Breaking News

ಘನತ್ಯಾಜ್ಯ ನಿರ್ವಹಣಾ ಸೇವಾಶುಲ್ಕ ವಿನಾಯಿತಿ

Spread the love

ಘನತ್ಯಾಜ್ಯ ನಿರ್ವಹಣಾ ಸೇವಾಶುಲ್ಕ ವಿನಾಯಿತಿ: ಪಾಲಿಕೆ ಆಯುಕ್ತ ಜಗದೀಶ್

ಬೆಳಗಾವಿ, ಜುಲೈ 27: ಕೋವಿಡ್ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ನಾಗರಿಕರು ಘನತ್ಯಾಜ್ಯ ನಿರ್ವಹಣೆ ಸೇವಾಶುಲ್ಕ ಭರಿಸುವುದಕ್ಕೆ ವಿನಾಯಿತಿ ನೀಡಲು ಪಾಲಿಕೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಅನುಮೋದನೆ ನೀಡಿದ್ದಾರೆ ಎಂದು ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ.ಎಚ್. ತಿಳಿಸಿದ್ದಾರೆ

ಒಂದು ವೇಳೆ ಯಾರಾದಾರೂ ಸೇವಾಶುಲ್ಕ ಪಾವತಿಸಿದ್ದಲ್ಲಿ ಮುಂದಿನ ವರ್ಷದಲ್ಲಿ ಅದನ್ನು ಮರುಹೊಂದಾಣಿಕೆ ಮಾಡಿಕೊಳ್ಳಲು ಪಾಲಿಕೆಯ ಆಡಳಿತಾಧಿಕಾರಿಗಳು ಅನುಮೋದಿಸಿರುತ್ತಾರೆ.

ಕೋವಿಡ್-19 ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಹಾಗೂ ಲಾಕ್ ಡೌನ್ ಜಾರಿಯಿಂದ ಸಾರ್ವಜನಿಕರಿಗೆ ಘನತ್ಯಾಜ್ಯ ನಿರ್ವಹಣೆ ಸೇವಾಶುಲ್ಕ ಭರಿಸಲು ತೊಂದರೆಯಾಗುತ್ತಿದೆ ಎಂಬುದನ್ನು ಮನಗಂಡು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು, ಮಾನ್ಯ ಕೇಂದ್ರ ರೇಲ್ವೆ ಸಚಿವರ ನಿರ್ದೇಶನಂತೆ ಹಾಗೂ ಬೆಳಗಾವಿ ದಕ್ಷಿಣ, ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರ, ಜನಪ್ರತಿನಿಧಿಗಳ ಕೋರಿಕೆ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಗಳು ಪ್ರಸಕ್ತ ವರ್ಷ ಸೇವಾಶುಲ್ಕಕ್ಕೆ ವಿನಾಯಿತಿ ನೀಡಿರುತ್ತಾರೆ.

ಈಗಾಗಲೇ ಭರಿಸಲಾಗಿರುವ “ಘನತ್ಯಾಜ್ಯ ನಿರ್ವಹಣೆ ಸೇವಾಶುಲ್ಕ”ವನ್ನು ಮುಂದಿನ ವರ್ಷಕ್ಕೆ ಹೊಂದಾಣಿಕೆ ಮಾಡಿಕೊಡಲಾಗುತ್ತದೆ ಎಂದು ಪಾಲಿಕೆ ಆಯುಕ್ತರಾದ ಜಗದೀಶ್ ಕೆ‌.ಎಚ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
***


Spread the love

About Yuva Bharatha

Check Also

ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್-ಮಾಜಿ ಶಾಸಕ ಸಂಜಯ ಪಾಟೀಲ.!

Spread the loveನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.! ಯುವಭಾರತ ಸುದ್ದಿ ಬೆಳಗಾವಿ: ನಾನು …

Leave a Reply

Your email address will not be published. Required fields are marked *

5 × 5 =