Breaking News

ಕುಕಡೊಳ್ಳಿ ಸದ್ಗುರು ಶ್ರೀ ಚೆನ್ನಮಲ್ಲಯ್ಯಜ್ಜನವರ 73 ನೇ ಪುಣ್ಯಸ್ಮರಣೋತ್ಸವದ ವೇದಾಂತ ಪರಿಷತ್‌ನ ಕಾರ್ಯಕ್ರಮ

Spread the love

ಕುಕಡೊಳ್ಳಿ ಸದ್ಗುರು ಶ್ರೀ ಚೆನ್ನಮಲ್ಲಯ್ಯಜ್ಜನವರ 73 ನೇ ಪುಣ್ಯಸ್ಮರಣೋತ್ಸವದ ವೇದಾಂತ ಪರಿಷತ್‌ನ ಕಾರ್ಯಕ್ರಮ

ಯುವ ಭಾರತ ಸುದ್ದಿ ಇಟಗಿ :
ಮಕ್ಕಳನ್ನು ಒಳ್ಳೆಯ ವ್ಯಕ್ತಿಗಳನ್ನಾಗಿಸಲು ಆಚಾರ-ವಿಚಾರಗಳನ್ನು ಕಲಿಸಿಕೊಡಬೇಕೆಂದು ಪಾರಿಶ್ವಾಡ ವೇದಮೂರ್ತಿ ಶ್ರೀ ಗುರುಸಿದ್ದಯ್ಯ ಕಲ್ಮಠ ಸ್ವಾಮಿಗಳು ಅಭಿಪ್ರಾಯಪಟ್ಟರು.
ಕುಕಡೊಳ್ಳಿಯ ಸದ್ಗುರು ಶ್ರೀ ಚೆನ್ನಮಲ್ಲಯ್ಯಜ್ಜನವರ 73 ನೇ ಪುಣ್ಯಸ್ಮರಣೋತ್ಸವದ ವೇದಾಂತ ಪರಿಷತ್‌ನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳಿಗೆ ಆಸ್ತಿ ಮಾಡದೇ, ಅವರಿಗೆ ಉತ್ತಮ ಶಿಕ್ಷಣ ನೀಡಿ ಅವರೇ ಆಸ್ತಿಯನ್ನಾಗಿಸಿ. ಸಮಾಜ ಗುರುತಿಸುವಂತ ಮಕ್ಕಳನ್ನು ನೀಡಿ. ಅವರಿಗೆ ಮಹಾಪುರುಷರ ತತ್ವಾದರ್ಶ, ನೀತಿ ಪಾಠಗಳನ್ನು ಕಲಿಸಿ ಎಂದರು.

ಚಿಕ್ಕಮುನವಳ್ಳಿಯ ಶ್ರೀ ಶಿವಪುತ್ರ ಶ್ರೀಗಳು ಆಶೀರ್ವಚನ ನೀಡಿದರು. ಹೂಲಿಕಟ್ಟಿಯ ಶ್ರೀ ಲಿಂಗಾನಂದ ಪ್ರಭುಗಳು, ಕುಕಡೊಳ್ಳಿಯ ಶ್ರೀ ಅಭಿನವಚೆನ್ನಮಲ್ಲಯ್ಯ ಮಹಾಸ್ವಾಮೀಜಿ, ಮಹಾಂತೇಶ ಒಡ್ಡಿನ, ಈರಪ್ಪ ಮರಕಟ್ಟಿ, ಚಂದ್ರು ಇಟಗಿ, ತಾಯಪ್ಪ ಸಾರಾವರಿ, ಪಕ್ಕೀರ ಹುಡೇದ, ಲಕ್ಷ್ಮಣ ಮೆಟ್ಟಿನ, ಮಾರುತಿ ಸಾರಾವರಿ ಹಾಗೂ ಇತರರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

two × 5 =