Breaking News

ಧಾರ್ಮಿಕ ಶಿಕ್ಷಣ ಇಂದಿನ ಅಗತ್ಯ : ಕಿರಣ ಜಾಧವ

Spread the love

ಧಾರ್ಮಿಕ ಶಿಕ್ಷಣ ಇಂದಿನ ಅಗತ್ಯ : ಕಿರಣ ಜಾಧವ

ಯುವ ಭಾರತ ಸುದ್ದಿ ಬೆಳಗಾವಿ :
ಇಲ್ಲಿನ ಮಜಗಾವಿ ರತ್ನತ್ರಯ ನಗರದಲ್ಲಿರುವ ಶ್ರೀ 1008 ಭಗವಾನ್ ದಿಗಂಬರ ಜೈನ ಬಸದಿಯಲ್ಲಿ ಶ್ರೀ ಸಿದ್ಧಚಕ್ರ ಆರಾಧನಾ ಮಹಾಮಂಡಲ ವಿಧಾನ ಮಹೋತ್ಸವ ನಡೆಯುತ್ತಿದೆ. ಫೆ.27ರಂದು ಆರಂಭವಾದ ಉತ್ಸವ ಮಾರ್ಚ್ 7ರವರೆಗೆ ನಡೆಯಲಿದೆ.

ಬಿಜೆಪಿ ಧುರೀಣ ಕಿರಣ ಜಾಧವ ಅವರು ಈ ಉತ್ಸವದಲ್ಲಿ ಪಾಲ್ಗೊಂಡು ಸ್ವಾಮೀಜಿಯವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಕಿರಣ ಜಾಧವ ಅವರಿಗೆ ಸ್ವಾಮೀಜಿ, ಜನ ಕಲ್ಯಾಣ ಕಾರ್ಯ ಮಾಡುವಂತಾಗಲಿ, ನಿಮ್ಮ ರಾಜಕೀಯ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಕೋರಿದರು.

ಕಿರಣ ಜಾಧವ ಮಾತನಾಡಿ, ಮನುಷ್ಯನಿಗೆ ಜೀವನೋಪಾಯಕ್ಕೆ ಕರ್ಮ, ಮೋಕ್ಷಕ್ಕಾಗಿ ಧರ್ಮ ಬೇಕು. ಇದಕ್ಕಾಗಿ ಮನುಷ್ಯ ಸತ್ಕಾರ್ಯಗಳನ್ನು ಮಾಡುವುದು ಮತ್ತು ಧರ್ಮವನ್ನು ಅನುಸರಿಸುವುದು ಅವಶ್ಯಕ. ಅಶಿಕ್ಷಿತ ಮತ್ತು ಸಂಸ್ಕಾರವಿಲ್ಲದ ವ್ಯಕ್ತಿಯು ನಿಷ್ಪ್ರಯೋಜಕನಾಗುತ್ತಾನೆ. ಪ್ರತಿಯೊಬ್ಬರೂ ತಮ್ಮ ಜೀವನ ನಡೆಸುವಾಗ ಧರ್ಮವನ್ನು ಪಾಲಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಸದಿಯ ಆಡಳಿತ ಮಂಡಳಿಯವರು ಹೂಮಾಲೆ, ಸ್ಮರಣಿಕೆ ನೀಡಿ ಗೌರವಿಸಿದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

six + 6 =