು ಬಿಟ್ಟ ಬಿಜೆಪಿ ! ಬೆಳಗಾವಿ : ರಾಮದುರ್ಗ ವಿಧಾನಸಭಾ ಮತಕ್ಷೇತ್ರದಲ್ಲಿ ಬಿಜೆಪಿ ಹಾದಿ ಸುಗಮವಾಗಿದೆ. ಬಿಜೆಪಿ ಅಧಿಕೃತ ಅಭ್ಯರ್ಥಿ ಚಿಕ್ಕ ರೇವಣ್ಣ ಅವರನ್ನು ವಿರೋಧಿಸಿ ನಾಮಪತ್ರ ಸಲ್ಲಿಸಿದ್ದ ಐವರು ಕೊನೆಗೂ ನಾಮಪತ್ರ ಹಿಂಪಡೆದುಕೊಂಡಿದ್ದಾರೆ. ರಾಮದುರ್ಗದ ಹಾಲಿ ಶಾಸಕ ಮಹದೇವಪ್ಪ ಯಾದವಾಡ, ಮಲ್ಲಣ್ಣ ಯಾದವಾಡ, ಪಿ.ಎಫ್. ಪಾಟೀಲ ಮುಂತಾದವರು ಕೊನೆಗೂ ನಾಮಪತ್ರ ಹಿಂಪಡೆಯುವ ನಿರ್ಧಾರ ಮಾಡಿದ್ದಾರೆ. ಇದರಿಂದಾಗಿ ಬಿಜೆಪಿಯ ಅಧಿಕೃತ ಅಭ್ಯರ್ಥಿಯ ತಲೆನೋವು ತುಸು ಕಡಿಮೆಯಾದಂತಾಗಿದೆ.

Read More »

ಬಡಿಗೇರರ ಭಾವ ಬಾಂದಳ ಕವನ ಸಂಕಲನ ಲೋಕಾರ್ಪಣೆ

ಬಡಿಗೇರರ ಭಾವ ಬಾಂದಳ ಕವನ ಸಂಕಲನ ಲೋಕಾರ್ಪಣೆ ಇಟಗಿ : ಇಟಗಿ ಗ್ರಾಮದ ಖಾನಾಪುರ ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ವಿ.ವಿ.ಬಡಿಗೇರ ಅವರ ಮೂರನೇ ಕವನ ಕಾದರವಳ್ಳಿಯ ಶ್ರೀ ಅದೃಶ್ಯಾನಂದಾಶ್ರಮ ಸೀಮೀಮಠದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಮೂರನೇ ಕವನ ಸಂಕಲನ ಭಾವ ಬಾಂದಳವನ್ನು ಶ್ರೀ ಅದೃಶ್ಯಾನಂದಾಶ್ರಮ ಸೀಮೀಮಠದ ಡಾ.ಶ್ರೀ ಪಾಲಾಕ್ಷ ಶಿವಯೋಗೀಶ್ವರರು ಲೋಕಾರ್ಪಣೆಗೊಳಿಸಿದರು. ರುದ್ರಪ್ಪ ಹುಣಶೀಕಟ್ಟಿ, ಬಸವರಾಜ ನಾವಲಗಟ್ಟಿ, ಮಹಾರುದ್ರ ಬೈಲವಾಡ ಹಾಗೂ ಇತರರು ಉಪಸ್ಥಿತರಿದ್ದರು.

Read More »

ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ ಕಡಾಡಿ ವಿರುದ್ಧ ಗ್ರಾಮಸ್ಥರು ಬೀದಿಗಿಳಿದದ್ದು ಯಾಕೆ ?

ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ ಕಡಾಡಿ ವಿರುದ್ಧ ಗ್ರಾಮಸ್ಥರು ಬೀದಿಗಿಳಿದದ್ದು ಯಾಕೆ ? ಗೋಕಾಕ : ಗೋಕಾಕ ಮತಕ್ಷೇತ್ರದ ರಾಜನಗಟ್ಟಿ, ಕಡಬಗಟ್ಟಿ ಮತ್ತು ಗಡ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ಅಪಪ್ರಚಾರ ನಡೆಸಿದ್ದ ಕಾಂಗ್ರೆಸ್ ಅಭ್ಯರ್ಥಿ ಡಾ. ಮಹಾಂತೇಶ ಕಡಾಡಿ ಅವರ ವಿರುದ್ಧ ಈ ಗ್ರಾಮಗಳ ನಾಗರಿಕರು ಇದೀಗ ಸಿಡಿದೆದ್ದಿದ್ದಾರೆ. ಚುನಾವಣಾ ಪ್ರಚಾರದ ಭರಾಟೆಯಲ್ಲಿ ಮಹಾಂತೇಶ ಕಡಾಡಿ ಅವರು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ ಎಂದು ಅಪಪ್ರಚಾರ ನಡೆಸಿದ್ದಾರೆ, ಈ …

Read More »

ಎರಡನೇ ವಿಶ್ವಯುದ್ದದ ವೇಳೆ ಸಾವಿರ ಜನ ಮೃತಪಟ್ಟಿದ್ದ ಹಡಗು ಸಮುದ್ರದಲ್ಲಿ ಪತ್ತೆ

ಎರಡನೇ ವಿಶ್ವಯುದ್ದದ ವೇಳೆ ಸಾವಿರ ಜನ ಮೃತಪಟ್ಟಿದ್ದ ಹಡಗು ಸಮುದ್ರದಲ್ಲಿ ಪತ್ತೆ ಯುವ ಭಾರತ ಸುದ್ದಿ ಬೀಜಿಂಗ್ : ಎರಡನೇ ವಿಶ್ವಯುದ್ಧದ ವೇಳೆ ಸಮುದ್ರದಲ್ಲಿ ಮುಳುಗಿ 864 ಜನ ಆಸ್ಟ್ರೇಲಿಯಾ ಯುದ್ಧ ಕೈದಿಗಳು ಸೇರಿ ಸಾವಿರ ಜನ ಪಟ್ಟಿದ್ದ ಜಪಾನಿನ ಹಡಗು ದಕ್ಷಿಣ ಸಮುದ್ರದ ಆಳದಲ್ಲಿ ಪತ್ತೆಯಾಗಿದೆ. 1942 ರ ಜುಲೈನಲ್ಲಿ ಫಿಲಿಪೈನ್ಸ್ ನ ಕರಾವಳಿಯಲ್ಲಿ ಮುಳುಗಿದ ಬಳಿಕ ಕಾಣೆಯಾಗಿದ್ದ ಎಸ್ ಎಸ್ ಮಾಂಟೆವಿಡಿಯೊ ಮಾರು ಹಡಗು ಸಮುದ್ರದ 13123 …

Read More »

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಗೆ ಹುಟ್ಟುಹಬ್ಬ

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಗೆ ಹುಟ್ಟುಹಬ್ಬ ಯುವ ಭಾರತ ಸುದ್ದಿ ಮುಂಬೈ : ಕ್ರಿಕೆಟ್ ದೇವರು ಎಂದೇ ಜನಮಾನಸದಲ್ಲಿ ಗುರುತಿಸಲ್ಪಡುವ ಸಚಿನ್ ತೆಂಡೂಲ್ಕರ್ ಅವರಿಗೆ ಇಂದು ಜನ್ಮದಿನ. 1973 ರಲ್ಲಿ ಅವರು ಇದೇ ದಿನ ಮುಂಬೈಯಲ್ಲಿ ಜನಿಸಿದ್ದರು. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ 18000 ಮತ್ತು 15,000 ಗಳಿಸಿ ಸಾಧನೆ ಮಾಡಿದ್ದಾರೆ. 2012ರಿಂದ 2018ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದ ಸಚಿನ್ ತೆಂಡೂಲ್ಕರ್ ಅವರಿಗೆ ಭಾರತ ರತ್ನ ಸಿಕ್ಕಿದೆ. 16 …

Read More »

26 ಕ್ಕೆ ರಾಜ್ಯಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್

26 ಕ್ಕೆ ರಾಜ್ಯಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಯುವ ಭಾರತ ಸುದ್ದಿ ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಕಣ ರಂಗೇರಿದ್ದು, ಮೂರು ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಏ.26 ರಂದು ಬಿಜೆಪಿ ಪರವಾಗಿ ಪ್ರಚಾರ ನಡೆಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯಕ್ಕೆ ಎಂಟ್ರಿ ಕೊಡಲಿದ್ದಾರೆ. ರಾಜ್ಯಕ್ಕೆ ಭೇಟಿ ನೀಡಲಿರುವ ಯೋಗಿ ಆದಿತ್ಯನಾಥ್, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪ್ರಚಾರ ನಡೆಸಲಿದ್ದಾರೆ. …

Read More »

ನಾಮಪತ್ರ ವಾಪಾಸ್ ಗೆ ಇಂದೇ ಕೊನೆಯ ದಿನ

ನಾಮಪತ್ರ ವಾಪಾಸ್ ಗೆ ಇಂದೇ ಕೊನೆಯ ದಿನ ಯುವ ಭಾರತ ಸುದ್ದಿ ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಲ್ಲಿಸಿರುವ ನಾಮಪತ್ರ ವಾಪಸ್ ಪಡೆಯಲು ಸೋಮವಾರ ಕಡೆಯ ದಿನವಾಗಿದೆ. ನಾಮಪತ್ರ ಸಲ್ಲಿಸಿರುವ ಎಷ್ಟು ಜನ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿಯುತ್ತಾರೆ, ಅಂತಿಮವಾಗಿ ಕಣದಲ್ಲಿ ಎಷ್ಟು ಜನ ಉಳಿಯುತ್ತಾರೆ ಎಂಬ ಸ್ಪಷ್ಟ ಚಿತ್ರಣ ಸಂಜೆ ಗೊತ್ತಾಗಲಿದೆ. ರಾಜ್ಯದ 224 ವಿಧಾನಸಭಾ ಮತಕ್ಷೇತ್ರ ಗಳಿಗೆ 3632 ಅಭ್ಯರ್ಥಿಗಳು ಸಲ್ಲಿಸಿದ ನಾಮಪತ್ರಗಳ ಪೈಕಿ ಚುನಾವಣಾ …

Read More »

ಛೇ..ಕೈ ಅಭ್ಯರ್ಥಿಗೆ ಇಂತಹ ಪರಿಸ್ಥಿತಿ ಬಂದಿದ್ದೇಕೆ !?

ಛೇ..ಕೈ ಅಭ್ಯರ್ಥಿಗೆ ಇಂತಹ ಪರಿಸ್ಥಿತಿ ಬಂದಿದ್ದೇಕೆ !? ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಇಂತಹ ಪರಿಸ್ಥಿತಿ ಬರಬಾರದಿತ್ತು ಎನ್ನುತ್ತಾರೆ ಕ್ಷೇತ್ರದ ಮತದಾರರು. ಇದೀಗ ಎಲ್ಲೆಡೆ ಚುನಾವಣಾ ಪ್ರಚಾರ ಜೋರಾಗಿ ನಡೆದಿದೆ. ಆದರೆ ಗ್ರಾಮೀಣ ಅಭ್ಯರ್ಥಿಗೆ ಈಗ ಮತದಾರರ ಒಲವು ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಹಾರ-ತುರಾಯಿಗಳಿಗೆ ತಾವೇ ಹಣ ಕೊಟ್ಟು ಸಣ್ಣ ಸತ್ಕಾರ ಮಾಡಿಸಿಕೊಳ್ಳುವ ದುಸ್ಥಿತಿ ಎದುರಾಗಿದೆ. ಸಣ್ಣ ಊರುಗಳಾದರೆ ₹ 30,000, …

Read More »

ಕಪ್ಪೆ ಚಿಪ್ಪು ಹೆಕ್ಕಲು ಹೋಗಿದ್ದ ನಾಲ್ವರು ಸಾವು

ಕಪ್ಪೆ ಚಿಪ್ಪು ಹೆಕ್ಕಲು ಹೋಗಿದ್ದ ನಾಲ್ವರು ಸಾವು ಯುವ ಭಾರತ ಸುದ್ದಿ ಉಡುಪಿ: ಬ್ರಹ್ಮಾವರ ಸಮೀಪದ ಹೂಡೆಯ ಕಿಣಿಯಾರ ಕುದ್ರುವಿನಲ್ಲಿ (ಹೊಳೆ) ಭಾನುವಾರ ಕಪ್ಪೆ ಚಿಪ್ಪು ಹೆಕ್ಕಲು ಹೋಗಿದ್ದ ನಾಲ್ವರು ನೀರು ಪಾಲಾಗಿದ್ದಾರೆ. 7 ಜನ ನದಿಗೆ ಇಳಿದಿದ್ದಾರೆ. ಅವರು ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ನಾಲ್ವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ಉಳಿದ ಮೂವರು ದಡ ಸೇರಿದ್ದಾರೆ. ಮೂವರ ಶವ ಪತ್ತೆಯಾಗಿದ್ದು ಒಬ್ಬರ ಶೋಧ ಕಾರ್ಯ …

Read More »

ನಾಳೆ ರಾಮದುರ್ಗಕ್ಕೆ ರಾಹುಲ್ ಗಾಂಧಿ !

ನಾಳೆ ರಾಮದುರ್ಗಕ್ಕೆ ರಾಹುಲ್ ಗಾಂಧಿ ! ಯುವ ಭಾರತ ಸುದ್ದಿ ಬೆಳಗಾವಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಬೆಳಗಾವಿ ಜಿಲ್ಲೆಯ ರಾಮದುರ್ಗಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ರಾಮದುರ್ಗದಲ್ಲಿ ಅವರು ಕಬ್ಬು ಬೆಳೆಗಾರರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ರಾಮದುರ್ಗ ಮತ ಕ್ಷೇತ್ರದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಆಲಿಸುವರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಿಷ್ಯ ಅಶೋಕ ಪಟ್ಟಣ ಅವರ …

Read More »