ಗೋಕಾಕನಲ್ಲಿ ಮರಾಠಾ ಸಮಾಜಕ್ಕೆ 6 ಗುಂಟೆ ಜಾಗ ನೀಡಿದ ರಮೇಶ ಜಾರಕಿಹೊಳಿ

ಯುವ ಭಾರತ ಸುದ್ದಿ ಬೆಳಗಾವಿ :
ಗೋಕಾಕ ನಗರದಲ್ಲಿ ಮರಾಠಾ ಸಮಾಜದ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಲು ಪೂರಕವಾಗಿ 6 ಗುಂಟೆ ಜಾಗವನ್ನು ನೀಡುವುದಾಗಿ ಶಾಸಕ ರಮೇಶ ಜಾರಕಿಹೊಳಿ ಘೋಷಣೆ ಮಾಡಿ ಪತ್ರ ನೀಡಿರುವುದನ್ನು ಸಕಲ ಮರಾಠಾ ಸಮಾಜ ಅಭಿನಂದಿಸಿದೆ.
ಗೋಕಾಕನಲ್ಲಿ ಭಾನುವಾರ ನಡೆದ ಕರ್ನಾಟಕ ಕ್ಷತ್ರಿಯ ಮರಾಠಾ ಸಮಾಜದ ಸಮಾವೇಶದಲ್ಲಿ ರಮೇಶ ಜಾರಕಿಹೊಳಿ ಅವರು ಈ ಘೋಷಣೆ ಮಾಡಿ ಪತ್ರ ನೀಡಿದ್ದಾರೆ.
ಮರಾಠಾ ಸಮಾಜದ ಶ್ರೀ ಮಂಜುನಾಥ ಸ್ವಾಮೀಜಿ,
ಅರಬಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಸಕಲ ಮರಾಠಾ ಸಮಾಜದ ಸಂಯೋಜಕ ಕಿರಣ ಜಾಧವ, ವಕೀಲರ ಸಂಘದ ರಾಜ್ಯ ಉಪಾಧ್ಯಕ್ಷ ವಿನಯ
ಮಾಂಗಳೇಕರ, ಗೋಕಾಕ ಮರಾಠಾ ಸಮಾಜದ ಮುಖಂಡ ಜಿತೇಂದ್ರ ಮಾಂಗಳೇಕರ ಅವರ ಸಮ್ಮುಖದಲ್ಲಿ ರಮೇಶ ಜಾರಕಿಹೊಳಿಯವರು ಪತ್ರವನ್ನು ನೀಡಿದ್ದಾರೆ.
ಮರಾಠಾ ಸಮಾಜದ ಶ್ರೇಯೋಭಿವೃದ್ಧಿಗೆ ಜಾಗ ನೀಡಿದ ಹಿನ್ನಲೆಯಲ್ಲಿ ಶಾಸಕ ರಮೇಶ ಜಾರಕಿಹೊಳಿಯವರನ್ನು ಶ್ರೀ ಮಂಜುನಾಥ ಸ್ವಾಮೀಜಿ ಹಾಗೂ ಮರಾಠಾ ಸಮಾಜದ ಸಂಯೋಜಕ ಕಿರಣ ಜಾಧವ ಅಭಿನಂದಿಸಿದ್ದಾರೆ. ಅವರು ನೀಡಿರುವ ಬೆಂಬಲಕ್ಕೆ ಸದಾ ಚಿರಋಣಿಯಾಗಿರುವುದಾಗಿ ತಿಳಿಸಿದ್ದಾರೆ.
YuvaBharataha Latest Kannada News